ಇಂಫಾಲ್, ನ 29-ಜಪಾನ್ ಪ್ರಧಾನ ಮಂತ್ರಿ ಶಿಂಜೋ ಅಬೆ ಅವರು ಮುಂದಿನ ತಿಂಗಳು ಭಾರತಕ್ಕೆ ಅದರಲ್ಲೂ ವಿಶೇಷವಾಗಿ ಇಂಫಾಲ್ ಗೆ ಭೇಟಿ ನೀಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಶಿಂಜೋ ಅಬೆ ನಡುವೆ ದ್ವಿಪಕ್ಷೀಯ ಮಾತುಕತೆ ಸಹ ನಡೆಯಲಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಇಂಫಾಲ್ ನಲ್ಲಿ ವಾಸ್ತವ್ಯ ಹೂಡಲಿದ್ದು ನಂತರ ಇಂಫಾಲ್ ಯುದ್ಧದ 75 ವರ್ಷದ ಸ್ಮರಣೆ ಅಂಗವಾಗಿ ಇಲ್ಲಿನ ಯುದ್ದ ಸ್ಮಾರಕಕ್ಕೂ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
ಮಣಿಪುರದ ರಾಜಧಾನಿ ಇಂಫಾಲ್ ಗೆ ಭೇಟಿ ನೀಡುತ್ತಿರುವ ಜಪಾನಿನ ಏಕೈಕ ಮತ್ತು ಮೊಟ್ಟ ಮೊದಲ ಪ್ರಧಾನಿ ಎಂಬ ಕೀರ್ತಿಗೂ ಅವರು ಭಾಜನರಾಗಲಿದ್ದಾರೆ . ಡಿಸೆಂಬರ್ 15 ರ ವೇಳೆಗೆ ಅವರು ಭೇಟಿ ನೀಡುವ ಸಂಭವವಿದೆ.