ಉಗಾರದಲ್ಲಿ ಜನಶಕ್ತಿ ಸೇವಾ ಸಂಘ ಉದ್ಘಾಟನೆ
Janshakti Seva Sangha inaugurated in Ugara
ಲೋಕದರ್ಶನ ವರದಿ
ಕಾಗವಾಡ 22: ಜನಶಕ್ತಿ ಸೇವಾ ಸಂಘವು ದೇಶದಲ್ಲಿ ಹಾಗೂ ರಾಜ್ಯದಲ್ಲಿ ಮಾದರಿ ಸಂಘವಾಗಲ್ಲಿ ಎಂದು ಉಗಾರ ಶುಗರ್ಸ ಕಾರ್ಖಾನೆಯ ಜನರಲ್ ಮ್ಯಾನೇಜರ್ ಅನಂತ ಸಿದ್ದಾಂತಿ ಶುಭ ಹಾರೈಸಿದರು.
ಅವರು ರವಿವಾರ ದಿ. 19 ರಂದು ತಾಲೂಕಿನ ಉಗಾರ ಖುರ್ದ ಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಜನಶಕ್ತಿ ಸೇವಾ ಸಂಘದ ಉದ್ಘಾಟನೆಯನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನೆರವೇರಿಸಿ, ಮಾತನಾಡುತ್ತಿದ್ದರು. ಸಂಘವು ಜನರ ಶಕ್ತಿ, ದೇಶದ ಶಕ್ತಿಯಾಗಲಿ. ಉಗಾರ ಖುರ್ದ ಪಟ್ಟಣದ ಮತ್ತು ಸುತ್ತಮುತ್ತಲಿನ ಜನರಿಗೆ, ನೊಂದ, ನಿರ್ಗತಿಕರಿಗೆ ಅನುಕೂಲವಾಗಲಿ. ಹಾಗೂ ಕಾನೂನು ಚೌಕಟ್ಟಿನಲ್ಲಿ ಈ ಸಂಘ ಸ್ಪಂದಿಸಲಿ ಎಂದರು. ಅತಿಥಿಗಳಾಗಿ ಅಥಣಿ ನ್ಯಾಯವಾದಿ ರಾಘವೇಂದ್ರ ಹಳಿಂಗಳಿ ಮಾತನಾಡುತ್ತ, ಕಾನೂನು ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಇಲ್ಲಿ ಮೇಲು-ಕೀಳು ಎಂಬ ಭೇದವಿಲ್ಲದೆ ಎಲ್ಲರೂ ಕೂಡಿಕೊಂಡು ಸಂಘವನ್ನು ಬೆಳೆಸಬೇಕು. ಸಂಘದ ನೇತ್ರತ್ವ ವಹಿಸಿರುವ ಕಾಗವಾಡ ಮತಕ್ಷೇತ್ರ ಯುವನಾಯಕ ನ್ಯಾಯವಾದಿ ರಾಹುಲ ಕಟಗೇರಿಯವರು ಚಿಕ್ಕವಯಸ್ಸಿನಲ್ಲೇ ಸಮಾಜ ಸೇವೆಯಲ್ಲಿ ತೊಡಗಿಕೊಂಡು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನ್ಯಾಯವಾದಿ ವಿಜಯ ದೇಸಾಯಿ, ಹಿರಿಯರಾದ ವಿರಭದ್ರ ಕಟಗೇರಿ, ವಿನಾಯಕ ಕಾಂಬಳೆ, ರಾಜು ಯಶವಾಡೆ, ದಾವಲಮಲಿಕ ಜಮಖಾನೆ, ಹಾರೂಣ ಮುಲ್ಲಾ, ಶಾನೂರ ಜಮಖಾನೆ, ದೀಲೀಪ್ ಕಾಂಬಳೆ, ಹಾಜಿಸಾಬ ಶೇಖ, ತೋಪೇಲಹ್ಮದ ಮುಜಾವರ, ಮುಬಾರಕ ನದಾಪ, ಕುಮಾರ ಯಾದವ, ಜೈನುದಿನ ಇನಾಮದಾರ, ಚಂದ್ರಕಾಂತ ಶೆಟ್ಟಿ, ರಾಮಾ ಕಾಂಬಳೆ ಸೇರಿದಂತೆ ಪಟ್ಟಣದ ನಾಗರಿಕರು, ಇತರರು ಉಪಸ್ಥಿತರಿದ್ದರು.ನ್ಯಾಯವಾದಿ ರಾಹುಲ ಕಟಗೇರಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್ 