ಗದಗ-ಬೆಟಗೇರಿ ಸಂಸ್ಥೆಯ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದ ಕೋರ್ಸ್‌ನ ಕುರಿತು ಜಾಥಾ ಕಾರ್ಯಕ್ರಮ

 ಗದಗ-ಬೆಟಗೇರಿ ಸಂಸ್ಥೆಯ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದ ಕೋರ್ಸ್‌ನ ಕುರಿತು ಜಾಥಾ ಕಾರ್ಯಕ್ರಮ Jatha program on Gadag-Betageri Institute's Handloom and Textile Technology course

ಲೋಕದರ್ಶನ ವರದಿ 

ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ,  ನರಸಾಪೂರ,  

ಗದಗ 18 : ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪೂರ, ಬೆಟಗೇರಿ ಸಂಸ್ಥೆಯ ವತಿಯಿಂದ ಮೂರು ವರ್ಷದ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದ ಕೋರ್ಸ್‌ ಕುರಿತು ಜಾಥಾ ಕಾರ್ಯಕ್ರಮವನ್ನು ದಿನಾಂಕ:18-02-2026 ರಂದು ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪೂರ, ಗದಗ-ಬೆಟಗೇರಿಯಿಂದ  ಆಯೋಜಿಸಲಾಯಿತು. ಸಂಸ್ಥೆಯಿಂದ ಜಾಥಾವನ್ನು ಪ್ರಾರಂಭಿಸಿ ನರಸಾಪೂರ ನೇಕಾರ ಕಾಲೋನಿ ಜನರಿಗೆ ಕೋರ್ಸ್‌ನ ಕುರಿತು ಮಾಹಿತಿ ನೀಡಿ ನಂತರ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಪ್ರೌಢಶಾಲೆ, ನರಸಾಪೂರ ಸಂಸ್ಥೆಯ ಎಸ್‌.ಎಸ್‌.ಎಲ್‌.ಸಿ.ವಿದ್ಯಾರ್ಥಿಗಳಿಗೆ ಎಸ್‌.ಎಸ್‌.ಎಲ್‌.ಸಿ.ಯಲ್ಲಿ ಉತ್ತೀರ್ಣರಾದವರಿಗೆ ಮೂರು ವರ್ಷದ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದ ಕೋರ್ಸ್‌ ಮತ್ತು ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗ/ಐಟಿಐ/ಜವಳಿ ವಿಭಾಗದ ವೃತಿಪರ ಕೋರ್ಸ್‌ನಲ್ಲಿ ಉತ್ತೀರ್ಣರಾದವರಿಗೆ ನೇರವಾಗಿ ಲ್ಯಾಟರಲ್ ಎಂಟ್ರಿ ಮುಖಾಂತರ ದ್ವಿತೀಯ ವರ್ಷಕ್ಕೆ ಪ್ರವೇಶ ನೀಡಲಾಗುವುದು. ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮಾಸಿಕ ರೂ.2,500/- ರಂತೆ ಶಿಷ್ಯವೇತನ ನೀಡಲಾಗುವುದು ಮತ್ತು ಸರ್ಕಾರಿ ಇಲಾಖೆ ಹಾಗೂ ಪ್ರತಿಷ್ಠಿತ ಖಾಸಗಿ ಕೈಗಾರಿಕೆಗಳಲ್ಲಿ ವಿಪುಲ ಉದ್ಯೋಗಾವಕಾಶ ಇರುವ ಬಗ್ಗೆ ಎಸ್‌.ಎಸ್‌.ಎಲ್‌.ಸಿ. ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ.ಸುಮಲತ.ಡಿ. ಇವರು ಮಾಹಿತಿ ನೀಡಿದರು ಮತ್ತು ಮೆರವಣಿಗೆಯ ಮೂಲಕ ಕಾಲೇಜಿಗೆ ಆಗಮಿಸಿದರು. ಈ ಸಂದರ್ಭದಲ್ಲಿ  ಸುಮಲತ.ಡಿ. ಜಂಟಿ ನಿರ್ದೇಶಕರು/ಪ್ರಾಂಶುಪಾಲರು ಹಾಗೂ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಮತ್ತು ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.