ಮನುಷ್ಯನಾಗುವುದು ಮುಖ್ಯ’ ಶಂಕರ ಹಲಗತ್ತಿ

ಮನುಷ್ಯನಾಗುವುದು ಮುಖ್ಯ’ ಶಂಕರ ಹಲಗತ್ತಿ  It is important to be a human being,' Shankara Halagatti

ಲೋಕದರ್ಶನ ವರದಿ

ಧಾರವಾಡ 28: ನಾನು ಯಾರು ಎಂದು ಪ್ರಶ್ನೆಯನ್ನು ನಾವೇ ಹಾಕಿಕೊಂಡು ಪ್ರಪಂಚದಲ್ಲಿ ಜರುಗುತ್ತಿರುವ ಅಸಮಾನತೆಯ ಘಟನೆಗಳನ್ನು ಅರಿತು ಹೋಗಲಾಡಿಸಲು ರಂಗ ರಂಗಭೂಮಿ ಕಲಾವಿದರಾಗಿ ಮೊದಲು ಮನುಷ್ಯನಾಗಿ ಉತ್ತಮ ವಾತಾವರಣ ನಿರ್ಮಾಣ ಮಾಡುವ   ಜವಾಬ್ದಾರಿ ಕೆಲಸ ಮಾಡಬೇಕಾಗಿದೆ. ಪ್ರಪಂಚದ  ಕಲಾವಿದರು ನಟರು ನಿರ್ದೇಶಕರು ಸಾಹಿತಿಗಳು ಚಿಂತಕರು ಹಾಗೂ ವಿಜ್ಞಾನಿಗಳು ರಂಗಭೂಮಿ ಸೇವೆಗೆ ಸೇವಿ ಸಲ್ಲಿಸಿ ಮಡಿದವರಿಗೆ ನಮಿಸಿ ಹೂ ಸಮರೆ​‍್ಣ ಮಾಡಿ ಉದ್ಘಾಟನೆ ಮಾಡಿ ಈ ರೀತಿ ಮಾತನಾಡಿದರು 

ರಂಗ ನಿರ್ದೇಶಕರಾದ ಮಹಾದೇವ ಹಡಪದ ಮಾತನಾಡಿ ಸುತ್ತ ಮುತ್ತಲಿನ ಪರಿಸರವನ್ನು ರಕ್ಷಿಸಲು ಬೆಳೆಸಲು ನಾನು ಏನು ಮಾಡಬಹುದು, ಯುದ್ಧ ಮಾಡುವುದರಿಂದ ಯಾರಿಗೂ ಲಾಭವಿಲ್ಲ ಆದ್ದರಿಂದ ಜನರು ಮತ್ತು ಭೂಮಿ ಹಾಳಾಗುತ್ತದೆ ಎಂಬ ಸಂದೇಶವನ್ನು ರಂಗಭೂಮಿಯಿಂದ ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದರು. 

ರಂಗಕರ್ಮಿ ಜೋಸೆಫ್ ಮಲ್ಲಾಡಿ ಮಾತನಾಡಿ ರಂಗಭೂಮಿಯಲ್ಲಿ ಬದ್ಧತೆ ಬಹಳ ಮುಖ್ಯ, ಕಲಾವಿದನಲ್ಲಿ ಶ್ರದ್ಧೆ ಮುಖ್ಯವಾಗಿರಬೇಕು. ನಮ್ಮ ರಾಜ್ಯದಲ್ಲಿ ಅನೇಕ ನಾಟಕ ಕಂಪೆನಿಗಳಲ್ಲಿ ಕಲಾವಿದರು ಬೆಳೆಯಬೇಕಾದರೆ ಹಂತ ಹಂತವಾಗಿ ಕೆಲಸ ಮಾಡಬೇಕಾಗಿತ್ತು ನಂತರ ನಟನಾಗಿ ನಾಯಕನಾಗಿ ಗುರುತಿಸಲಾಗುತ್ತಿತ್ತು. ಇಂದಿನ ರಂಗಭೂಮಿಯ ಎಲ್ಲರೂ ಈ ಜಗತ್ತು ಹಿಂದೆ ಹೇಗಿತ್ತು, ಈಗ ಹೇಗಿದೆ ಮತ್ತೆ ಮುಂದೆ ಹೇಗಿರಬಹುದು ಎನ್ನುವುದನ್ನ ಅರ್ಥೈಸಿಕೊರ್ಳಲುವುದು ನಟನಾದವರ ಜವಾಬ್ಧರಿ ಎಂದು ತಿಳಿಸಿದರು.  

ಧಾರವಾಡ ಸಮುದಾಯದ ಅಧ್ಯಕ್ಷರಾದ ಬಿ.ಐ.ಈಳಿಗೇರ ಸಭೆಯ ಅಧ್ಯಕ್ಷತೆವಹಿಸಿ ಇಂದಿನ ದಿನದಲ್ಲಿ ಮಾನವೀಯತೆ ಬಹಳ ಮುಖ್ಯ, ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಬಾಳುವುದು ಮುಖ್ಯ ಶಾಂತಿ, ಪ್ರೀತಿ, ಸಹಬಾಳ್ವೆ ಎಲ್ಲಡೆ ನೆಲೆಸಬೇಕಾಗಿದೆ. ಜಾಗತಿಕ ಯುದ್ಧಗಳನ್ನು ಗಮನಿಸಿದಾಗ ದ್ವೇಷ, ಅಸೂಯೆ, ವೈಶ್ಯಮ್ಯ ಮಾಡುವುದಲ್ಲದೆ ಮಾನವಕುಲದ ಸರ್ವನಾಶದ ಹಾದಿಗೆ ಸರಿಯುತ್ತಿದೆ. ಆದ್ದರಿಂದ ರಂಗಭೂಮಿಯ ನಟ, ನಿರ್ದೇಶಕ, ರಂಗ ತಂಡಗಳ ಜವಾಬ್ದಾರಿ ದೊಡ್ದದು. ಸಮಾಜದಲ್ಲಿ ಉತ್ತಮ ವಾತವರಣ  ತರಬೇಕಾದದ್ದು ರಂಗಭೂಮಿಯ ಬಹುಮುಖ್ಯ ಕೆಲಸ ಎಂದು ಮಾತನಾಡಿದರು. 

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಾದ ಶಂಕರ ಹಲಗತ್ತಿ. ಬಿ.ಮಾರುತಿ. ಡಾ ಬಸವರಾಜ ಕುರಿಯವರ. ಮಹಾದೇವ ಹಡಪದ. ಪ್ರಭು ಕುಂದರಗಿ ಸೇರಿದಂತೆ ಸನ್ಮಾನಿಸಿ ಗೌರವಿಸಿದರು.  ಈ ಸಂಧರ್ಭದಲ್ಲಿ  ಸಮುದಾಯಕ್ಕೆ ಸೇವೆ ಸಲ್ಲಿಸಿದ ಎಸ್ ಎಮ್ ದಾನಪ್ಪಗೌಡ್ರು, ಶ್ರೀ ಸುನಿಲ್ ಗಿರಡ್ಡಿ, ರಾಜು ಝಿಂಗಾಡೆ, ಪ್ರಹ್ಲಾದ್ ಕುಲಕರ್ಣಿ, ಡಾ. ಪ್ರಕಾಶ್ ಮಲ್ಲಿಗವಾಡ, ಶ್ರೀಮತಿ ಸ್ನೇಹಾ ಜೋಶಿ, ಶಶಿಕಲಾ ಪುರೂಟಿ, ಯಲ್ಲಪ್ಪ ಗಾಣಿಗೇರ, ಮಹಾಂತೇಶ ದೊಡ್ಡಮನಿ, ಡಾ. ಅಲ್ಲಾಭಕ್ಷ ಮಕಾನದಾರ್, ಜಯಶ್ರೀ ಗಾಡದ ಈ ಮಹನೀಯರಿಗೆ ರಂಗ ಗೌರವ ನೀಡಿ ಗೌರವಿಸಲಾಯಿತು. ಅಲ್ಲದೆ ರಂಗ ಗೀತೆಗಳನ್ನು ಹಾಡಿದ ಮಹಿಳಾ ಮಂಡಳದ ಸದಸ್ಯರಿಗೆ ನೆನೆಪಿನ ಕಾಣಿಕೆ ನೀಡಲಾಯಿತು  

ಈ ಸಂದರ್ಭದಲ್ಲಿ ಡಾ ಶಿವಾನಂದ ಶೆಟ್ಟರ್‌. ಎನ್‌. ಎಂ ಪಾಟೀಲ್, ಬಿ.ಎನ್‌.ಪೂಜಾರಿ, ಎ.ಎಂ ಖಾನ್, ವಿಜಯೇಂದ್ರ ಅರ್ಚಕ, ರಮೇಶ ಮೊಟೆಬೆನ್ನೂರು, ರವಿ ಪಾಟೀಲ, ಯಲ್ಲಪ್ಪ ತಿರ್ಲಕೊಪ್ಪ, ಶೇಖಪ್ಪ ಹುಚ್ಚನ್ನವರ, ಅನ್ನಪೂರ್ಣಾ ಮಡಿವಾಳರ, ಲೀಲಾ ಮದ್ನೂರ, ಅನ್ನಪೂರ್ಣ ಮುದುಗಲ್ಲ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಭೀಮಸೇನ್ ಕಾಗಿ ಅವರು ಎಲ್ಲಾ ಅತಿಥಿಗಳನ್ನು ಸ್ವಾಗತಿಸಿದರು.ಈರಣ್ಣ ಐನಾಪೂರ ಅವರ ತಂಡದವರಿಂದ ಕ್ರಾಂತಿಕಾರಿ ಹಾಡುಗಳನ್ನು ಪ್ರಸ್ತುತ ಪಡಿಸಿದರು.ಪ್ರೇಮೀಳಾ ಜಕ್ಕಣ್ಣವರ ಕಾರ್ಯಕ್ರಮ ನಿರೂಪಿಸಿದರು. ಡಾ ಸುಮಂಗಲಾ ಮರಡಿ ಒಂದಾರಿ​‍್ಣ ಮಾಡಿದರು ನೂರಾರು ರಂಗಲಾವಿದರು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು.