ಮಾನವೀಯ ಮೌಲ್ಯಗಳನ್ನು ಮೀರಿಸುವ ಜೇಸಿ ಸಂಸ್ಥೆಯಾಗಿದೆ: ಅಜಯ ಚಿನ್ನಿಕಟ್ಟಿ
JC is an organization that transcends human values: Ajay Chinnikatty
ರಾಣೇಬೆನ್ನೂರು 22: ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಇವೆರಡರ ಮಧ್ಯೆ ಬದುಕು ಸಾಗಿಸುವುದೇ ನಿಜವಾದ ಮಾನವೀಯ ಧರ್ಮವಾಗಿದೆ. ಎಂದು ಜೆಸಿ ತರಬೇತುದಾರ ಅಜಯ್ ಚಿನ್ನಿಕಟ್ಟಿ ಹೇಳಿದರು.
ಅವರು, ಇಲ್ಲಿನ ವಿಹಾನ್ ಸಭಾಭವನದಲ್ಲಿ ಜೆಸಿ ಸಂಸ್ಥೆಯ 2024-25 ಪದಾಧಿಕಾರಿಗಳ, ಸೇವಾ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಮನುಷ್ಯ ಸಂಘಜೀವಿ, ಎಂದಿಗೂ ಒಂಟಿಯಲ್ಲ, ಸದಾಕಾಲವು ಜಂಟಿಯಾಗಿಯೇ ಇರಬೇಕು ಇದರಿಂದ ಮಾನಸಿಕ ಶಾಂತಿ ಮತ್ತು ನೆಮ್ಮದಿ ಸಾಧ್ಯವಿದೆ. ಜೆಸಿ ಸಂಸ್ಥೆ ವ್ಯಕ್ತಿತ್ವ ನಿರ್ಮಿಸುವ ಬಹು ದೊಡ್ಡ ಪಾತ್ರ ವಹಿಸುವ ದೇಶದ ಅಪ್ರತಿಮ ಸಂಸ್ಥೆಯಾಗಿದೆ ಎಂದರು.
ಮಾನವನ ಸಮಗ್ರ ವಿಕಾಸತೆಯೇ ಜೆಸಿ ಸಂಸ್ಥೆಯ ಮುಖ್ಯ ಧ್ಯೇಯ ವಾಕ್ಯವಾಗಿದೆ ಎಂದ ಅವರು. ತಮಗೆ ಮಾತು ಕಲಿಸಿದ ಸಂಸ್ಥೆ ಇದಾಗಿದೆ. ತಮಗೆ ಸಹಕಾರ ನೀಡಿದ ಎಲ್ಲರನ್ನು ಅಭಿನಂದಿಸಿದರು.
ಸಂಸ್ಥೆ ಸಮಾಜ ಮತ್ತು ವ್ಯಕ್ತಿತ್ವ ವಿಕಾಸತೆ ಕುರಿತು ಜೆಸಿ ವಲಯಾಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ ಅವರು ಸಾಧ್ಯಂತವಾಗಿ ಮಾತನಾಡಿದರು. ಮಾಜಿ ಅಧ್ಯಕ್ಷ ಶಿವಶಂಕರ್ ಕೆ, ವಿದ್ಯಾಧರ ಹಲಗೇರಿ, ಕಾರ್ಯದರ್ಶಿ ಇಬ್ರಾಹಿಂ ನೀಲಗಾರ್, ವಿ. ಎಸ್. ಹಿರೇಮಠ, ಲಕ್ಷ್ಮಿಕಾಂತ್ ಹಲಗೂರು, ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 