ಜೆ.ಎಸ್‌.ಎಸ್ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟ

ಜೆ.ಎಸ್‌.ಎಸ್ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟ J.S.S. High School Annual Sports Meet

ಧಾರವಾಡ 09: ವಿದ್ಯಾಗಿರಿಯ ಜೆ.ಎಸ್‌.ಎಸ್ ಕನ್ನಡ ಮಾಧ್ಯಮ ಫ್ರೌಡಶಾಲೆಯ 2025-26ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಜೆ.ಎಸ್‌.ಎಸ್ ಮಹಾವಿದ್ಯಾಲಯದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.  

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಧಾರವಾಡ ಜಿಲ್ಲಾ ಗ್ರೇಡ್‌-1 ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರು ಆಗಿರುವ ಪಾಂಡುರಂಗ ಎಸ್‌.ಅಂಕಲಿಯವರು ಹಾಗೂ ಜನತಾ ಶಿಕ್ಷಣ ಸಮಿತಿ ಆಡಳಿತ ಅಧಿಕಾರಿಗಳು ಅರಿಹಂತ ಪ್ರಸಾದ ಅವರು, ಐ.ಟಿ.ಐ ಕಾಲೇಜಿನ ಪ್ರಾಂಶುಪಾಲರು ಆದ ಮಹಾವೀರ ಉಪಾಧ್ಯೆ ಅವರು ಕಾರ್ಯಕ್ರಮದ ಗೌರವ ಉಪಸ್ಥಿತಿವಹಿಸಿದ್ದರು. ಬಲೂನ ಉಡಾವಣೆಯ ಮೂಲಕ ಕ್ರೀಡಾಕೂಟದ ಕಾರ್ಯಕ್ರಮವನ್ನು ಉದ್ಘಾಟಿಸಿ, ಕ್ರೀಡಾಕೂಟದ ಧ್ವಜಾರೋಹಣ ಮಾಡಲಾಯಿತು. 

ಕಾರ್ಯಕ್ರಮವನ್ನುಉದ್ಘಾಟಿಸಿದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಪಾಂಡುರಂಗ ಎಸ್ ಅಂಕಲಿಯವರು ಈ ಸಂಸ್ಥೆಯಲ್ಲಿ ಕಲಿಯುತ್ತಿರುವ ಮಕ್ಕಳು ಉತ್ತಮ ಸಂಸ್ಕಾರವಂತರಾಗಿದ್ದ ಅದನ್ನು ನಿಮ್ಮ ಜೀವನದಲ್ಲಿ ರೂಡಿಸಿಕೊಳ್ಳಿ ಪ್ರಾಮಾಣಿಕತನದಿಂದ ಅಭ್ಯಸಿಸಿ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಿ ಜನ್ಮಕೊಟ್ಟ ತಂದೆ, ತಾಯಿಗಳಿಗೆ ಕೀರ್ತಿತರುವಂತ ಮಕ್ಕಳಾಗಿ ಎಂದು ಹೇಳಿ, ಈ ವಾರ್ಷಿಕ ಕ್ರೀಡಾಕೂಟದಲ್ಲಿ ಎಲ್ಲ ಮಕ್ಕಳು ಸಕ್ರಿಯವಾಗಿ ಭಾಗವಹಿಸಿ, ಜೆ.ಎಸ್‌.ಎಸ್ ಎಂಬ ಉತ್ತಮ ಸಂಸ್ಥೆಯಲ್ಲಿ ಕಲಿಯುತ್ತಿರುವ ತಾವೆಲ್ಲರೂ ಅದೃಷ್ಟವಂತರಾಗಿದ್ದು, ಉತ್ತಮ ಸಂಸ್ಕಾರವನ್ನು ರೂಢಿಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಿ ಎಂದು ಮುಖ್ಯ ಅತಿಥಿಗಳು ಎಂದು ಶುಭಹಾರೈಸಿದರು. 

ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಜೆ.ಎಸ್‌.ಎಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಮೈನಾವತಿ ದಿವಟೆ ಅವರು ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿದ್ದರು. ರಾಜೇಶ್ವರಿ ಶೆಟ್ಟಿ ಅವರು ಪ್ರಾಸ್ತಾವಿಕ ನುಡಿಗಳನಾಡಿದರು. ವಿಜಯಲಕ್ಷ್ಮಿ ನೂಲ್ವಿವರು ಅತಿಥಿ ಸ್ವಾಗತಿಸಿ ಪರಿಚಯಿಸಿದರು. ಕವಿತಾ ಪಕ್ಕಳ ವಂದನಾರೆ​‍್ಣಗೈದರು. ಮಂಜುನಾಥ ದಾಸನಕೊಪ್ಪ ಅವರು ಕಾರ್ಯಕ್ರಮ ನಿರೂಪಿಸಿದರು. ಎಲ್ಲ ಶಿಕ್ಷಕ ವೃಂದದವರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.