ಮಕ್ಕಳಲ್ಲಿ ಸಂಸ್ಕೃತಿ-ಸಂಸ್ಕಾರಗಳು ಮಾಯ ವಿಷಾದ...

ಮಕ್ಕಳಲ್ಲಿ ಸಂಸ್ಕೃತಿ-ಸಂಸ್ಕಾರಗಳು ಮಾಯ ವಿಷಾದ... It is a pity that culture and traditions are lost in children...

ವಿಜಯಪುರ 25 :  ಮಕ್ಕಳಲ್ಲಿ ಸಂಸ್ಕೃತಿ-ಸಂಸ್ಕಾರ ಮತ್ತು ಮೌಲ್ಯವನ್ನು ಕಲಿಸುವಲ್ಲಿ ಇಡೀ ಕುಟುಂಬದ ಪಾತ್ರ ಇದ್ದರೂ ಅದರಲ್ಲಿ ತಾಯಂದಿರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಅದಕ್ಕಂತಲೇ ಹಿರಿಯರು ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು ಎಂದು ಹೇಳಿದ್ದಾರೆ. ಮಗುವು ಚಿಕ್ಕವನಿರುವಾಗಲೇ ತಾಯಿಯಾದವಳು ತಪ್ಪು ಮಾಡಿದಾಗ ತಿದ್ದಿ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೋತ್ಸಾಹಿಸಿ, ಒಳ್ಳೆಯ ನಾಗರೀಕನಾಗುವಂತೆ ರೂಪಿಸಬೇಕು ಎಂದು ಹಿರಿಯ ಮಕ್ಕಳ ಸಾಹಿತಿ ಶ್ರೀ ಫ.ಗು.ಸಿದ್ದಾಪೂರ ಅವರು ಅಭಿಪ್ರಾಯಪಟ್ಟರು.ನಗರದ ಅಥಣಿ ರಸ್ತೆಯ ಅಲ್‌-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಸೇನಾ ನಗರದ ಶಿವಾಲಯದ ದೇವಸ್ಥಾನದಲ್ಲಿ ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿ ಸಂಘ (ರಿ), ನವರಸಪುರ ಇವರ ಸಹಯೋಗದಡಿಯಲ್ಲಿ ದಿನಾಂಕ: 22-03-2026 ರಂದು ಜರುಗಿದ “ಮಕ್ಕಳಲ್ಲಿ ಸಂಸ್ಕೃತಿ-ಸಂಸ್ಕಾರ ್ಘ ಮೌಲ್ಯಧಾರಣೆಯಲ್ಲಿ ತಾಯಂದಿರ ಪಾತ್ರ” ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 

ಅವರು ಮಾತನಾಡುತ್ತಾ, ಇಂದಿನ ಮಕ್ಕಳಲ್ಲಿ ಸಂಸ್ಕೃತಿ-ಸಂಸ್ಕಾರ ಮಾಯವಾಗುತ್ತಿರುವುದು ತೀರ ಕಳವಳಕಾರಿ ಸಂಗತಿ. ತಾಯಿ ಮಕ್ಕಳಿಗೆ ದೇಶಕ್ಕಾಗಿ ತ್ಯಾಗ ಮಾಡಿದ ವೀರ-ಮಹಾಪುರುಷರು ಜೀವ-ತತ್ವ-ಸಿದ್ದಾಂತ, ರಾಷ್ಟ್ರೇ​‍್ರಮ, ತ್ಯಾಗ-ಬಲಿದಾನ ಮತ್ತು ಸಾಧಕರ ಯಶೋಗಾಥೆಯ ಬಗ್ಗೆ ನೀತಿ ಕಥೆಗಳನ್ನು ಹೇಳುವುದರ ಮೂಲಕ ಮನವರಿಕೆ ಮಾಡಿಕೊಡಬೇಕು. ತನ್ನ ಮಕ್ಕಳನ್ನು ಜಗತ್ತಿಗೆ ಬೆಳಕನ್ನು ನೀಡುವ ಆದರ್ಶ ಮಹಾಪುರುಷರನ್ನಾಗಿ ಮಾಡುವ ಕನಸನ್ನು ನನಸಾಗಿಸುವ ಪ್ರವೃತ್ತಿ ಮತ್ತು ಪ್ರಯತ್ನ ತಾಯಿಯಲ್ಲಿರಬೇಕು. ಕಾಲ ಕೆಟ್ಟಿದೆ, ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂಬ ಮಾತು ಎಲ್ಲೆಡೆ ನಾವು ಕೇಳುತ್ತೇವೆ. ಕಾಲವನ್ನು ನಾವು ಕೆಡಿಸಿದ್ದೇವೆ. ಅಂದರೆ ಮಕ್ಕಳನ್ನು ಬೆಳೆಸುವುದರಲ್ಲಿ ಹೆತ್ತವೆ, ಶಿಕ್ಷಕರ, ಹಿರಿಯರ, ಬಂಧು-ಬಬಾಂಧವರ, ಸಮಾಜದ ಎಲ್ಲ ಪಾತ್ರವಿದ್ದರೂ ವಿಶೇಷವಾಗಿ ತಾಯಿಯ ಪಾತ್ರ ಬಹಳ ಮುಖ್ಯ. ಗಿಡವಾಗಿದ್ದು, ಮರವಾಗಿ ಬಗ್ಗೀತೆ ಎಂಬ ಗಾದೆ ಮಾತಿನಂತೆ, ಮನೆಯಲ್ಲಿನ ಹಿರಿಯರು ಮಕ್ಕಳಿಗೆ ಬಾಲ್ಯದಲ್ಲಿಯೇ ಒಳ್ಳೆಯ ಸಂಸ್ಕಾರ ನೀಡಿ ಅವರು ಮುಂದೆ ದೇಶದ ಜವಾಬ್ದಾರಿಯುತ ನಾಗರೀಕರಾಗಿ ಹೊರ ಹೊಮ್ಮದಂತೆ ರೂಪಿಸಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ. ಎಂದರು.  

ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಸ್‌.ಎಲ್‌.ಇಂಗಳೇಶ್ವರ ಅವರು ಮಾತನಾಡುತ್ತಾ, ಇಳಿ ವಯಸ್ಸಿನಲ್ಲಿ ದೇವರು, ದೇವರ ನಾಮಸ್ಮರಣೆ, ಅಧ್ಯಾತ್ಮ, ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸುಖ-ಶಾಂತಿ ಮತ್ತು ನೆಮ್ಮದಿಯ ಜೀವನವನ್ನು ಕಳೆಯಬೇಕೆಂದು ಸಲಹೆ ನೀಡಿದರು. ನಮ್ಮ ಸಂಘದಡಿಯಲ್ಲಿ ಮಾಸಿಕವಾಗಿ ಒಂದೊಂದು ವಿಷಯದ ಮೇಲೆ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಸಂಘವು ಹಿರಿಯ ನಾಗರೀಕರ ಸಮಸ್ಯೆಗಳನ್ನು ಅರಿತು ಸರ್ಕಾರದಿಂದ ದೊರೆಯುವ ಸೌಲಭ್ಯ ಮತ್ತು ಯೋಜನೆಗಳ ಪ್ರಯೋಜನ ಪಡೆಯಲು ಅನುಕೂಲ ಕಲ್ಪಿಸಲಾಗುತ್ತದೆ ಎಂದರು.  

ಈ ಕಾರ್ಯಕ್ರಮದಲ್ಲಿ ಬಿ.ಡಿ.ಕಡಕೋಳ, ಲಕ್ಷ್ಮಣ ಶಿಂಧೆ, ಕೆ.ಜೆ.ಕೋಟ್ಯಾಳ,, ಎಸ್‌.ಐ.ಹಿರೇಮಠ ಇನ್ನಿತರರು ಸಹ ವೇದಿಕೆಯ ಮೇಲಿದ್ದರು.  ಕಾರ್ಯಕ್ರಮದಲ್ಲಿ ಸುರೇಶ ಹಲಕುಡೆ, ಎ.ಬಿ.ಬಿರಾದಾರ, ಆಶಾ ಬಾಸೂತಕರ, ಶಾಂತಾ ಹೆರಕಲ್, ವೆಂಕಟೇಶ ಹೊಸಮನಿ, ಪ್ರೊ. ಎಂ.ಎಸ್‌.ಖೊದ್ನಾಪೂರ, ಶಿವಾಲಯ ದೇವಸ್ಥಾನದ ಅಧ್ಯಕ್ಷ ಗುರುಬಸಯ್ಯ ಹಿರೇಮಠ, ಎಸ್‌.ಎ. ಘೋರೆ​‍್ಡ, ಎಸ್‌.ಎ.ಇಂಗಳೆ, ಶ್ರೀಶೈಲ ಕಿಚಡಿ, ಬಿ.ಆರ್‌.ಬಿರಾದಾರ, ಎಸ್‌.ಜಿ.,ನಿಂಗನಗೌಡ್ರ ಇನ್ನಿತರರು ಸಹ ಉಪಸ್ಥಿತರಿದ್ದರು. ಶ್ರೀ ಎಸ್‌.ಎಂ.ಸಾಲಿಮಠ ಕಾರ್ಯಕ್ರಮ ನಿರೂಪಿಸಿದರು. ಎ.ಬಿ.ಬಿರಾದಾರ ವಂದಿಸಿದರು. ಕಾರ್ಯಕ್ರಮದಲ್ಲಿ ನವರಸಪುರ ಬಡಾವಣೆಯ ಹಿರಿಯ ನಾಗರೀಕರ ಸಂಘದ  ನೂರಾರು ಸದಸ್ಯರು, ಮಹಿಳೆಯರು, ಯುವಕರು ಹಾಗೂ ಮಕ್ಕಳು ಭಾಗವಹಿಸಿದ್ದರು.