ಮುಕ್ತವಾಗಿ ಸುದ್ದಿ ಪ್ರಸಾರ ಮಾಡುವುದು ಪತ್ರಕರ್ತನ ಸಾಮಾಜಿಕ ಜವಾಬ್ದಾರಿ -ಸಂಗಮೇಶ ಮೆಣಸಿನಕಾಯಿ
It is the social responsibility of a journalist to broadcast news freely - Sangamesh Menasinakayi
ವಿಜಯಪುರ 11 : ಲಿಂಗಾಯತ ಧರ್ಮದ ಚರ್ಚೆ ನಡೆದಾಗ ಮಠದ ಸ್ವಾಮೀಜಿಗಳನ್ನು ಕ್ರಿಶ್ಚಿಯನ್ ಚರ್ಚ್ ಗಳಿಗೆ ಪಾದ್ರಿಗಳನ್ನು ವರ್ಗಾವಣೆ ಮಾಡಿದಂತೆ ವರ್ಗಾವಣೆ ಮಾಡಬೇಕು ಎಂದು ಬರೆದೆ ಅದು ಸಾಕಷ್ಟು ಚರ್ಚೆಯಾಯಿತು ಮುಕ್ತವಾಗಿ ಸುದ್ದಿ ಪ್ರಸಾರ ಮಾಡುವುದು ಪತ್ರಕರ್ತನ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಸಂಗಮೇಶ ಮೆಣಸಿನಕಾಯಿ ಹೇಳಿದರು. ಇತ್ತೀಚಿಗೆ ಕರ್ನಾಟಕದಲ್ಲಿ ಕೆಲವು ಸ್ವಾಮೀಜಿಗಳು ತಮ್ಮ ಖಾಸಗಿ ವಿಡಿಯೋ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಜೊತೆಗೆ ಪೊಲೀಸ್ ಪ್ರಕರಣ ಕೂಡಾ ದಾಖಲಾಗಿದೆ ನಮ್ಮ ಪತ್ರಕರ್ತರು ಪ್ರಕರಣ ದಾಖಲಾದ ಬಗ್ಗೆ ಸುದ್ದಿ ಮಾಡಲು ನಮ್ಮ ಪತ್ರಕರ್ತರು ಹಿಂಜರಿಯುತ್ತಿದ್ದಾರೆ ಇದು ನಮ್ಮ ಪತ್ರಕರ್ತರು ಎತ್ತ ಸಾಗುತ್ತಿದ್ದಾರೆ ಎಂಬುದು ತೋರಿಸುತ್ತದೆ ಎಂದರು.
ಪತ್ರಕರ್ತರು ಗಣಿಗಾರಿಕೆ ವಿರುದ್ಧ ಪುಟಗಟ್ಟಲೆ ಬರೆಯುತ್ತೇವೆ ಆದರೆ ಗಣಿಗಾರಿಕೆ ಕಾರ್ಮಿಕರ ಬಗ್ಗೆಯು ನಾವು ವರದಿ ಮಾಡಬೇಕು ಏಕೆಂದರೆ ಗಣಿಗಾರಿಕೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ ಪರಿಸರ ಬಗ್ಗೆ ಕಾಳಜಿ ತೋರುವ ನಾವು ಕಾರ್ಮಿಕರಿಗೆ ಆಗುವ ತೊಂದರೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು. ಅವರು ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದಲ್ಲಿ ಎರಡನೇ ದಿನದ ಎರಡನೇ ಗೋಷ್ಠಿ ಸಾಮಾಜಿಕ ಬದ್ಧತೆ ಪತ್ರಕರ್ತನಾಗಿ ನನ್ನ ಅನುಭವಗಳು ಕುರಿತು ವಿಷಯ ಮಂಡನೆ ಮಾಡಿ ಅವರು ಮಾತನಾಡಿದರು.
ಸಂವಾದದಲ್ಲಿ ಪತ್ರಕರ್ತ ಕಲ್ಲಪ್ಪ ಶಿವಶರಣ ಅವರು ಮಾತನಾಡಿ ಪತ್ರಕರ್ತನಾದವವನು ಪೂರಕ ಮಾಹಿತಿ ಸಂಗ್ರಹ ಮಾಡಿ ನಿಖರವಾಗಿ ಸುದ್ದಿ ಪ್ರಸಾರ ಮಾಡಬೇಕು ಸುದ್ದಿಗಳು ಸಮಾಜದ ಅಂಕು-ಡೊಂಕು ತಿದ್ದುವಂತಿರಬೇಕು ಎಂದರು.ಸಂವಾದದಲ್ಲಿ ಪತ್ರಕರ್ತ ಸುನೀಲ ಗೋಡೆನ್ನವರ ಮಾತನಾಡಿ ದೃಶ್ಯ ಮಾಧ್ಯಮದ ಪತ್ರಕರ್ತರು ಅಪಘಾತ ಸಂಭವಿಸಿದಾಗ ಮೊದಲು ಗಾಯಾಳುಗಳನ್ನು ರಕ್ಷಣೆ ಮಾಡಲು ಪ್ರಯತ್ನ ಮಾಡಬೇಕು ಇದು ಪತ್ರಕರ್ತನ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದರು. ಪತ್ರಕರ್ತ ಚಂದ್ರಶೇಖರ ಹೊಸಮನಿ ಅವರು ಮಾತನಾಡಿ ಪತ್ರಕರ್ತ ಸುದ್ದಿ ಪ್ರಸಾರ ಮಾಡುವಾಗ ನೇರ ನಿಷ್ಠುರ ನಿರ್ಭಯತೆ ಹೊಂದಿರಬೇಕು ಎಂದರು. ಹಿರಿಯ ಪತ್ರಕರ್ತ ರಾಜು ಕೊಂಡಗೂಳಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ,ಬೋಗೇಶ ಸೋಲಾಪುರ ಅರವಿಂದ ಲಂಬು ಸಂಗಮೇಶ ಚೂರಿ ರವಿ ಕಿತ್ತೂರ ಸುರೇಶ ಬಿಜಾಪುರ, ಚೆನ್ನು ಕಟ್ಟಿಮನಿ ವೈ ಎಸ್ ಗುಣಕಿ. ಸಂಘರ್ಷ ಹೊಸಮನಿ, ಲಾಯಪ್ಪ ಇಂಗಳೆ ಶಿವು ಕಟ್ಟಿಮನಿ, ಸೋಮು ರಣದೇವಿ ರಾಜೇಶ ಚಲವಾದಿ, ಉಪಸ್ಥಿತರಿದ್ದರು. ಅನಿಲ ಹೊಸಮನಿ ಸಂಚಾಲಕರುಬುದ್ಧ ಬಸವ ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 