ಜಗದ್ಗುರು ಶಂಕರಾಚಾರ್ಯರ ತತ್ವ ಪಾಲಿಸಿ: ತಹಶೀಲ್ದಾರ್ ನಿಂಗಪ್ಪ ಬಿರಾದಾರ
Jagadguru Shankaracharya's philosophy and policy: Tahsildar Ningappa Biradar
ದೇವರಹಿಪ್ಪರಗಿ 21 : ಜಗದ್ಗುರು ಶಂಕರಾಚಾರ್ಯರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಪಾಲಿಸಬೇಕು. ಶಂಕರಾಚಾರ್ಯರು ದೈವಿ ಭಕ್ತರಾಗಿ, ಜ್ಞಾನಿಯಾಗಿ, ವಿವೇಕಿಗಳಾಗಿ ಅದ್ವೈತ ಮತ ಸ್ಥಾಪಿಸಿದರು. ಜೀವನದಲ್ಲಿ ಅವರು ಹಾಕಿಕೊಟ್ಟ ಶಿಸ್ತಿನ ಗೆರೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಾಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ನಿಂಗಪ್ಪ ಬಿರಾದಾರ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ಮಂಗಳವಾರ ಏರಿ್ಡಸಲಾರದ ಜಗದ್ಗುರು ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದ ಉಪನ್ಯಾಸಕರಾಗಿ ಗೀರೀಶ ಕುಲಕರ್ಣಿ ಅವರು ಮಾತನಾಡಿ, ಬದುಕಿನಲ್ಲಿ ನಾನು ಎನ್ನುವ ಅಹಂಭಾವದ ಅಭಾವವಾಗಬೇಕು. ಮನುಷ್ಯ ಜನ್ಮ ಬಂದಮೇಲೆ ದೇವರನ್ನು ಸ್ಮರಿಸಬೇಕು.
ಶಂಕರಾಚಾರ್ಯರು ದೈವೀ ಭಕ್ತರಾಗಿ, ತತ್ವಜ್ಞಾನಿಯಾಗಿ, ವಿವೇಕಿಗಳ ಸಂಗಮವಾಗಿ ರಾರಾಜಿಸಿದವರು. ಶಂಕರಾಚಾರ್ಯರು ಅದ್ವೈತ ತತ್ವದ ಮೂಲಕ ಜಗತ್ತಿನಲ್ಲಿ ಸಮಾನತೆ ಸಾರಿದರು. ಶಂಕರಾಚಾರ್ಯರು ಬದುಕನ್ನು ಸಮಚ್ಯುತ್ತದಿಂದ ನೋಡಬೇಕು ಭಾರತೀಯ ಆಧ್ಯಾತ್ಮಿಕ ಪರಂಪರೆಗೆ ಶಂಕರಾಚಾರ್ಯರ ಕೊಡುಗೆ ಅಪಾರ ಎಂದು ಹೇಳಿದರು. ಮುಖಂಡರುಗಳಾದ ಡಾ.ಆರ್.ಆರ್.ನಾಯಿಕ ಅವರು ಮಾತನಾಡಿ ಕೇಂದ್ರ ಸರ್ಕಾರವು 2003ರಿಂದ ರಾಷ್ಟ್ರಾದ್ಯಂತ ಜ.ಶಂಕರಾಚಾರ್ಯ ಜಯಂತಿಯನ್ನು ತತ್ವಜ್ಞಾನಿಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಇದರ ಜೊತೆ ಪಟ್ಟಣದಲ್ಲೂ ಜಯಂತಿ ಆಗುತ್ತಿರುವುದು ಸರ್ಕಾರಕ್ಕೆ ಹಾಗೂ ಸಮುದಾಯದ ಮುಖಂಡರುಗಳಿಗೆ ಅಭಿನಂದಿಸುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಸಮುದಾಯದ ಮುಖಂಡರುಗಳಾದ ವೆಂಕಟೇಶ ಕುಲಕರ್ಣಿ, ಚಿದಂಬರ ಕುಲಕರ್ಣಿ, ಶ್ರೀಪಾದ ಭಟ್ಟ ಜೋಶಿ, ಶ್ರೀಧರ ನಾಡಗೌಡ, ಚನ್ನವೀರ ಕುದುರಿ, ಪಂಚಾಕ್ಷರಿ ಮಿಂಚಿನಾಳ, ಪ್ರವೀಣ್ ಕುಲಕರ್ಣಿ ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಶಿರಸ್ತೇದಾರ ಸುರೇಶ ಮ್ಯಾಗೇರಿ ಸ್ವಾಗತಿಸಿ, ವಂದಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 