ಧಾರ್ಮಿಕ ಕಾರ್ಯಕ್ರಮಗಲ್ಲಿ ತೊಡಗಿಸಿಕೊಳ್ಳವುದು ಅಗತ್ಯ- ಸ್ವಾಮೀಜಿ
It is necessary to participate in religious programs - Swamiji
ಬ್ಯಾಡಗಿ 18 : ಧಾರ್ಮಿಕ ಕಾರ್ಯಕ್ರಮಗಳಿಗೆ ಇಂದಿನ ಯುವ ಪೀಳಿಗೆ ತೊಡಗಿಸಿಕೊಳ್ಳುವಂತೆ ಮಾಡುವುದು ಅಗತ್ಯವಾಗಿದೆ ಎಂದು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿಯವರು ಅಭಿಪ್ರಾಯಪಟ್ಟರು. ಪಟ್ಟಣದ ದಾನಮ್ಮ ದೇವಿಯ 14ನೇ ವರ್ಷದ ಜಾತ್ರಾ ಮಹೋತ್ಸವದ ದಿವ್ಯ ಸಾನಿಧ್ಯವಹಿಸಿ ಕಾರ್ಯಕ್ರಮವನ್ನು ಉದ್ಘಾಟಿನೆ ಮತ್ತು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನೂ ನೆರವೇರಿಸಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದವರು.
ಇಂದಿನ ದಿನಮಾನಗಳ ತಂತ್ರಜ್ಞಾನದ ಯುಗದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಂದ ವಿಮುಖರಾಗುತ್ತಿರುವ ಮಕ್ಕಳು ಮತ್ತು ಯುವ ಸಮುದಾಯವನ್ನು ಧಾರ್ಮಿಕ ಕಾರ್ಯಕ್ರಮಗಳಿಗೆ ತೊಡೆಗಿಸುವಂತೆ ಮಾಡುವುದು ಅಗತ್ಯ. ಧಾರ್ಮಿಕ ಆಚರಣೆಗಳಿಂದ ಮನುಷ್ಯನ ಜೀವನದ ಬದುಕು ಸುಂದರವಾಗಲಿದೆ ಎಂಬುದನ್ನು ಪ್ರತಿಯೊಬ್ಬ ಯುವ ಪೀಳಿಗೆಯವರು ತಿಳಿದುಕೂಳ್ಳುವ ಅವಶ್ಯವಿದೆಯೆಂದು ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮಿಗಳು ಹೇಳಿದರು. ನಂಜುಂಡ ಪಂಡಿತರಾಧ್ಯ ದೇಶಿ ಕೇಂದ್ರ ಶಿವಾಚಾರ್ಯ ಸ್ವಾಮಿಗಳು ಗುಬ್ಬಿ ಅಜ್ಜನವರ ಮಠ ಹೇರೂರು. ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿದವರು.
ಪೌರಕಾರ್ಮಿಕರಿಗೆ ಸನ್ಮಾನ ದಾನಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಪಟ್ಟಣವನ್ನು ಸುಂದರವಾಗಿ ಇಡಲು ಹಗಲಿರಳು ಶ್ರಮಿಸುವ ಪುರಸಭೆಯ ಎಲ್ಲಾ ಪೌರಕಾರ್ಮಿಕರನ್ನು ಶ್ರೀ ದಾನಮ್ಮ ದೇವಿಯ ಜಾತ್ರಾ ಕಮಿಟಿಯವರು ಸನ್ಮಾನಿಸಿ ಗೌರವಿಸಿದರು. ಇಂದು ನಡೆದ ಉಚಿತ ಸಾಮೂಹಿಕ ವಿವಾಹದಲ್ಲಿ ಒಂದು ಜೋಡಿ ವಿವಾಹವನ್ನು ನೆರವೇರಿಸಲಾಯಿತು.ಕಾರ್ಯಕ್ರಮದಲ್ಲಿ ರಾಜ್ಯ ಗ್ಯಾರಂಟಿ ಉಪಾಧ್ಯಕ್ಷರು ಎಸ್ ಆರ್ ಪಾಟೀಲ್. ಡಾಕ್ಟರ್ ಎಸ್ ಎನ್ ನಿಡಗುಂದಿ. ರಾಜಣ್ಣ ಮೋರಗೇರಿ.ಮಹೇಶ್ವರಿ ಪ್ರಸಾದ. ಹಾಗೂ ಸಮಿತಿಯ ಅನೇಕರು ದೇವಸ್ಥಾನದ ಸಿಬ್ಬಂದಿಗಳು ಹಾಗೂ ದೇವಿಯ ಭಕ್ತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 