ಅಲ್ಪಸಂಖ್ಯಾತರಿಗೆ ಆಶ್ರಯ ನಿವೇಶನ ಹಕ್ಕು ಪತ್ರ ವಿತರಿಸಿದ ಜಮೀರ್ ಖಾನ್
Issuance of asylum claim letter
ಬ್ಯಾಡಗಿ 04: ಪಟ್ಟಣದಲ್ಲಿಯ ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ವಸತಿ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಸೋಮವಾರ ಬಂಪರ್ ಕೊಡುಗೆ ನೀಡಿದ್ದಾರೆ. ಪಟ್ಟಣದಲ್ಲಿ ಪುರಸಭೆ ವತಿಯಿಂದ ಎನ್ ಬಿ ಸಿ ಲೈಯನ್ಸ. ಶಾಲಾ ಆವರಣದಲ್ಲಿ ಮೊದಲ ಹಂತದ ಆಶ್ರಯ ನಿವೇಶನ ಹಕ್ಕು ಪತ್ರಗಳನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಸಾಂಕೇತಿಕವಾಗಿ ಕೆಲವಾರು ಫಲಾನುಭವಿಗಳಿಗೆ ನೀವೇಶನ ಪತ್ರಗಳನ್ನು ವಿತರಿಸಿ ಮಾತನಾಡಿ ಪಟ್ಟಣದಲ್ಲಿಯಅಲ್ಪಸಂಖ್ಯಾತ ಸಮುದಾಯಕ್ಕೆ ಮಹತ್ವದ ಯೋಜನೆಗಳನ್ನು ಘೋಷಿಸಿದರು. ಪಟ್ಟಣದಲ್ಲಿಯ ಅಲ್ಪ ಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ 5 ಕೋಟಿ ರೂಗಳನ್ನು ಮಂಜೂರಾತಿ ನೀಡಲಾಗಿದೆ.
ತಾಲೂಕಿನಲ್ಲಿರುವ 44 ಮಸಿದಿಗಳ ಕಟ್ಟಡ ಹಾಗೂ ಜೀರ್ಣೋದ್ಧಾರ ಕಾಮಗಾರಿ ಕೈಕೊಳ್ಳಲು 40 ಲಕ್ಷ ರೂ.ಗಳ ಮಂಜೂರಾತಿ ದೊರೆತಿದ್ದು, ವಿತರಿಸುವ ಮೋದಲ ಹಂತದ 362 ನಿವೇಶನ ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಮನೆ ನಿರ್ಮಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಮತ್ತೆ ಉದ್ಘಾಟನಾ ಕಾರ್ಯಕ್ರಮಕ್ಕೆ ನಾನೆ ಬರುವುದಾಗಿ ಭರವಸೆ ನೀಡಿದರಲ್ಲದೇ ಎರಡನೇ ಹಂತದಲ್ಲಿ 57 ನಿವೇಶನ ರಹಿತರಿಗೆ ನಿವೇಶನ ನೀಡುವುದಾಗಿ ತಿಳಿಸಿದರು.ದಿ.ಮುಖ್ಯಮಂತ್ರಿ ಎಸ್. ಬಂಗಾರ್ಪನವರ ಕಾಲದಿಂದಲೂ ಬಡವರಿಗೆ ನಿವೇಶನ ಕೊಡುವ ಕೆಲಸವನ್ನು ಕಾಂಗ್ರೇಸ್ ಪಕ್ಷದ ಸರ್ಕಾರಗಳು ಮಾಡುತ್ತಾ ಬಂದಿದ್ದು, ಅದನ್ನು ನಮ್ಮ ಸರ್ಕಾರ ಮುಂದುವರಿಸಿಕೊಂಡು ಹೋಗುತ್ತಿದೆ ಎಂದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ ಪಟ್ಟಣದಲ್ಲಿ ನಿವೇಶನ ರಹಿತರ ಸಂಖ್ಯೆ ಅತಿ ಹೆಚ್ಚು ಇದ್ದು, ಅನೇಕರಿಗೆ ನಿವೇಶನಗಳು ದೊರೆಯದೇ ಇದ್ದವರು ನಿರಾಸೆಗೊಳ್ಳದೇ ಮುಂದಿನ ದಿನಗಳಲ್ಲಿ ಹೊಸ ನಿವೇಶನಗಳನ್ನು ತಯಾರಿಸಿ ಎಲ್ಲಾ ಅರ್ಹ ಬಡ ಫಲಾನುಭವಿಗಳಿಗೆ ಪಟ್ಟಾ ವಿತರೆಣೆ ಮಾಡುವುದಾಗಿ ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಶಾಸಕ ಯಾಸಿರ್ ಖಾನ್ ಪಟಾಣ, ಮಾಜಿ ಶಾಸಕರಾದ ಸುರೇಶಗೌಡ ಪಾಟೀಲ, ಅಜ್ಜಂಪೀರ ಖಾದ್ರಿ, ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಎರೇಸಿಮಿ, ಕಾಂಗ್ರೇಸ್ ಅಧ್ಯಕ್ಷರುಗಳಾದ ದಾನಪ್ಪ ಚೂರಿ, ವೀರನಗೌಡ ಪಾಟೀಲ, ಕಾರ್ಯದರ್ಶಿಗಳಾದ ರಮೇಶ ಸುತ್ತಕೋಟಿ, ಮಾರುತಿ ಅಚ್ಚಿಗೇರಿ, ಧುರೀಣರಾದ ಬೀರ್ಪ ಬಣಕಾರ, ಮಲ್ಲಿಕಾರ್ಜುನ ಕರಿಲಿಂಗಣ್ಣನವರ, ದುರ್ಗೆಶ ಗೋಣಮ್ಮನವರ, ಮಜೀದ್ ಮುಲ್ಲಾ, ಲಕ್ಷ್ಮಿ ಬಂಬಲಾಪುರ, ಗೀರೀಶ ಇಂಡಿಮಠ, ರಾಮಣ್ಣ ಕೋಡಿಹಳ್ಳಿ, ಡಿ.ಎಚ್.ಬುಡ್ಡನಗೌಡ್ರ ತಾಲೂಕಾ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 