ಚಿತ್ರಕಲೆಗೆ ಮನ್ನಣೆ ಸಿಗದೇ ಇರುವುದು ವಿಪರ್ಯಾಸ

ಚಿತ್ರಕಲೆಗೆ ಮನ್ನಣೆ ಸಿಗದೇ ಇರುವುದು ವಿಪರ್ಯಾಸ It's ironic that painting doesn't get recognition

ಧಾರವಾಡ, 06 : ಚಿತ್ರಕಲೆ ಎಲ್ಲ ಕಾಲಕ್ಕೂ ಎಲ್ಲರಿಗೂ ಸಲ್ಲುವ ಕಲೆಯಾಗಿದ್ದು, ಆದಕ್ಕೆ ಸಿಗಬೇಕಾದಷ್ಟು ಮನ್ನಣೆ ಸಿಗದೇ ಇರುವುದು ವಿಪರ್ಯಾಸ ಎಂದು ಚಿತ್ರಕಲಾ ಶಿಲ್ಪಿ ಡಿ.ವ್ಹಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟದ ನೂತನ ಅಧ್ಯಕ್ಷ ಬಿ. ಮಾರುತಿ ಅಭಿಪ್ರಾಯಪಟ್ಟರು. 

ಕರ್ನಾಟಕ ವಿದ್ಯಾವರ್ಧಕ ಸಂಘವು ಏರಿ​‍್ಡಸಿದ್ದ ಧಾರವಾಡ ಹಾಗೂ ಬೆಳಗಾವಿಯ ಏಳು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗಳಿಗೆ ನೂತನವಾಗಿ ನೇಮಕಗೊಂಡ ಅಧ್ಯಕ್ಷರುಗಳು ಹಾಗೂ ಗೌರವ ಸದಸ್ಯರುಗಳ ಸನ್ಮಾನ ಸಮಾರಂಭದಲ್ಲಿ ಸನ್ಮಾನ, ಸ್ವೀಕರಿಸಿ ಮಾತನಾಡಿದರು.  

ಮುಂದುವರೆದು, ಕ.ವಿ.ವ. ಸಂಘವು ಚಿತ್ರಕಲಾವಿದರ ಭಾವನೆಗೆ ಸ್ಪಂದಿಸಿ ಕ.ವಿ.ವ. ಸಂಘದಲ್ಲಿ ಸುಸಜ್ಜಿತ ಆರ್ಟ ಗ್ಯಾಲರಿ ಸ್ಥಾಪಿಸಿದ್ದು ಅಭಿನಂದನೀಯವಾದುದು. ಕ.ವಿ.ವ. ಸಂಘವು ಜಿಲ್ಲೆಯ ಎಲ್ಲಾ ರಾಷ್ಟ್ರೀಯ  ಸ್ಮಾರಕ ಟ್ರಸ್ಟಗಳ ಸಹಯೋಗದಲ್ಲಿ ಧಾರವಾಡ ಜಿಲ್ಲಾ ಉತ್ಸವ ಮಾಡುವಂತಾಗಲಿ. ಚಿತ್ರಕಲಾ ಪ್ರದರ್ಶನಕ್ಕೆ ಪ್ರತಿ ಜಿಲ್ಲೆಯಲ್ಲಿ ಆರ್ಟ ಗ್ಯಾಲರಿ ಸ್ಥಾಪನೆ ಅಗತ್ಯವಾಗಿದೆ ಎಂದರು. 

ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ ನೂತನ ಅಧ್ಯಕ್ಷರಾದ ಪಂ. ಕೈವಲ್ಯಕುಮಾರ ಗುರವ ಮಾತನಾಡಿ, ಧಾರವಾಡ ಪ್ರವೇಶಿಸುವ ನಾಲ್ಕು ದಿಕ್ಕುಗಳಲ್ಲಿ ಸಂಗೀತ ಹಾಗೂ ಸಾಂಸ್ಕೃತಿಕ ನಗರಕ್ಕೆ ಸ್ವಾಗತ ಕೋರುವ ಪ್ರವೇಶ ದ್ವಾರ ನಿರ್ಮಾಣವಾಗಬೇಕೆಂದು ಹೇಳಿ ಕ.ವಿ.ವ. ಸಂಘದ ಜೊತೆಗೂಡಿ ಕಾರ್ಯಕ್ರಮ ಆಯೋಜಿಸಲಾಗುವುದೆಂದರು. 

ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ ಅಧ್ಯಕ್ಷ ರಂಜಾನ ದರ್ಗಾ ಮಾತನಾಡಿ, ಆಲೂರ ವೆಂಕಟರಾವ್ ಅವರು ಒಂದು ಜಾತಿಗೆ ಸೀಮಿತವಾದವರಲ್ಲ. ಸಮಗ್ರ ಕರ್ನಾಟಕದ 7 ಕೋಟಿ ಕನ್ನಡಿಗರಿಗೆ ಕುಲಪುರೋಹಿತರಾಗಿದ್ದಾರೆ. ಭಾಷಾ ವಿಷಯದಲ್ಲಿ ಸಂಕುಚಿತ ಭಾವನೆಯಿಂದ ಹೊರಬಂದು ನಾಡಿನ ಹೆಮ್ಮೆಯ ಸಂಸ್ಥೆಯಾದ ಕ.ವಿ.ವ. ಸಂಘದ ಜೊತೆಗೂಡಿ ಸೌಹಾರ್ಧಯುತವಾದ ಸಾಂಸ್ಕೃತಿಕ ಸಂಬಂಧ ಬೆಳೆಸಿಕೊಳ್ಳೋಣವೆಂದರು. 

ಕಾರ್ಯಕ್ರಮದಲ್ಲಿ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಪಂ. ಎಂ. ವೆಂಕಟೇಶಕುಮಾರ, ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಡಾ. ಸರಜೂ ಕಾಟಕರ, ಡಾ. ಬೆಟಗೇರಿ ಕೃಷ್ಣಶರ್ಮ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷೆ ಡಾ. ವಿನಯಾ ಒಕ್ಕುಂದ, ಡಾ. ಬಸವರಾಜ ಕಟ್ಟಿಮನಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಡಾ. ಯಲ್ಲಪ್ಪ ಹಿಮ್ಮಡಿ ಮಾತನಾಡಿ, ಕ.ವಿ.ವ. ಸಂಘದ ಈ ಸನ್ಮಾನ ಕಾರ್ಯ ಅಭಿನಂದನೀಯ. ಅನೇಕ ಹೋರಾಟಗಳಿಗೆ ಸಾಕ್ಷಿಯಾದ ಕ.ವಿ.ವ. ಸಂಘದ ಜೊತೆ ನಮ್ಮ ಸಹಕಾರ ನಿರಂತರವಾಗಿದೆ ಎಂದರು. 

ಏಳು ರಾಷ್ಟ್ರೀಯ ಸ್ಮಾರಕ ಟ್ರಸ್ಟಗಳ ಗೌರವ ಸದಸ್ಯರನ್ನು ಇದೆ ಸಂದರ್ಭಧಲ್ಲಿ ಸನ್ಮಾನಿಸಲಾಯಿತು. ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿ, ಪರಿಚಯಿಸಿ, ನಿರೂಪಿಸಿದರು. ಡಾ. ಸಂಜೀವ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸತೀಶ ತುರಮರಿ ಇದ್ದರು. ಶಂಕರ ಕುಂಬಿ ವಂದಿಸಿದರು.  

ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಡಾ. ಶೈಲಜಾ ಅಮರಶೆಟ್ಟಿ, ವಿಶ್ವೇಶ್ವರಿ ಬ.ಹಿರೇಮಠ, ಡಾ. ಮಹೇಶ ಧ. ಹೊರಕೇರಿ, ಡಾ. ಜಿನದತ್ತ ಹಡಗಲಿ, ಗುರು ಹಿರೇಮಠ, ಡಾ. ಧನವಂತ ಹಾಜವಗೋಳ, ಪ್ರೊ. ಶಶಿಧರ ತೋಡಕರ, ಪ್ರೊ. ಐ. ಜಿ. ಸನದಿ, ಸೇತುರಾಮ ಹುನಗುಂದ, ನಿಂಗಣ್ಣ ಕುಂಟಿ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಇದ್ದರು.