ಕತ್ತಲೆಯಿಂದ ಬೆಳಕಿನಡೆಗೆ ಸಾಗುವುದಾಗಿದೆ : ಶಿವಾಚಾರ್ಯರು
It is about moving from darkness to light: Shivacharya
ಮಾಂಜರಿ 21: ಕಾರ್ತಿಕೋತ್ಸವ ಮಾಸ ಅತ್ಯಂತ ಪವಿತ್ರವಾಗಿದ್ದು, ದೀಪೋತ್ಸವದ ಮೂಲಕ ದೇವರನ್ನು ಸ್ಮರಿಸುತ್ತ ಕತ್ತಲೆಯಿಂದ ಬೆಳಕಿನಡೆಗೆ ಸಾಗುವುದಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರುಗಳು ಹಾಗೂ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ವೀರಭದ್ರ ದೇವಸ್ಥಾನ ಹಾಗೂ ಕಾಡಸಿದ್ದೇಶ್ವರ ಸಂಸ್ಥಾನ ಮಠದ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ಡಾ ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯರು ನುಡಿದರು.
ಅವರು ಗುರುವಾರರಂದು ರಾತ್ರಿ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ಶ್ರೀ ಕಾಡಸಿದ್ದೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ದೀಪೋತ್ಸವ ಕಾರ್ತಿಕ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾರ್ತಿಕ ಮಾಸ ಅತ್ಯಂತ ಶ್ರೇಷ್ಠವಾಗಿದ್ದು, ಈ ಸಂದರ್ಭದಲ್ಲಿ ದೀಪಾರಾಧನೆ ಮಾಡಿದರೆ ಐಶ್ವರ್ಯ, ಸಂಪತ್ತು ಆರೋಗ್ಯ ಭಾಗ್ಯ ಪ್ರಾಪ್ತಿಯಾಗುತ್ತದೆ. ಈ ಕಾರಣಕ್ಕೆ ಪ್ರಸಿದ್ಧ ದೇವಾಲಯ ಹಾಗೂ ಶ್ರೀಮಠದಲ್ಲಿ ಕಾರ್ತಿಕ ದೀಪೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ ಎಂದರು.ಸಂದರ್ಭದಲ್ಲಿ ಮಹಿಳೆಯರು, ಮಕ್ಕಳು ಪಾಠ ಶಾಲೆಯ ವಿದ್ಯಾರ್ಥಿಗಳು ದೀಪ ಬೆಳಗಿಸಿದರು. ಈ ವೇಳೆ ಪಾಠಶಾಲೆಯ ಗುರುಗಳಾದ ಶ್ರೀಶೈಲ್ ಹಿರೇಮಠ ಶಾಸ್ತ್ರಿ ಮಾತನಾಡಿ
ಕಾರ್ತಿಕ ಮಾಸದಲ್ಲಿ ದೀಪ ಹಚ್ಚುವುದು ಅಂಧಕಾರ ನಿವಾರಣೆ ಹಾಗೂ ಜ್ಞಾನದ ಬೆಳಕು ಹರಡುವ ಸಂಕೇತ. ಈ ದೀಪಾರಾಧನೆಯಿಂದ ಭಕ್ತರ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿ ಪ್ರಾಪ್ತಿಯಾಗುತ್ತದೆ ಪ್ರತಿ ವರ್ಷದಂತೆ ಈ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿ ಭಕ್ತಿ ಭಾವದಿಂದ ನೆರವೇರಿಸಿದ ಕಾರ್ತಿಕ ದೀಪೋತ್ಸವ ನೋಡಿ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು
ಸಂಜೆಯ ವೇಳೆ ಮಠದ ಆವರಣ ಬಣ್ಣಬಣ್ಣದ ರಂಗೋಲಿಗಳು ಮತ್ತು ಸಾವಿರಾರು ದೀಪಗಳಿಂದ ತೇಜೋಮ ಯವಾಗಿ ಕಂಗೊಳಿಸಿತು. ಮಕ್ಕಳು, ಮಹಿಳೆಯರು, ಹಿರಿಯರು, ಯುವಕರು ಎಲ್ಲರೂ ಒಟ್ಟಾಗಿ ದೀಪ ಹಚ್ಚಿ ಕಾರ್ತಿಕ ದೀಪೋತ್ಸವ ಆಚರಿಸಿದರು. ಈ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯ ಪ್ರಕಾಶ್ ಗಣಾಚಾರಿ ಸುನಿಲ್ ಬಿರದೆ ಶ್ರೀಕಾಂತ್ ಉಮ್ರಾಣಿ ರಾಜಶೇಖರ್ ಮೊಗುದುಮ ಮಹಾದೇವ ಲಕ್ಕಪ್ ಗೊಳ್ ಸುನಿಲ್ ಹೊಸಮನಿ ವಿಶ್ವರಾಧ್ಯ ಹಿರೇಮಠ ಬಸವರಾಜ್ ಗುರೂಜಿ ಮಲ್ಲಯ್ಯ ಜಡೆ ಈರಗೌಡ ಪಾಟೀಲ್ ಅಡವಯ್ಯ ಅರಳಿಕಟ್ಟಿ ಮಠ ಮಲ್ಲಪ್ಪ ಸಿಂದೂರ್ ಹಾಗೂ ಮಾಂಜರಿ ಯೆಡುರ ಚಂದುರ್ ಇಂಗಳಿ ಕಲ್ಲೋಳ್ ಮುಂತಾದ ಗ್ರಾಮದ ಭಕ್ತಗಳು ಪಾಲ್ಗೊಂಡಿದ್ದರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 