ಗಡಿ ದಾಟಲು ಯತ್ನಿಸಿದ ಶಂಕಿತರ ಮೇಲೆ ಇಸ್ರೇಲ್ ಪಡೆ ದಾಳಿ

ಟೆಲ್ ಅವೀವ್,  ಜ 22 :     ಗಾಜಾ ಪಟ್ಟಿಯಿಂದ ಗಡಿ ದಾಟಲು ಯತ್ನಿಸುತ್ತಿದ್ದ ಮೂವರು ಶಂಕಿತರ ಮೇಲೆ  ಇಸ್ರೇಲ್ ಪಡೆ ಮಂಗಳವಾರ ಗುಂಡಿನ ದಾಳಿ ನಡೆಸಿವೆ  ಎಂದು ಇಸ್ರೇಲ್  ರಕ್ಷಣಾ ಪಡೆ (ಐಡಿಎಫ್) ಪ್ರಕಟಣೆಯಲ್ಲಿ ತಿಳಿಸಿದೆ.

ಐಡಿಎಫ್ ಹೇಳಿಕೆಯ ಪ್ರಕಾರ, ಗಾಜಾ ಪ್ರದೇಶದ ದಕ್ಷಿಣ ಪ್ರದೇಶದಿಂದ ಭದ್ರತಾ ಬೇಲಿ ದಾಟಿ ಬಂದಿದ್ದ ಮೂವರನ್ನು ಗುರುತಿಸಲಾಗಿದೆ.

ಮಿಲಿಟರಿ ಈ ಪ್ರದೇಶವನ್ನು ಸುತ್ತುವರಿಯುತ್ತಿದ್ದಂತೆ  ಶಂಕಿತರು ಸೇನಾ ಯೋಧರ ಮೇಲೆ  ಗ್ರೆನೇಡ್ ಅಥವಾ ಸುಧಾರಿತ ಸ್ಫೋಟಕ ಎಸೆದಿದ್ದಾರೆ ಇದಕ್ಕೆ ಪ್ರತಿಯಾಗಿ  ಯೋಧರು  ಗುಂಡು ಹಾರಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ, ಹಮಾಸ್ ಉಗ್ರರು   ಬೆಂಕಿಯಿಡುವ ಆಕಾಶಬುಟ್ಟಿಗಳನ್ನು ಉಡಾಯಿಸಿದ ನಂತರ ಇಸ್ರೇಲ್ ಮತ್ತು ಗಾಜಾ ಪಟ್ಟಿಯ ನಡುವಿನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. 

ಇದಕ್ಕೆ ಪ್ರತಿಕ್ರಿಯೆಯಾಗಿ, ಇಸ್ರೇಲ್ ವಾಯುಪಡೆಯು ಪ್ರಮುಖ ಹಮಾಸ್ ನೆಲಗಳ  ವಿರುದ್ಧ ವೈಮಾನಿಕ ದಾಳಿ ನಡೆಸುತ್ತಿದೆ 

ಇಸ್ರೇಲ್‌  ಪ್ಯಾಲೆಸ್ಟೈನ್ ಅನ್ನು ಸ್ವತಂತ್ರ ರಾಜಕೀಯ ಮತ್ತು ರಾಜತಾಂತ್ರಿಕ ರಾಷ್ಟ್ರವೆಂದು ಗುರುತಿಸಲು ಇನ್ನೂ ನಿರಾಕರಿಸುತ್ತಲೇ  ಬಂದಿದೆ.