ಹೂವಿನಹಡಗಲಿಯಲ್ಲಿ ಜೆಸಿಐ ಮಧ್ಯ ವಾರ್ಷಿಕ ಸಮ್ಮೇಳನ
JCI Mid-Annual Conference at Huvanahadagali
ಹೂವಿನಹಡಗಲಿಯಲ್ಲಿ ಜೆಸಿಐ ಮಧ್ಯ ವಾರ್ಷಿಕ ಸಮ್ಮೇಳನ
ರಾಣಿಬೆನ್ನೂರ 8: ಸ್ಥಳೀಯ ಜೆಸಿಐ ಘಟಕದ ಸಾಮಾಜಿಕ ಕಾರ್ಯಕ್ಕೆ ಜೆಸಿಐ ಭಾರತದ ವಲಯ-24ರ ಪರವಾಗಿ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ 15ಕ್ಕೂ ಹೆಚ್ಚು ಪ್ರಶಸ್ತಿ ಬಹುಮಾನಗಳು ಲಭಿಸಿದೆ. ಇತ್ತೀಚಿಗೆ ವಿಜಯನಗರ ಜಿಲ್ಲೆ ಹೂವಿನಹಡಗಲಿ ನಗರದ ರುದ್ರಾಂಬಾ ಎಂ.ಪಿ. ಪ್ರಕಾಶ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಜೆಸಿಐ ಹೂವಿನಹಡಗಲಿ ರಾಯಲ್ ಏರಿ್ಡಸಿದ್ದ ಜೆಸಿಐ ಮಧ್ಯ ವಾರ್ಷಿಕ ಸಮ್ಮೇಳನ-2025 ಪಾಂಚಜನ್ಯದಲ್ಲಿ ತಾಲೂಕ ಜೆಸಿಐ ಘಟಕದ ಅಧ್ಯಕ್ಷ ಕುಮಾರ ಬೆಣ್ಣಿ ನೇತೃತ್ವದಲ್ಲಿ ಪದಾಧಿಕಾರಿಗಳು ಪ್ರಶಸ್ತಿ ಹಾಗೂ ಬಹುಮಾನಗಳನ್ನು ಸ್ವೀಕರಿಸಿದರು. ಜೆಸಿಐ ಭಾರತ ವತಿಯಿಂದ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದಲ್ಲಿ ನಿರ್ವಹಿಸಿರುವ ಕಾರ್ಯ ಕ್ಷಮತೆಗೆ ಹಾಗೂ ಅತ್ಯುತಮ ಘಟಕವೆಂದು ಅಧ್ಯಕ್ಷ ಕುಮಾರ ಬೆಣ್ಣಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇದರ ಜತೆಗೆ ರಕ್ತದಾನ ಶಿಬಿರ ಕಾರ್ಯಕ್ರಮ, ಮಹಿಳಾ ವಿಭಾಗದ ಕಾರ್ಯ, ಪ್ರಶಸ್ತಿ ಮಾರುಕಟ್ಟೆ ವಿಭಾಗ, ಜೆಸಿ ಸದಸ್ಯತ್ವ ನೊಂದಣಿ 1 ಲ್ಯಾಕ್ ಮಿಷನ್ ಹಾಗೂ ಅತ್ಯುತ್ತಮ ಘಟಕ ಸೇರಿದಂತೆ 15ಕ್ಕೂ ಹೆಚ್ಚು ರಾಷ್ಟ್ರೀಯ ಪ್ರಶಸ್ತಿಗಳನ್ನು ಜೂನ್ ಪ್ರೆಸಿಡೆಂಟ್ ಗೌರೀಶ್ ಭಾರ್ಗವ ಹಾಗೂ ಶಾಸಕ ಕೃಷ್ಣ ನಾಯಕ ನೀಡಿದರು. ಕಾರ್ಯದರ್ಶಿ ಇಮ್ರಾನ್ ನೀಲಗರ, ಜೂನ್ ಚೇರ್ಮನ್ ಪ್ರಬಲಿಂಗಪ್ಪ ಹಲಗೇರಿ, ಉಪಾಧ್ಯಕ್ಷ ಅಶೋಕ್ ದುರ್ಗಸಿಮಿ, ಶರತ್ ಕುಮಾರ್, ಮಂಜುನಾಥ್ ಜಿ ಸೇರಿದಂತೆ ಮತ್ತಿತರು ಇದ್ದರು.
ಫೋಟೊ:8ಆರ್‌ಎನ್‌ಆರ್10 ರಾಣಿಬೆನ್ನೂರ: ಇತ್ತೀಚಿಗೆ ಹೂವಿನಹಡಗಲಿಯಲ್ಲಿ ಏರಿ್ಡಸಿದ್ದ ಜೆಸಿಐ ಮಧ್ಯ ವಾರ್ಷಿಕ ಸಮ್ಮೇಳನ-2025 ಪಾಂಚಜನ್ಯದಲ್ಲಿ ರಾಣೇಬೆನ್ನೂರು ತಾಲೂಕ ಜೆಸಿಐ ಘಟಕದ ಅಧ್ಯಕ್ಷ ಕುಮಾರ ಬೆಣ್ಣಿ ಹಾಗೂ ಪದಾಧಿಕಾರಿಗಳಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 