ಜಮಖಂಡಿ : ಯುವಕನಿಗೆ ಚಾಕುವಿನಿಂದ ಇರಿದು ಹಲ್ಲೆ
Jamkhandi: Young man stabbed and attacked with a knife
ಲೋಕದರ್ಶನ ವರದಿ,
ಜಮಖಂಡಿ 20 : ನಗರದ ಮಟ್ಟನ್ ಮಾರ್ಕೆಟ್ ಬಳಿ ಯುವಕನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಜರುಗಿದೆ. ರಾತ್ರಿ ಸಮಯದಲ್ಲಿ ಮುಸ್ಲಿಂ ಯುವಕರ ನಡುವೆ ಜಗಳ- ಗಲಾಟೆ ಶುರುವಾಗಿದ್ದು. ಅಲ್ಲಿಗೆ ಕೆಲವಂದಿಂಷ್ಟು ಹಿಂದು ಯುವಕರ ಸಹ ಸೇರಿದ್ದಾರೆ. ಹಿಂದು ಯುವಕರ ಮಧ್ಯ ಮುಸ್ಲಿಂ ಯುವಕರ ನಡುವೆ ಹೊಡೆದಾಟ ತೀವ್ರ ಸ್ವರೂಪಕ್ಕೆ ತಿರುಗಿದ ಹಿನ್ನಲೆಯಲ್ಲಿ ಹನುಮಂತ ಶಿವಾಜಿ ಗಾಡಿವಡ್ಡರ (18) ಯುವಕನಿಗೆ ಮುಸ್ಲಿಂ ಯುವಕರು ಸೇರಿ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ. ಚಾಕುವಿನಿಂದ ಇರಿತಕ್ಕೆಗೊಳಗಾದ ಹನುಮಂತ ಶಿವಾಜಿ ಗಾಡಿವಡ್ಡರ ಯುವಕನನ್ನು ಜಮಖಂಡಿ ಸರಕಾರಿ ಉಪವಿಭಾಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಶಹರ ಪೋಲಿಸ್ ಠಾಣೆಯ ಪಿಎಸ್ಐ, ಅನೀಲ ಕುಂಬಾರ, ಸಿಬಂಧಿಗಳಾದ ಸದಾಶಿವ ಹೊಸೂರ, ಲೋಕೇಶ ಯಳಶೆಟ್ಟಿ, ಶಕಂರ ಆಸಂಗಿ, ಶೇಖರ ನಾಯಕ, ಶಂಕರ ಮೂಲಿಮನಿ ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 