370 ಕೋಟಿ ರೂ. ಠೇವಣಿ ಸಂಗ್ರಹಿಸಿ 10 ಕೋಟಿ 6 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ
It has collected Rs. 370 crore in deposits and earned a net profit of Rs. 10 crore 6 lakh
ಲೋಕದರ್ಶನ ವರದಿ
ಮಾಂಜರಿ 05: ಗ್ರಾಹಕರ ವಿಶ್ವಾಸಾರ್ಹ ಸಹಕಾರಿ ಸಂಸ್ಥೆಯಾಗಿ ಬೆಳವಣಿಗೆ ಕಂಡಿರುವ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಶ್ರೀ ಕೆ ಪಿ ಮಗನ್ನವರ ಲಕ್ಷ್ಮಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಗೆ ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ 370 ಕೋಟಿ ರೂ. ಠೇವಣಿ ಸಂಗ್ರಹಿಸಿ 10 ಕೋಟಿ 6 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ಶುರುಗುಪ್ಪಿ ಶುಗರ್ ವರ್ಕ್ ಅಧ್ಯಕ್ಷ ಹಾಗೂ ಸಗಲಗಾ ಮಾಜಿ ಶಾಸಕ ಕಲ್ಲಪ್ಪಣ್ಣ ಮಗ್ಗೆನ್ನವರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕರ್ನಾಟಕ, ರಾಜ್ಯಗಳಲ್ಲಿ ಒಟ್ಟು 29 ಶಾಖೆಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಸಹಕಾರಿ ಸಂಘದಲ್ಲಿ ಪ್ರಮುಖ ಸಹಕಾರಿ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದರು.ಸಂಸ್ಥೆಯು ಗ್ರಾಹಕರ ವಿಶ್ವಾಸ ಹಾಗೂ ಸಿಬ್ಬಂದಿ ಪ್ರಾಮಾಣಿಕತೆಯಿಂದ ಉತ್ತಮ ಸಾಧನೆ ಮಾಡುತ್ತಿದೆ. ಪ್ರಸ್ತುತ ಸಂಸ್ಥೆಯಲ್ಲಿ 12045 ಸದಸ್ಯರಿದ್ದು, 89 ಲಕ್ಷ .30 ಸಾವಿರ ರೂ. ಷೇರು ಬಂಡವಾಳ, 46 ಕೋಟಿ38 ಲಕ್ಷ ರೂ. ಕಾಯ್ದಿಟ್ಟ ಹಾಗೂ ಇತರೆ ನಿಧಿಗಳು, 238 ಕೋಟಿ ರೂ. ಠೇವಣಿ, 370 ಕೋಟಿ 68 ಲಕ್ಷ ರೂ. ಸಾಲ ಮತ್ತು ಮುಂಗಡಗಳು, 171 ಕೋಟಿ 26 ಲಕ್ಷ ರೂ. ಇದೆ ಈ ವರ್ಷದ ಆರ್ಥಿಕ ಸಾಲಿನಲ್ಲಿ ಸಂಸ್ಥೆಗೆ 10 ಕೋಟಿ 6 ಲಕ್ಷ ನಿವಳ ಲಾಭ ಗಳಿಸಲಾಗಿದೆ ಎಂದು ಅವರು ಹೇಳಿದರು
ಸಹಕಾರ, ಕೃಷಿ, ಹಣಕಾಸು, ಶಿಕ್ಷಣ, ಹೈನುಗಾರಿಕೆ ಹಾಗೂ ವ್ಯಾಪಾರ ಕ್ಷೇತ್ರಗಳಲ್ಲಿ ನಮ್ಮ ಸಂಸ್ಥೆ ಸಕ್ರಿಯವಾಗಿದ್ದು, ಸದಸ್ಯರ ಹಿತಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿವೆ ಎಂದು ಅವರು ಹೇಳಿದರು ಸಂಸ್ಥೆಯ ಒಟ್ಟು 29 ಶಾಖೆಗಳ ಪೈಕಿ ಹಾರುಗಿರಿ, ಗುಗೌಳಖೋಡ, ತೇರದಾಳ, ಮೊಳೆ, ಪರಮಾನಂದವಾಡಿ, ಉಗಾರಬುದ್ದಕ ಹಾಗೂ ಪಟ್ಟಣಕುಡಿ ಶಾಖೆಗಳು ಶೇ.100 ಸಾಲ ವಸೂಲಿ ಸಾಧಿಸಿದ್ದು, ಆ ಶಾಖೆಗಳ ವ್ಯವಸ್ಥಾಪಕರನ್ನು ಈ ವೇಳೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಪ್ರದೀಪ್ ಮಗೇಣ್ನವರ, ಅಧ್ಯಕ್ಷ ಸತೀಶ್ ಮಗೇಣ್ನವರ, ಉಪಾಧ್ಯಕ್ಷ ಸದಾಶಿವ ಮಿರ್ಜೆ, ನಿರ್ದೇಶಕರು ಜಿನ್ನಪ್ಪ ಶೇಡಬಾಳೆ, ಅಶೋಕ್ ಚಿಮಾಯಿ, ಭೀಮು ಬೋಲೆ, ಸಂಜಯ ಪಾಟೀಲ, ಅಪ್ಪಾಸಾಹೇಬ ಜಮದಾಡೆ, ನೆಮಿನಾಥ ಪಟ್ಟಣಕುಡೆ, ಸುರಗೌಡ ಪಾಟೀಲ, ಸುಭಾಷ್ ಮಗೇಣ್ನವರ, ಇಲಿಯಾಸ್ ಮುಲ್ಲಾ, ವಿಲಾಸ್ ಚವ್ಹಾಣ್, ಬೇಬಿತಾಯಿ ಕೊಠಿವಾಲೆ, ಸರಿತಾ ಮಂಗಸೂಳೆ, ದತ್ತು ಬಾಣೆ, ಸಿಇಒ ಸಾಗರ್ ಮಂಗಸೂಳೆ, ಉಪ ವ್ಯವಸ್ಥಾಪಕ ರಾವಸಾಹೇಬ ಕೊಠಿವಾಲೆ ಸೇರಿದಂತೆ ಎಲ್ಲಾ ಶಾಖೆಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ವಿಶ್ವಾಸ್ ಮಾಯಾಣ್ಣವರ ನಡೆಸಿದರು, ಧನ್ಯವಾದಗಳನ್ನು ವಿಶಾಲ್ ಕೋಳಿ ಸಲ್ಲಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 