ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಜೆಡಿಎಸ್ ಮುಖಂಡರಿಂದ ಸಾಂತ್ವನ

ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಜೆಡಿಎಸ್ ಮುಖಂಡರಿಂದ ಸಾಂತ್ವನ  JDS leaders offer condolences to the family of a farmer who committed suicide

ಇಂಡಿ 26: ತಾಲೂಕಿನ ತಡವಲಗಾ ಗ್ರಾಮದಲ್ಲಿ ಜುಲೈ 17, 2026ರಂದು ಆತ್ಮಹತ್ಯೆ ಮಾಡಿಕೊಂಡ ರೈತ ನಾಗಪ್ಪ ಭೀಮಣ್ಣ ಹತ್ತರಕಿ (57) ಅವರ ನಿವಾಸಕ್ಕೆ ಕರ್ನಾಟಕ ರಾಜ್ಯ ಜೆಡಿಎಸ್ ಉಪಾಧ್ಯಕ್ಷ ನಾನಾಗೌಡ ಬಿರಾದಾರ (ಡೋಮನಾಳ) ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.  

ಮೃತ ರೈತನ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ ಅವರು, ದುಃಖದ ಸಮಯದಲ್ಲಿ ಧೈರ್ಯ ಕಳೆದುಕೊಳ್ಳಬಾರದು. ಪಕ್ಷ ಹಾಗೂ ನಾವು ಸದಾ ನಿಮ್ಮೊಂದಿಗಿದ್ದೇವೆ ಎಂದು ಆತ್ಮಸ್ಥೈರ್ಯ ತುಂಬಿದರು. ಬಳಿಕ ಮೃತ ರೈತನಿಗೆ ಶ್ರದ್ಧಾಂಜಲಿ ಸಲ್ಲಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು.  

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಮು ರಾಠೋಡ್, ಗಂಗಾಧರಗೌಡ ಬಿರಾದಾರ, ಮಹೇಶ್ ನಾಯಕ, ಆಯೂಬ್ ನಾಟೀಕರ, ಶಿವಾನಂದ ದೇವರ, ಮೈಬೂಬ್ ಬೆನೂರ, ರಾಜು ಮುಲ್ಲಾ, ಗೌಡು ಪಾಟೀಲ, ಶ್ರೀಶೈಲಗೌಡ ಪಾಟೀಲ, ದತ್ತು ಮೂಳಿ, ಮಳಸಿದ್ದಪ್ಪ ಮೇತ್ರಿ, ಸಂತೋಷ ಸಾರವಾಡ, ಶೇಕುಗೌಡ ಬಿರಾದಾರ, ರಾಮನಗೌಡ ಪಾಟೀಲ, ಬಸವರಾಜ ಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.