ಪ್ರಧಾನಿ ಸ್ವಚ್ಛ ಭಾರತ ಕನಸಿಗೆ ಕೈಜೋಡಿಸುವದು ನಮ್ಮೆಲ್ಲರ ಕರ್ತವ್ಯ: ಡಾ.ಮಲಘಾಣ

ಲೋಕದರ್ಶನವರದಿ

ಮಹಾಲಿಂಗಪುರ: ಸಮುದಾಯ ಆರೋಗ್ಯ ಕೇಂದ್ರ ಕೂಡಾ ನಿಮ್ಮ ಮನೆ ಇದ್ದಂತೆ. ನಿಮ್ಮ ಮನೆ ಸ್ವಚ್ಛವಾಗಿಡುವಂತೆ ಆಸ್ಪತ್ರೆ ಹಾಗೂ ಆಸ್ಪತ್ರೆಯ ಆವರಣವನ್ನು ಸ್ವಚ್ಛವಾಗಿಡಿ ಎಂದು ಮುಧೋಳ ತಾಲೂಕಾ ಆರೋಗ್ಯಾಧಿಕಾರಿ ವಿ.ಎಲ್.ಮಲಘಾಣ ಆಸ್ಪತ್ರೆಯ ಸಿಬ್ಬಂದಿಗೆ ಕರೆ ನೀಡಿದರು.

         ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಚ್ಛಾತಾ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿ ಶನಿವಾರ ಮುಂಜಾನೆ 8 ಗಂಟೆಯಿಂದ 10 ಗಂಟೆಯರೆಗೆ ಆರೋಗ್ಯಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಎಲ್ಲರೂ ಸೇರಿ ಆವರಣವನ್ನು ಸ್ವಚ್ಛಗೊಳಿಸಬೇಕು.

 ಶಾಲೆಗಳಲ್ಲಿ ಪ್ರತಿ ಶನಿವಾರ ಮಕ್ಕಳಿಗೆ ಡ್ರಿಲ್ ಮಾಡಿಸುವಂತೆ ಇಲ್ಲಿ ಪ್ರತಿ ವಾರ ಸ್ವಚ್ಚತಾ ಕಾರ್ಯ ಮಾಡಬೇಕು.

       ಇದರಿಂದ ನಿಮ್ಮ ಹಾಗೂ ಇಲ್ಲಿಗೆ ಬರುವ ರೋಗಿಗಳ ಆರೋಗ್ಯವು ಚೆನ್ನಾಗಿರುತ್ತದೆ ಮತ್ತು ಆಸ್ಪತ್ರೆಯೂ ಅಂದವಾಗಿ ಕಾಣುತ್ತದೆ.ಭಾರತದ ಮುಂದಿನ ಪೀಳಿಗೆಗೆ ಉಜ್ವಲ ಭವಿಷ್ಯ ನೀಡಲು ಪ್ರಧಾನಿಯವರ ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗಲು ನಾವು ಕೂಡಾ ಸಹಕರಿಸಬೇಕೆಂದರು.

      ಈಗಾಗಲೇ ಮುಧೋಳ, ಜಮಖಂಡಿ ತೇರದಾಳ ಗಳಲ್ಲಿ ಈ ಕಾರ್ಯ ಮಾಡಲಾಗಿದೆ.ಪ್ರತಿ ವಾರ ನಡೆಯುವ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸದವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವದೆಂದರು.

         ಮುಧೋಳ ತಾಲೂಕಾ ವೈದ್ಯಾಧಿಕಾರಿ ಸಚಿನ ಶ್ಯಾಮಸುಂದರ,ಡಾ.ಬಿ.ಎಸ್.ಅಂಬಿ,ಡಾ.ವಿಶ್ವನಾಥ ಗುಂಡಾ,ಡಾ.ಸಂಜಯ ಮುರಗೋಡ,ಡಾ.ರಶ್ಮಿ ಧಡೂತಿ,ಸಿಬ್ಬಂದಿಗಳಾದ ಎಸ್.ಎಸ್.ಮಾಮನಿ,ರವಿ ಹೊಸಗೌಡರ ಆರೋಗ್ಯ ರಕ್ಷಣಾ ಸಮೀತಿ ಸದಸ್ಯರಾದ ಪ್ರಕಾಶ ತಟ್ಟಿಮನಿ,ಮಹೇಶ ಚಿಂಚಲಿ,ಜಗದೀಶ ಜಕ್ಕಣ್ಣವರ,ಪವಿತ್ರಾ ಕಲಾಲ ಮುಂತಾದವರು ಭಾಗವಹಿಸಿದ್ದರು.