ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ

ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ Jagadguru Renukacharya Jayanthyutsava in Yadoor village of Chikkodi taluk

       ಮಾಂಜರಿ 02: ಜಗದ್ಗುರು ರೇಣುಕಾಚಾರ್ಯರ ತತ್ವಗಳು ಸಮಾನತೆ, ಧಾರ್ಮಿಕ ಸಾಮರಸ್ಯ ಮತ್ತು ಆಧ್ಯಾತ್ಮಿಕಪ್ರಗತಿಗೆ ದಾರೀದೀಪವಾಗಿ, ಸನ್ಮಾರ್ಗ ತೋರುತ್ತಿವೆ ಎಂದು ಶ್ರೀಶೈಲಪೀಠದ ಜಗದ್ಗುರುಗಳು ಹಾಗೂ ಯಡೂರಿನ ಸರಿಕಾಡಸಿದ್ದೇಶ್ವರ ಸಂಸ್ಥಾನಮಠ ಮತ್ತು ವೀರಭದ್ರ ದೇವಸ್ಥಾನದ ಧರ್ಮಾಧಿಕಾರಿಗಳಾದ ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. 

       ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಮಾರ್ಚ ಒಂದರಂದು ಆರರವರೆಗೆ ನಡೆಯುತ್ತಿರುವ ಧಾರ್ಮಿಕ ಸಮಾರಂಭದಲ್ಲಿ ಭಾನುವಾರ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವದಲ್ಲಿ  ಮಾತನಾಡಿದ ಶ್ರೀಗಳು, ಅದೈತ ತತ್ವ ಎಲ್ಲಜೀವಿಗಳಲ್ಲಿಯೂಶಿವನಒಂದುಅಂಶವಿದೆ. ರೇಣುಕಾಚಾರ್ಯರು ಶೈವತತ್ವಶಾಸ್ತ್ರವನ್ನು ಜನಸಾಮಾನ್ಯರಿಗೆ ಪರಿಚಯಿಸಿ ಅದನ್ನು ಜೀವನದ ಭಾಗವನ್ನಾಗಿ ಮಾಡಿದ ಮಹಾಪುರುಷಕರು. ಅವರಬದುಕು ಮತ್ತು ತತ್ವಗಳು ಸಮಾಜಕ್ಕ ಷ್ಟೇಅಲ್ಲ ಇಡೀ ವಿಶ್ವಕ್ಕೆ ಪ್ರಾಮುಖ್ಯತೆ ಹೊಂದಿವೆ ಎಂದರು.

         ಈ ವೇಳೆ ಕಾಶೀಪೀಠದ ನೂತನ ಜಗದ್ಗುರುಗಳಾದ ಶ್ರೀಮಲ್ಲಿ ಕಾರ್ಜುನ್ವಿಶ್ವರಾಧ್ಯ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳು ಮಾತನಾಡಿ, ಮಾನವರಾದ ನಮ್ಮಲ್ಲಿ ಸತ್ಯತೆ ಎಂಬುದುಬೇಕು. ಆದೊಂದಿದ್ದರೆ ಬೇಕಾದ್ದನ್ನು ಸಾಧಿಸಬಹುದು. ಆದರೆ ಅಸತ್ಯದಿಂದ ಯಾವುದನ್ನೂ ಸಾಧಿಸಲಾಗದು. ಕವಡೆಕಾಸಿನ ಕಿಮ್ಮತ್ತು ಕೂಡ ಇದು. ಸಮಾಜ ಒಗ್ಗಟ್ಟಿನಿಂದ ಇದ್ದರೆ ಸದೃಢ ಸಮಾಜ ನಿರ್ಮಾಣವಾಗಲಿದೆ ಎಂದ ಅವರು.

        ಶ್ರೀರೇಣುಕಾಚಾರ್ಯರಂತ ಗುರುಗಳತತ್ವ ಸಿದ್ದಾಂತಗಳನ್ನು ಆಲಿಸುವುದರಿಂದ ಮಾನವ ಜೀವನ ಸಾರ್ಥಕವಾಗಲಿದೆ ಎಂದರು. ರವಿವಾರ ನಡೆದ ರಾತ್ರಿ ರೇಣುಕಾಜಯಂತಿ ಕಾರ್ಯಕ್ರಮದಲ್ಲಿ ಬನಹಟ್ಟಿಯ ಗೌರಿಶಂಕರ ಶಿವಾಚಾರ್ಯರು ರಬಕವಿಯ ಶ್ರೀಶಿವಬಸವ ಶರಣರು ಅಂಬಿಕಾನಗರದ ಈಶ್ವರ​‍್ಂಡಿತಾರಾಧ್ಯಶ್ರೀಗಳು ಹುಕ್ಕೇರಿಯ ಚಂದ್ರಶೇಖರ್ಶಿವಾಚಾರ್ಯ ಶ್ರೀಗಳು ಹಾಗೂ ನೋಡಿದ ಮಠದ ಮಠಾಧೀಶರು ಮತ್ತು ಪೂಜ್ಯರು ಪಾಲ್ಗೊಂಡಿದ್ದರು