84 ಕುಟುಂಬಗಳಿಗೆ ನ್ಯಾಯವನ್ನು ಕೊಡಿಸುವುದು ಪುರಸಭೆ ಕರ್ತವ್ಯ
It is the municipality's duty to provide justice to the 84 families.
ಸಿಂದಗಿ 18: ಪಟ್ಟಣದಲ್ಲಿ ಕಳೆದ 12 ದಿನಗಳಿಂದ ನ್ಯಾಯಕ್ಕಾಗಿ ಪ್ರತಿಭಟಿಸುತ್ತಿರುವ 84 ಕುಟುಂಭಗಳಿಗೆ ಬಿಜೆಪಿ ನಾಯಕರು ತಪ್ಪು ಮಾಹಿತಿ ನೀಡಿ ಪ್ರತಿಭಟನೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುರಸಭೆ ಅಧಿಕಾರಿಗಳಿಂದ ನಿರ್ಲಕ್ಷದಿಂದ 842/2 ಆಸ್ತಿಯಲ್ಲಿನ 84 ಕುಟುಂಭಗಳ ಆಸ್ತಿಯನ್ನು ತೆರವುಗೊಳಿಸಿ ಮೂಲ ಮಾಲಿಕನಿಗೆ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಆದರೆ ವಿನಾಕಾರಣ ವಿರೋಧ ಪಕ್ಷದ ನಾಯಕರು, ಸಂಸದರು, ಬಿಜೆಪಿ ಮಾಜಿ ಶಾಸಕರು ಅನವಶ್ಯಕ ಹೇಳಿಕೆ ನಿಡುವ ಮೂಲಕ ತೆರವುಗೊಳಿಸುವಲ್ಲಿ ಶಾಸಕ ಅಶೋಕ ಮನಗೂಳಿ ಅವರ ಕೈವಾಡವಿದೆ ಎಂದು ಪ್ರತಿಭಟನಾಕಾರರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಈ ಪ್ರಕರಣದಲ್ಲಿ ಶಾಸಕ ಅಶೋಕ ಮನಗೂಳಿ ಅವರ ಪಾತ್ರ ಏನು ಇಲ್ಲ. ಈ ಸಮಸ್ಯೆ ಪರಿಹರಿಸಲು ಅವರು ಶ್ರಮಿಸಿದ್ದಾರೆ ಎಂದು ಸ್ಪಷ್ಟ ಪಡೆಸಿದರು.
84 ಕುಟುಂಬಗಳಿಗೆ ನ್ಯಾಯವನ್ನು ಕೊಡಿಸುವುದು ಪುರಸಭೆ ಕರ್ತವ್ಯ. ನಮ್ಮ ತೋಟದ ಹತ್ತಿರ 13 ಎಕರೆ ಪುರಸಭೆ ಆಸ್ತಿಯಿದೆ. ಅಲ್ಲಿ 84 ಕುಟುಂಭಗಳಿಗೆ ನಿವೇಶ ನೀಡಿ. ಈ ಜಾಗಕ್ಕೆ ಹೋಗಲು ನನ್ನ ತೋಟದಲ್ಲಿ ಹಾದಿ ಕೊಡುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರು ಪತ್ರಿಕಾ ಗೋಷ್ಠಿಯಲ್ಲಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 