ಇಂದಿನ ಯುವಕರಲ್ಲಿ ಧರ್ಮದ ಜಾಗೃತಿ ಮೂಡಿಸುವುದು ಅತಿ ಅವಶ್ಯಕ
It is very important to create religious awareness among today's youth.
ಇಂದಿನ ಯುವಕರಲ್ಲಿ ಧರ್ಮದ ಜಾಗೃತಿ ಮೂಡಿಸುವುದು ಅತಿ ಅವಶ್ಯಕ
ರಾಯಬಾಗ 14: ಇಂದಿನ ಯುವಕರಲ್ಲಿ ಧರ್ಮದ ಜಾಗೃತಿ ಮೂಡಿಸುವುದು ಅತಿ ಅವಶ್ಯವಾಗಿದೆ. ಯುವಕರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಸಮ್ಯಕ್ ಆಚರಣೆಗಳಲ್ಲಿ ಅವರನ್ನು ತೊಡಗಿಸಿ, ಧರ್ಮದ ದಾರಿಗೆ ತಂದು ಅವರಲ್ಲಿ ಧರ್ಮ ಜಾಗೃತಿ ಮೂಡಿಸಬೇಕಾಗಿದೆ. ಎಂದು ಡಾ. ಸಿದ್ದಸೇನ ಮುನಿ ಮಹಾರಾಜರು ಹೇಳಿದರು. ತಾಲೂಕಿನ ನಸಲಾಪುರ ಗ್ರಾಮದ ಜಿ ಎಸ್ ಕಾಂತೆ ಪ್ರೌಢಶಾಲೆಯ ಸಭಾಭವನದಲ್ಲಿ ನಡೆದ ವರ್ಷಾಯೋಗ ಕಳಶ ಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಸಮಸ್ತ ಜೈನ ಶ್ರಾವಕರನ್ನು ಉದ್ದೇಶಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು ಕುಟುಂಬದವರು ಸ್ವತಹ ಧಾರ್ಮಿಕ ಆಚರಣೆಗಳಲ್ಲಿ ತೊಡಗಿ ಜಿನದರ್ಶನ, ಭಗವಂತನ ಅಭಿಷೇಕ, ಸ್ವಾಧ್ಯಾಯ ಮುಂತಾದ ಅನೇಕ ಧಾರ್ಮಿಕ ಕಾರ್ಯಗಳಲ್ಲಿ ತಮ್ಮ ಮಕ್ಕಳನ್ನು ತೊಡಗಿಸಿ ಪ್ರೋತ್ಸಾಹಿಸಬೇಕು. ಎಂದರು. ವರ್ಷಾಯೋಗದ ಕಳಶ ಸ್ಥಾಪನೆ ಕಾರ್ಯಕ್ರಮದ ಅಂಗವಾಗಿ ಮುಂಜಾನೆ ಯುವಕರು ಸೇರಿ ಭಗವಂತರ ಅಭಿಷೇಕ ಮಾಡಿದರು ನಂತರ ’ಸರ್ವದೋಷ ಪ್ರಾಯಶ್ಚಿತ ವಿಧಾನ’ ಕಾರ್ಯಕ್ರಮವನ್ನು ನೆರವೇರಿಸಿದರು. ಮಧ್ಯಾಹ್ನ 1 ಗಂಟೆಗೆ ಕಳಶ ಸ್ಥಾಪನೆ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ಮಾಜಿ ಶಾಸಕ ಕಲ್ಲಪ್ಪನ ಮೆಗನ್ನವರ, ಮಾಡಿದರು ಜಿನ್ನಪ್ಪ ಅಸ್ಕಿ, ಪ್ರಕಾಶ ಮಹಾಜನ, ಧೂಳಗೌಡ ಪಾಟೀಲ, ಡಾ. ಎನ್ ಎ ಮಗದುಮ, ಎಸ್ ಟಿ, ಮುನ್ನೂಳ್ಳಿ , ಸುರೇಶ ತಂಗಾ, ವಿಲಾಸಮತಿ ಪಾಟೀಲ, ಭರತೇಶ ಬನವಣೆ, ಬಾಹುಸಾಹೇಬ ಪಾಟೀಲ, ಮತ್ತು ಅಮರ ದುರ್ಗನವರ ಸೇರಿದಂತೆ ಜೈನ ಶ್ರಾವಕ ಶ್ರಾವಕಿಯರು ಇನ್ನಿತರರು ಉಪಸ್ಥಿತರಿದ್ದರು. *ಚಾತುರ್ಮಾಸದ ಸವಾಲಿನ ಕಳಶಗಳಾದ ಭಗವಾನ ಶಾಂತಿನಾಥರ ಕಳಸವನ್ನು ಬೆಳಗಾವಿ ಬಸ್ತವಾಡದ ಸುವರ್ಣಾ ರಾಜು ಬಡನ್ನವರ ಪಡೆದರು. ಮಹಾವೀರ ಭಗವಾನರ ಕಳಸವನ್ನು ಬಾವನ ಸೌಂದತ್ತಿ ಗ್ರಾಮದ ಪ್ರಕಾಶ ಮಹಾಜನ, ಆಚರ್ಯ ಶ್ರೀ ಬಾಹುಬಲಿ ಮಹಾರಾಜರ ಕಳಸವನ್ನು ನಸಲಾಪೂರ ಗ್ರಾಮದ ಮಹಾವೀರ ಪರಮಾಜೆಯವರು ಪಡೆದರು. ಶ್ರೀಕಾಂತ ಖೊಂಬಾರೆ ಸ್ವಾಗತಿಸಿದರು. ಡಾ. ಸಂಜಯ ಪಾಟೀಲ ನಿರೂಪಿಸಿದರು.14 ರಾಯಬಾಗ : 2 ಫೋಟೋ ರಾಯಬಾಗ :ತಾಲೂಕಿನ ನಸಲಾಪೂರ ಗ್ರಾಮದಲ್ಲಿ ವರ್ಷಾಯೊಗದ ಕಳಶ ಸ್ಥಾಪನೆ ಕರ್ಯಕ್ರಮದಲ್ಲಿ ಮಾಜಿ ಶಾಸಕ ಕಲ್ಲಪ್ಪಣ್ಣಾ ಮಗೇನವರ ಅವರಿಂದ ಹಾಗೂ ಗಣ್ಯರಿಂದ ದೀಪ ಪ್ರಜಲನೆ ಕಾರ್ಯಕ್ರಮ ನಡೆಯಿತು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 