ರಾಣೇಬೆನ್ನೂರಲ್ಲಿ ಹಲಸು- ಮಾವು ಮೇಳ: ರೈತರಿಂದ ನೇರ ಖರೀದಿ
Jackfruit-Mango Mela in Ranebennur: Direct purchase from farmers
ರಾಣೇಬೆನ್ನೂರು 17: ವಾಣಿಜ್ಯ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಶ್ರೀ ಬಾಲಾಜಿ ಇವೆಂಟ್ಸ್ ಅವರಿಂದ, ಕರಕುಶಲ ಮತ್ತು ಗೃಹೋಪಯೋಗಿ ವಸ್ತುಗಳ ಮಾರಾಟ ಹಾಗೂ ಹಲಸು ಮತ್ತು ಮಾವು ಮೇಳ ಆಯೋಜಿಸಲಾಗಿದೆ ಎಂದು ವ್ಯವಸ್ಥಾಪಕ ನವೀನ್ ಹೇಳಿದರು.
ಅವರು ಬುಧವಾರ, ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಇಲ್ಲಿನ ವಿನಾಯಕ ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಇದೆ 17 ರಂದು ಗುರುವಾರ ದಿಂದ ಮೇಳ ಆರಂಭವಾಗಿ 21 ರವರೆಗೆ ಬಹುವಸ್ತು ಮತ್ತು ಉತ್ಪಾದನೆಯೊಂದಿಗೆ ನಡೆಯಲಿದೆ ಎಂದರು.
ಕರ್ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ತಮ್ಮ ಬಾಲಾಜಿ ಇವೆಂಟ್ಸ್ ವತಿಯಿಂದ ಇಂತಹ ಮಾರಾಟ ಮೇಳಗಳನ್ನು ವರ್ಷದುದ್ದಕ್ಕೂ ಆಯೋಜಿಸಿ, ಗ್ರಾಹಕರು ಮತ್ತು ಉತ್ಪಾದಕರ ಮಧ್ಯ ನೇರ ಸಂಪರ್ಕ ಸೇತುವೆಯಾಗಿ ತನ್ನ ಕೆಲಸ, ಕರ್ತವವನ್ನು ಮಾಡುತ್ತ ಬರಲಾಗಿದೆ ಎಂದರು.
ಹಲಸು ಹಣ್ಣಿನಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಇದರಿಂದ ಮಾಡುವ ವಿವಿಧ ಬಗೆಯ ತಿಂಡಿ ತಿನಿಸು, ವಿಶೇಷವಾಗಿ ಹಲಸಿನ ಜಿಲೇಬಿ ಪ್ರತಿಯೊಬ್ಬರ ಗಮನ ಸೆಳೆಯಲಿದೆ. ಮಾವಿನ ಇಳುವರಿ ಈಗಾಗಲೇ ಕಡಿಮೆಯಾಗಿದ್ದು ಕೆಲವೇ ತಳಿಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ ಎಂದರು.
ಕರಕುಶಲ ಮತ್ತು ಗೃಹ ಉಪಯೋಗಿ ವಸ್ತುಗಳಲ್ಲಿ ವೈವಿಧ್ಯತೆ ಇದು ಎಲ್ಲ ಉತ್ಪಾದಕರು ತಮ್ಮ ಉತ್ಪನ್ನಗಳನ್ನು ವಾಣಿಜ್ಯ ನಗರದ ಜನತೆ ಮತ್ತು ತಾಲೂಕಿಗೆ ಪರಿಚಯಿಸುತ್ತಿರುವುದು ಇದು ಪ್ರಥಮವಾಗಿದೆ. ಎಂದು ವಿವರಿಸಿ ಮಾತನಾಡಿದರು.
ಮಾಧ್ಯಮಗೋಷ್ಠಿಯಲ್ಲಿ ಹರೀಶ, ಲೋಕೇಶ್ ಕಣಕೇರಿ ಸೇರಿದಂತೆ ಇವೆಂಟ್ಸ್ನ ಮತ್ತಿತರರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 