ಜಮಖಂಡಿ ಪೋಲಿಸರು ಭರ್ಜರಿ ಬೇಟೆ: ಕಳ್ಳನ ಬಂಧನ ಸುಮಾರು 10 ಲಕ್ಷ ಕಿಮ್ಮತ್ತಿನ, ವಿವಿಧ ಕಂಪನಿಯ ಒಟ್ಟು 22 ಮೋಟಾರ ಸೈಕಲ್ ವಶ
Jamkhandi police conduct massive manhunt: Thief arrested, 22 motorcycles worth Rs 10 lakh seized
ಜಮಖಂಡಿ ಪೋಲಿಸರು ಭರ್ಜರಿ ಬೇಟೆ: ಕಳ್ಳನ ಬಂಧನ ಸುಮಾರು 10 ಲಕ್ಷ ಕಿಮ್ಮತ್ತಿನ, ವಿವಿಧ ಕಂಪನಿಯ ಒಟ್ಟು 22 ಮೋಟಾರ ಸೈಕಲ್ ವಶ
ಜಮಖಂಡಿ 05: ಇಲ್ಲಿನ ಶಹರ ಪೋಲಿಸ್ ಠಾಣೆಯ ಪೋಲಿಸರು ಭರ್ಜರಿ ಬೇಟೆಯಾಡಿ ಅಂದಾಜು 10 ಲಕ್ಷ ಕಿಮ್ಮತ್ತಿನ, ವಿವಿಧ ಕಂಪನಿಯ ಒಟ್ಟು 22 ಮೋಟಾರ ಸೈಕಲ್‌ಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಇನಾಂ ಹಂಚಿನಾಳ (ಆರ್‌ಸಿಸೆಂಟರ್) ಗ್ರಾಮದಲ್ಲಿ ವಾಸವಾಗಿದ್ದ ಸಿದ್ದಪ್ಪ ಯಲ್ಲಪ್ಪ ಉಪ್ಪಲದಿನ್ನಿ ಆರೋಪಿಯನ್ನು ಸಂಶಯಾಸ್ಪದ ಮೇಲೆ ಬಂಧಿಸಲಾಗಿದ್ದು. ಆರೋಪಿಯು ಪೋಲಿಸರಿಗೆ ಬೈಕ್ ಕಳ್ಳತನ ಮಾಡಲು ಬಂದಿದ್ದಾರೆ ಎಂದು ಮಾಹಿತಿಯನ್ನು ನೀಡುತ್ತಿದ್ದು, ಪೋಲಿಸರು ಆತ ಹೇಳಿದ ಸ್ಥಳಕ್ಕೆ ಭೇಟಿ ನೀಡಿ ತನಿಖೆಯನ್ನು ಮಾಡುವ ಸಮಯದಲ್ಲಿ ಪೊಲೀಸರ ಗಮನವನ್ನು ಬೇರೆ ಕಡೆಗೆ ಸೆಳೆದು, ಪೋಲಿಸರು ಅಲ್ಲಿಂದ ಬೇರೆ ಕಡೆಗೆ ಹುಡುಕಾಟ ನಡೆಸಿದ ಬಳಿಕ ಆತನು ಅಲ್ಲಿದ್ದ ಬೈಕ್‌ಗಳನ್ನು ಕಳ್ಳತನ ಮಾಡುತ್ತಿರುವದು ತನಿಖೆಯಲ್ಲಿ ತಿಳಿದು ಬಂದಿರುತ್ತದೆ. ಸುಮಾರು ವಿವಿಧ ಕಂಪನಿಯ ಮೋಟರ್ ಬೈಕ್‌ಗಳನ್ನು ಕಳ್ಳತನ ಮಾಡಿದ್ದು, ಅಂದಾಜು 10 ಲಕ್ಷ ಅಧಿಕ ಬೆಲೆ ಬಾಳುವ ಮೋಟರ್ ಬೈಕ್‌ಗಳನ್ನು ಆರೋಪಿ ಸಿದ್ದಪ್ಪ ಯಲ್ಲಪ್ಪ ಉಪ್ಪಲದಿನ್ನಿ ಕಡೆಯಿಂದ ವಶಕ್ಕೆ ಪಡೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೆಚ್ಚುವರಿ ಎಸ್‌ಪಿ, ಮಹಾಂತೇಶ್ವರ ಜಿದ್ದಿ ಮಾಹಿತಿಯನ್ನು ನೀಡಿದ್ದಾರೆ.
ಪ್ರಕರಣದಲ್ಲಿ ಕಳುವಾದ ಮೋಟಾರ್ ಸೈಕಲ್ ಹಾಗೂ ಆರೋಪಿಗಳನ್ನು ಪತ್ತೆ ಮಾಡಲು ಜಿಲ್ಲಾ ಎಸ್‌ಪಿ, ಸಿದ್ದಾರ್ಥ ಗೋಯಲ್, ಹೆಚ್ಚುವರಿ ಎಸ್‌ಪಿ, ಮಹಾಂತೇಶ್ವರ ಜಿದ್ದಿ, ಡಿಎಸ್‌ಪಿ, ಎಸ್, ರೋಷನ್ ಜಮೀರ್, ಸಿಪಿಐ ಮಲ್ಲಪ್ಪ ಡಿ ಮಡ್ಡಿ, ಪಿಎಸ್‌ಐ, ಅನೀಲ ಕುಂಬಾರ ಅವರ ನೇತೃತ್ವದಲ್ಲಿ ಕ್ರೈಂ ಪಿಎಸ್‌ಐ, ಎನ್, ಕೆ, ಕಾಜಗಾರ, ಸಿಬ್ಬಂದಿಗಳಾದ ಸಂಗಪ್ಪ ಕೋಟಿ, ಪರಶುರಾಮ ಘಾಟಗೆ, ಪ್ರಕಾಶ ಹೊಸಮನಿ, ಮುತ್ತಪ್ಪ ಮಾಂಗ, ಮಲ್ಲಿಕಾರ್ಜುನ ತಂಬಾಕದ, ಸಿದ್ದು ಕಲಾಠೆ, ನಾಗರಾಜ ಬಿಸಲದಿನ್ನಿ, ಶಂಕರ ಆಸಂಗಿ, ಆಯ್, ಎಮ್, ಪೆಂಡಾರಿ, ರಾಜಶೇಖರ ಮನಗೂಳಿ ಒಳಗೊಂಡ ತಂಡವನ್ನು ರಚನೆ ಮಾಡಿ, ಕಾರ್ಯಾಚರಣೆ ಕೈಗೊಂಡು ಆರೋಪಿ ಸಿದ್ದಪ್ಪ ಯಲ್ಲಪ್ಪ ಉಪ್ಪಲದಿನ್ನಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಕಾರ್ಯ ವೈಖರಿಯನ್ನು ಶ್ಲಾಘಿಸಿದ ಎಸ್‌ಪಿ, ಸಿದ್ದಾರ್ಥ ಗೋಯಲ್ ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ ಎಂದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 