ಸಿಡ್ನಿ, ಏ 13,ಜಗತ್ತಿನಾದ್ಯಂತ
ಕೊರೊನಾ ವೈರಸ್ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಕ್ರೀಡಾ ಚಟುವಟಿಕೆಗಳು
ಮುಂದೂಡಲ್ಪಟ್ಟಿವೆ ಅಥವಾ ರದ್ದಾಗಿವೆ. ಈ ಹಿನ್ನೆಲೆಯಲ್ಲಿ ಹಲವು ಕ್ರೀಡಾಪಟುಗಳು
ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್
ಹಾಗ್ ಸಹ ಇದಕ್ಕೆ ಹೊರತಾಗಿಲ್ಲ.ಟ್ವಿಟರ್ ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸದಾ
ಸಕ್ರಿಯರಾಗಿರುವ ಅವರಿಗೆ ಭಾರತದ ಅತ್ಯುತ್ತಮ ಫೀಲ್ಡರ್ ಯಾರೆಂದು ಹೆಸರಿಸುವಂತೆ
ಅಭಿಮಾನಿಗಳು ಕೋರಿದ್ದಾರೆ. ಜತೆಗೆ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಯುವರಾಜ್ ಸಿಂಗ್
ಮತ್ತು ಸುರೇಶ್ ರೈನಾ ನಡುವೆ ಆಯ್ಕೆ ಮಾಡುವಂತೆ ಹೇಳಿದ್ದಾರೆ. ಇದಕ್ಕೆ
ಪ್ರತಿಕ್ರಿಯಿಸಿರುವ ಹಾಗ್, ಈ ನಾಲ್ವರು ಅದ್ಭುತ ಆಟಗಾರರೇ ಅವರಿಗೆ ಬೌಲಿಂಗ್
ಮಾಡುವುದನ್ನು ನಾನು ಇಷ್ಟಪಡುತ್ತೇನೆ. ಆದರೆ ಜಡೇಜಾ ನನ್ನ ಫೇವರಿಟ್ ಫೀಲ್ಡರ್ ಎಂದು
ಹೇಳಿದ್ದಾರೆ.