ಶೃಂಗೇರಿ ಮಠದ ಪೀಠಾಧಿಪತಿ ಜಗದ್ಗುರು ಶ್ರೀ ವಿದ್ಯಾವಿಶ್ವೇಶ್ವರ ಭಾರತಿ ಸ್ವಾಮೀಜಿ ಚಾತುರ್ಮಾಸ್ಯ

ಶೃಂಗೇರಿ ಮಠದ ಪೀಠಾಧಿಪತಿ ಜಗದ್ಗುರು ಶ್ರೀ ವಿದ್ಯಾವಿಶ್ವೇಶ್ವರ ಭಾರತಿ ಸ್ವಾಮೀಜಿ ಚಾತುರ್ಮಾಸ್ಯ Jagadguru Sri Vidyavishveswara Bharati Swamiji Chaturmasya

ಹುಬ್ಬಳ್ಳಿ-ಧಾರವಾಡ 09 : ಬೆಂಗಳೂರಿನ ಚಾಮರಾಜ ಪೇಟೆಯ ಅವಿಚ್ಛಿನ್ನ ಪರಂಪರಾಕೂಡ್ಲಿ ಶೃಂಗೇರಿ ಮಠದ  ಪೀಠಾಧಿಪತಿಗಳಾದ ಜಗದ್ಗುರು ವಿದ್ಯಾವಿಶ್ವೇಶ್ವರ ಭಾರತಿ ಮಹಾಸ್ವಾಮಿಗಳ ಚಾತುರ್ಮಾಸ್ಯ ಬೆಂಗಳೂರಿನ ಮಠದಲ್ಲಿಯೇ ನಡೆಯಲಿದ್ದು, ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನವಾದಗುರುವಾರ (ದಿನಾಂಕ.10.07.2025) ದಿಂದ ಆರಂಭಗೊಳ್ಳಲಿದೆ ಎಂದುಅವಿಚ್ಛಿನ್ನ ಪರಂಪರಾಕೂಡ್ಲಿ ಶೃಂಗೇರಿ ಮಠದ ಆಡಳಿತ ಮಂಡಳಿಯ ಅಧ್ಯಕ್ಷರಾದಡಾ. ಮಹೇಶ ವಾಳ್ವೇಕರ್ ತಿಳಿಸಿದ್ದಾರೆ. 

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವಅವರು, ಗುರುವಾರ ಬೆಳಿಗ್ಗೆ ಶ್ರೀಕೃಷ್ಣಪಂಚಕಾದಿ ವ್ಯಾಸ ಪೂಜೆಯೊಂದಿಗೆ ಶ್ರೀಗಳು ಚಾತುರ್ಮಾಸ್ಯ ವ್ರತಆರಂಭಿಸಲಿದ್ದು, ಹತ್ತು ಹಲವು ಧಾರ್ಮಿಕ ವಿಧಿವಿದಾನ ಕಾರ್ಯಗಳು ಜರುಗಲಿದ್ದು, ಅಪರಾಹ್ನ 1.00 ಗಂಟೆಗೆ ಶ್ರೀಗಳಿಂದ ಭಕ್ತಾದಿಗಳಿಗೆ ಫಲ ಮಂತ್ರಾಕ್ಷತೆ ವಿತರಣೆ ನಡೆಯಲಿದೆ. ಶ್ರೀ ಶಂಕರ ಭಗವತ್ಪಾದರಿಂದ ಪ್ರತಿಷ್ಠಾಪಿತ ಪೀಠ ಪರಂಪರೆಯ ಶ್ರೀಮದಅವಿಚ್ಛಿನ್ನ ಪರಂಪರಾಕೂಡಲಿ ಶೃಂಗೇರಿ ಮಹಾಸಂಸ್ಥಾನದ ಹನ್ನೊಂದನೆಯ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಶ್ರೀ ಶ್ರೀವಿದ್ಯಾವಿಶ್ವೇಶ್ವರ ಭಾರತೀ ಮಹಾಸ್ವಾಮಿಗಳವರ ಸನ್ಯಾಸ ಹಾಗೂ ಪೀಠಾರೋಹಣದಚತುರ್ಥ ವಾಷಿಕೋತ್ಸವದ ಸಮಾರಂಭವು ಸಹ ಇದೇ ಸಂದರ್ಭದಲ್ಲಿಜರುಗಲಿದೆ. ಭಕ್ತ ಮಹಾಜನರು ಶ್ರೀಗಳಿಗೆ ಭಿಕ್ಷಾವಂದನೆ ಹಾಗೂ ಪಾದಪೂಜಾದಿ ಸೇವೆಗಳನ್ನು ಸಮರ​‍್ಿಸಲಿದ್ದಾರೆಎಂದು ತಿಳಿಸಿದ್ದಾರೆ. 

ಭಾದ್ರಪದ ಮಾಸದ ಶುಕ್ಲ ಪಕ್ಷದ ಸೆಪ್ಟಂಬರ್ 07 ರಅನಂತನ ಹುಣ್ಣಿಮೆ ದಿನದಂದು ಜಗದ್ಗುರುಗಳು ಸೀಮೊಲ್ಲಂಘನ ಮಾಡುವ ಮೂಲಕ ಚಾತುರ್ಮಾಸ್ಯ ವ್ರತ ಮುಕ್ತಾಯಗೊಳಿಸಲಿದ್ದಾರೆ.ಚಾತುರ್ಮಾಸ್ಯದ ವ್ರತಾಚರಣೆ ಸಂದರ್ಭದಲ್ಲಿ ಜಗದ್ಗುರುಗಳು ವಿವಿಧಧಾರ್ಮಿಕ ಹೋಮ-ಹವನ, ಅನುಷ್ಠಾನ, ಪ್ರವಚನಾದಿ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ.ಎರಡು ತಿಂಗಳ ಚಾತುರ್ಮಾಸ್ಯದ ಸಂದರ್ಭದಲ್ಲಿ ಶ್ರೀ ವಿದ್ಯಾವಿಶ್ವೇಶ್ವರ ಭಾರತಿ ಮಹಾಸ್ವಾಮೀಜಿಚಾಮರಾಜ ಪೇಟೆಯ 5ನೇ ಮುಖ್ಯರಸ್ತೆಯದೇವನಾಥಾಚಾರಿ ಬೀದಿಯಲ್ಲಿರುವ ಶ್ರೀಮಠದಲ್ಲಿಯೇ ವಾಸ್ತವ್ಯವಿದ್ದು ಭಕ್ತರಿಗೆದರ್ಶನ ನೀಡಲಿದ್ದಾರೆ.ಗುರುವಾರದಿಂದ ಆರಂಭಗೊಳ್ಳುವ ಚಾತುರ್ಮಾಸ್ಯ ವ್ರತ ಸಂದರ್ಭದಲ್ಲಿ ವಿವಿಧಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಮಠದಲ್ಲಿ ಏರಿ​‍್ಡಸಲಾಗಿದ್ದುರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಸಿರುವ ಭಕ್ತಾದಿಗಳು ಪಾಲ್ಗೊಳ್ಳುವಂತೆ ಅವಿಚ್ಛಿನ್ನ ಪರಂಪರಾಕೂಡ್ಲಿ ಶೃಂಗೇರಿ ಮಠದ ಆಡಳಿತ ಮಂಡಳಿಯ ಅಧ್ಯಕ್ಷರಾದಡಾ.ಮಹೇಶ ವಾಳ್ವೇಕರ್ ವಿನಂತಿಸಿದ್ದಾರೆ.