ವಿಶೇಷಚೇತನ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಕರ್ತವ್ಯ: ಶಿವಲಿಂಗ ಶಿವಾಚಾರ್ಯ
It is society's duty to recognize and encourage the talent of differently-abled children: Shivalinga
ರಾಣೆಬೇನ್ನೂರ, ಆ.30: ವಿಶೇಷಚೇತನ ಮಕ್ಕಳಲ್ಲಿ ವಿಶಿಷ್ಟ ಹಾಗೂ ವೈವಿಧ್ಯಮಯ ಪ್ರತಿಭೆಗಳಿದ್ದು, ಅವುಗಳನ್ನು ಹೊರತರುವ ನಿಟ್ಟಿನಲ್ಲಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕಾರ್ಯ ಸಾರ್ವಜನಿಕರಲ್ಲಿ ಮೂಡಿಬರಬೇಕು ಎಂದು ರಟ್ಟಿಹಳ್ಳಿ ಕಬಿಣಕಂಠಿಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಮಾರುತಿ ನಗರದ ಸೇವಾ ಅಂಧರ ಸಂಸ್ಥೆಯ ಶ್ರೀ ರೇಣುಕಾ ಎಲ್ಲಮ್ಮ ಕಿವುಡ ಹಾಗೂ ಮಕ್ಕಳ ವಸತಿ ಶಾಲೆ ಮತ್ತು 0ಹಿ4 ವರ್ಷದೊಳಗಿನ ಶ್ರವಣದೋಷವುಳ್ಳ ಮಕ್ಕಳ ಕೇಂದ್ರದ ಕಟ್ಟಡ ಕಾಮಗಾರಿಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿಶೇಷಚೇತನ ಮಕ್ಕಳಿಗೆ ಸಾರ್ವಜನಿಕರ ಅನುಕಂಪಕ್ಕಿಂತಲೂ ಸಹಾಯ ಮತ್ತು ಸಹಕಾರದ ಅಗತ್ಯವಿದೆ. ಇಂದಿನ ದಿನಗಳಲ್ಲಿ ಬಹುತೇಕ ಯುವಕರಲ್ಲಿ ದೇಶಪ್ರೇಮ ಹಾಗೂ ದೇಶಾಭಿಮಾನ ಕಡಿಮೆಯಾಗುತ್ತಿರುವುದು ವಿಷಾದನೀಯ. ಇದರೊಂದಿಗೆ ಸಂಸ್ಕಾರ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳು ದೂರವಾಗುತ್ತಿದ್ದು, ಇದು ಸಮಾಜ ಮತ್ತು ದೇಶದ ಪ್ರಗತಿಗೆ ಕಂಟಕವಾಗುತ್ತಿದೆ ಎಂದು ಹೇಳಿದರು.
ಭೂಮಿ ಪೂಜೆ ನೆರವೇರಿಸಿದ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಬಹುಮುಖ ಪ್ರತಿಭೆಗಳಿಗೆ ಕಾರಣವಾಗಿರುವ ವಿಶೇಷಚೇತನ ಮಕ್ಕಳಲ್ಲಿರುವ ಅದ್ಭುತ ಪ್ರತಿಭೆಗಳನ್ನು ಗುರುತಿಸಿ, ಅವರ ಉಜ್ವಲ ಭವಿಷ್ಯಕ್ಕೆ ಪ್ರಾಮಾಣಿಕವಾಗಿ ಸಹಕಾರ ನೀಡಲು ನಾಗರಿಕರು ಮುಂದಾಗಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಚ್.ಆರ್. ಶಿವಕುಮಾರ ಮಾತನಾಡಿ, ಕಳೆದ 35 ವರ್ಷಗಳ ಹಿಂದೆ ಕೇವಲ 16 ಮಕ್ಕಳೊಂದಿಗೆ ಒಂದೇ ಕೊಠಡಿಯಲ್ಲಿ ಆರಂಭವಾದ ಈ ಶಾಲೆಯಲ್ಲಿ ಇಂದು 165ಕ್ಕೂ ಅಧಿಕ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಈವರೆಗೆ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದು ಉನ್ನತ ಶಿಕ್ಷಣದತ್ತ ಮುನ್ನಡೆದಿದ್ದಾರೆ ಎಂದು ತಿಳಿಸಿದರು.
ಸಂಸ್ಥೆಯು ಇನ್ನಷ್ಟು ಉತ್ತಮ ಸೇವೆ ಸಲ್ಲಿಸಲು ಸಾರ್ವಜನಿಕರ ಸಹಕಾರ ಅತ್ಯಮೂಲ್ಯವಾಗಿದೆ. ಆರೋಗ್ಯವಂತ ಮಕ್ಕಳನ್ನು ಪೋಷಿಸಿ ಶಿಕ್ಷಣ ನೀಡುವುದು ಸುಲಭ. ಆದರೆ ಅಂಧ, ಮೂಕ ಹಾಗೂ ಕಿವುಡ ಮಕ್ಕಳನ್ನು ವಸತಿ ಶಾಲೆಯಲ್ಲಿರಿಸಿ ಶಿಕ್ಷಣ ನೀಡುವುದು ಹೆಚ್ಚಿನ ಶ್ರಮ ಹಾಗೂ ತಾಳ್ಮೆ ಅಗತ್ಯವಿರುವ ಕಾರ್ಯವಾಗಿದೆ. ಈ ಸೇವಾ ಕಾರ್ಯದಲ್ಲಿ ಎದುರಿಸಿದ ನೋವು-ನಲಿವುಗಳನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ರೇಣುಕಾ ವಹಿಸಿದ್ದರು. ಮುಖ್ಯೋಪಾಧ್ಯಾಯ ಶಿವರಾಜ ಗಂಗಣ್ಣನವರ, ಮಂಜುನಾಥ ದುಗ್ಗತ್ತಿ, ಪತ್ರಕರ್ತ ಎಂ. ಚಿರಂಜೀವಿ, ನಾಗರಾಜ ದೂಳಪ್ಪನವರ, ರಂಗನಾಥ ಎಚ್.ಎಸ್., ಮಂಜುನಾಥ, ಸೌಮ್ಯ ದುರ್ಗಾಂಬಿಕೆ, ಲಕ್ಷ್ಮೀ, ಕವಿತಾ, ನೇತ್ರಾ ಸೇರಿದಂತೆ ಶಾಲಾ ಶಿಕ್ಷಕರು, ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 