ಶ್ರೀಮಾಲತೇಶ ಸ್ವಾಮಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ: ದ್ಯಾಮಣ್ಣವರ
It is my blessing to have had the opportunity to serve Srimalathesa Swami: Dyamannavara
ರಾಣೇಬೆನ್ನೂರು 21 : ಭಗವಂತನ ಪ್ರೇರಣೆ, ಯೋಗಾನು ಯೋಗ, ಶ್ರೀ ಮಾಲತೇಶ ಸ್ವಾಮಿಯ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ತಮ್ಮ ಪೂರ್ವಜನ್ಮದ ಪುಣ್ಯದ ಸುಕೃತ ಫಲವೆಂದು ಭಾವಿಸಿದ್ದೇನೆ ಎಂದು ಸುಕ್ಷೇತ್ರ ದೇವರಗುಡ್ಡ ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನ ಸಮಿತಿ ನೂತನ ಅಧ್ಯಕ್ಷ ಗವಿ ಸಿದ್ದಪ್ಪ ದ್ಯಾಮಣ್ಣವರ ಹೇಳಿದರು. ಅವರು, ರವಿವಾರ ದೇವಸ್ಥಾನ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.
ದೇವರಗುಡ್ಡ ಧರ್ಮ ಕ್ಷೇತ್ರ ಪವಿತ್ರ ಮತ್ತು ಪುಣ್ಯಕ್ಷೇತ್ರವಾಗಿದೆ, ಇಲ್ಲಿ ಬರುವ ಭಕ್ತರಿಗಾಗಿ ಅನೇಕ ಮೂಲಭೂತ ಸೌಲಭ್ಯಗಳು ದೊರಕಿಸಲು, ತಾವು ಮತ್ತು ಸಮಿತಿ ಸದಸ್ಯರು ಸಂಕಲ್ಪ ಮಾಡಿದ್ದೇವೆ ಎಂದರು.
ಹೈಕೋರ್ಟ್ ಆದೇಶದಂತೆ ನೂತನ ಆಡಳಿತ ಮಂಡಳಿ, ಸಮಿತಿ ರಚನೆಯಾಗಿದೆ. ಇದೀಗ ಅಭಿವೃದ್ಧಿಗೆ ಕಾಲ ಕೂಡಿ ಬಂದಿದೆ ನಮ್ಮ ಸಂಕಲ್ಪ ಈಡೇರಿದೆ,ಏನಿದ್ದರೂ ಇದರ ಪರಿಪೂರ್ಣ ಅಭಿವೃದ್ಧಿಯೇ ನಮ್ಮ ಮುಖ್ಯ ಗುರಿಯಾಗಿದೆ ಎಂದರು.
ಆರೋಪ ಪ್ರತ್ಯಾರೋಪ ಇವೆಲ್ಲವೂ ಸಹಜ: ನಾವು ಭವಿಷ್ಯದ ದಿನಗಳಲ್ಲಿ ಶುದ್ಧ ಹಸ್ತರಾಗಿ ಸೇವೆ ಸಲ್ಲಿಸಲು ಮುಂದಾಗಿದ್ದೇವೆ. ಅವಕಾಶ ಸಿಕ್ಕಿರುವುದು ನಮ್ಮ ನ್ಯಾಯ, ಮತ್ತು ಪ್ರಾಮಾಣಿಕತೆಗೆ ಸಿಕ್ಕ ಜಯವೆಂದು ಭಾವಿಸಿದ್ದೇವೆ, ತಾವು ಯಾರ ಮೇಲೂ ಆರೋಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬರುವ ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. 40ವರ್ಷಗಳಿಂದ ಒಂದೇ ಸಮಿತಿಯಿಂದ ಸಾಗಿ ಬಂದಿದೆ. ಇದರಿಂದ ಯಾವುದೇ ಅಭಿವೃದ್ಧಿ ಇಲ್ಲಿ ಕಂಡಿಲ್ಲ. ಕರ್ನಾಟಕ ಮಹಾರಾಷ್ಟ್ರ ಆಂಧ್ರ, ಸೇರಿ ಬೇರೆ ಬೇರೆ ರಾಜ್ಯದಲ್ಲಿರುವ ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ. ಧರ್ಮ ಕ್ಷೇತ್ರದ ಅಭಿವೃದ್ಧಿ ಮತ್ತು ಸಕಲ ಸೌಕರ್ಯ ಕಲ್ಪಿಸಲು ಸಮಿತಿ ನಿರ್ಧರಿಸಿದೆ ಎಂದರು.
ಅನೇಕ ವರ್ಷಗಳ ಹೋರಾಟದ ಫಲ ಹೈಕೋರ್ಟ್ ನಿರ್ಧಾರದಿಂದ ದಕ್ಕಿದೆ. ಗ್ರಾಮಸ್ಥರ ನಿರಂತರ ಒಗ್ಗಟ್ಟಿನ ಹೋರಾಟದ ಫಲವಾಗಿ ನ್ಯಾಯ ದಕ್ಕಿದಂತಾಗಿದೆ ಎಂದು
ಚೇರ್ಮನ್ ಭರಮಪ್ಪ ಉರ್ಮಿ ಅವರು ಮಾಧ್ಯಮಕ್ಕೆ ವಿವರಿಸಿದರು. ಈ ಸಂದರ್ಭದಲ್ಲಿ ಲೋಕಲ್ ಕಮಿಟಿ ಮೆಂಬರ್ ಸುರೇಶ ತಳಗೇರಿ, ಸದಸ್ಯರಾದ ಪ್ರಕಾಶ ಬಳ್ಳಾರಿ, ದೊಡ್ಡಮನಿ ಪಾಂಡುರಂಗ ಶೆಟ್ಟಿ, ವೀರನಗೌಡ ಪಾಟೀಲ, ಅರುಣ ದತ್ತಾತ್ರೇಯ ಜೋಶಿ, ಗೂಳಪ್ಪ ದೇವಗಪ್ಪನವರ, ಪವನ ಪೂಜಾರ, ಕೆ ಎನ್.ಪಾಟೀಲ ಮುಂತಾದವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 