ಜುಗೂಳ ಕಾಲುವೆ ಮೊದಲು ಸ್ವಚ್ಛಗೊಳ್ಳಿಸಿದ್ದೇ ಡಾ. ಪ್ರಭಾಕರ ಕೋರೆ, ರಾಜು ಕಾಗೆ: ಅಣ್ಣಾಸಾಬ ಪಾಟೀಲ
It was Dr. Prabhakar Kore and Raju Kage who first got the Jugul canal cleaned: Annasab Patil
ಲೋಕದರ್ಶನ ವರದಿ
ಕಾಗವಾಡ 18: ತಾಲೂಕಿನ ಜುಗೂಳದ ದೊಡ್ಡ ಕಾಲುವೆ (ಡ್ರೇನೇಜ್) ಅನ್ನು ಮೊದಲಿಗೆ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಮತ್ತು ಶಾಸಕ ರಾಜು ಕಾಗೆಯವರ ವಿಶೇಷ ಪ್ರಯತ್ನದ ಫಲವಾಗಿ ಸ್ವಚ್ಚಗೊಳಿಸಲು ಅನುದಾನ ನೀಡಿದ್ದರೆಂದು ಸಿಬಿಕೆಎಸ್ಎಸ್ ಕಾರ್ಖಾನೆಯ ನಿರ್ದೇಶಕರು ಹಾಗೂ ಜುಗೂಳ ಪಿಕೆಪಿಎಸ್ ಅಧ್ಯಕ್ಷ ಅಣ್ಣಾಸಾಬ ಪಾಟೀಲ ತಿಳಿಸಿದರು. ಅವರು ಶುಕ್ರವಾರ ದಿ. 18 ರಂದು ಜುಗೂಳ ಗ್ರಾಮದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗದ ಕೃಷ್ಣಾ ನದಿ ತಟದಲ್ಲಿರುವ ಕರ್ನಾಟಕದ ಮೊದಲ ಗ್ರಾಮವೇ ಜುಗೂಳ. ಇಲ್ಲಿಯ ರೈತರ ಜಮೀನುಗಳು ಸಮತಟ್ಟಾಗಿರುವುದರಿಂದ ಪ್ರವಾಹದ ಹಿನ್ನೀರು ಹರಿದು ಹೋಗದೇ 6-7 ತಿಂಗಳುಗಳ ಕಾಲ ಜಮೀನುಗಳಲ್ಲಿ ನಿಲ್ಲುವದರಿಂದ ಭೂಮಿಗಳೆಲ್ಲಾ ಸವಳಾಗಿದ್ದ ವೇಳೆ ಅಂದಿನ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಶಾಸಕ ರಾಜು ಕಾಗೆಯವರ ಗಮನಕ್ಕೆ ತಂದಾಗ ತಲಾ 5 ಲಕ್ಷ ರೂ. ಹೀಗೆ ಒಟ್ಟು 10 ಲಕ್ಷ ರೂ. ಅನುದಾನದಲ್ಲಿ ಮೊದಲ ಬಾರಿಗೆ ಕಾಲುವೆ ಕೊರೆದು ಸ್ವಚ್ಛಗೊಳಿಸಲಾಗಿತ್ತು.
ನಂತರ ಪ್ರಕಾಶ ಹುಕ್ಕೇರಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸುರೇಶ ಕೋರೆ ಕಾಡಾ ಅಧ್ಯಕ್ಷರಾಗಿದ್ದ ವೇಳೆ ತಲಾ 5 ಲಕ್ಷ ಅನುದಾನದಲ್ಲಿ 2ನೇ ಬಾರಿ ಕಾಲುವೆ ಸ್ವಚ್ಚಗೊಳಿಸಲಾಗಿತ್ತು. ಮತ್ತೆ ಶಾಸಕ ರಾಜು ಕಾಗೆ 5 ಲಕ್ಷದ ಅನುದಾನದಲ್ಲಿ ಮೂರನೇ ಬಾರಿಗೆ ಡ್ರೆನೆಜ್ ಸ್ವಚ್ಛಗೊಳಿಸಲಾಗಿತ್ತು. ಬಳಿಕ ಶ್ರೀಮಂತ ಪಾಟೀಲರು ವಿಶೇಷ ಪ್ರಯತ್ನದಿಂದ ಕೊನೆಯ ಬಾರಿಗೆ ಅಂದರೆ ಕಳೆದ ನಾಲ್ಕೈದು ವರ್ಷಗಳ ಹಿಂದೆ ಸ್ವಚ್ಛಗೊಳಿಸಿದ್ದು, ಬಿಟ್ಟರೇ ಇಲ್ಲಿಯ ವರೆಗೆ ಪೂರ್ಣ ಪ್ರಮಾಣದಲ್ಲಿ ಅದನ್ನು ಸ್ವಚ್ಛಗೊಳಿಸಿಲ್ಲ ಎಂದು ಹೇಳಿದರು. ಈ ಮಧ್ಯೆ ಗ್ರಾಮದ ಪಿಕೆಪಿಎಸ್ ವತಿಯಿಂದ ಒಂದೆರಡು ಬಾರಿ ಡ್ರೇನೆಜ್ನಲ್ಲಿ ಬೆಳೆದ ಕಸ-ಕಡ್ಡಿಗಳಿಗೆ ಕಳೆ ನಾಷಕ ಓಷಧಿ ಸಿಂಪಡಿಸಲಾಗಿದೆ. ಈಗ ಮತ್ತೇ ಅದನ್ನು ಪೂರ್ಣ ಪ್ರಮಾಣದಲ್ಲಿ ಸ್ವಚ್ಛಗೊಳಿಸುವ ಅವಶ್ಯಕತೆ ಇದ್ದು, ಗ್ರಾಮದ ಪಿಕೆಪಿಎಸ್ ವತಿಯಿಂದ ರೈತರ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪೂರ್ಣ ಪ್ರಮಾಣದಲ್ಲಿ ಅದನ್ನು ಸ್ವಚ್ಛಗೊಳಿಸಲು ಮೊನ್ನೆ ನಡೆದ ಪಿಕೆಪಿಎಸ್ನ ವಾರ್ಷಿಕ ಸಭೆಯಲ್ಲಿ ಚರ್ಚಿಸಲಾಗಿದ್ದು, ಕೂಡಲೇ ಅದನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಇದಕ್ಕೆ ಎಲ್ಲರೂ ಸಹಕಾರ ನೀಡುವಂತೆ ಅವರು ಕೋರಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 