ಟೆಲ್ ಅವೀವ್, ನವೆಂಬರ್ 19 : ಇಸ್ರೇಲಿ ವಾಯು ರಕ್ಷಣಾ ವ್ಯವಸ್ಥೆಗಳು (ಐಡಿಎಫ್) ಸಿರಿಯಾದಿಂದ ದೇಶದ ಉತ್ತರ ಭಾಗದ ಕಡೆಗೆ ನಡೆಸಿದ ನಾಲ್ಕು ರಾಕೆಟ್ ದಾಳಿಯನ್ನು ವಿಫಲಗೊಳಿಸಿವೆ ಎಂದು ಇಸ್ರೇಲಿ ರಕ್ಷಣಾ ಪಡೆ ಮಂಗಳವಾರ ತಿಳಿಸಿದೆ. ಸಿರಿಯಾದಿಂದ ಉತ್ತರ ಇಸ್ರೇಲ್ ಕಡೆಗೆ 4 ರಾಕೆಟ್ಗಳನ್ನು ಹಾರಿಸಲಾಗಿದೆ. ಇಸ್ರೇಲಿ ವಾಯು ರಕ್ಷಣಾ ವ್ಯವಸ್ಥೆ (ಐಡಿಎಫ್) ಈ ದಾಳಿಯನ್ನು ಆಕಾಶದಲ್ಲೇ ಹೊಡೆದುರುಳಿಸಿದೆ ಎಂದು ನಾವು ಖಚಿತಪಡಿಸುತ್ತಿದ್ದೇವೆ ಎಂದು ಐಡಿಎಫ್ ಟ್ವಿಟರ್ನಲ್ಲಿ ಬರೆದಿದೆ. ಇಸ್ರೇಲ್ ಮತ್ತು ಸಿರಿಯಾ ವಿವಾದಿತ ಗೋಲನ್ ಹೈಟ್ಸ್ ಗಡಿಗಳನ್ನು ಹಂಚಿಕೊಳ್ಳುತ್ತವೆ. 1967 ರ ಆರು ದಿನಗಳ ಯುದ್ಧದ ಸಮಯದಲ್ಲಿ ಈ ಪ್ರದೇಶವನ್ನು ವಶಪಡಿಸಿಕೊಂಡಾಗಿನಿಂದ ಈ ಪ್ರದೇಶವು ಹೆಚ್ಚಾಗಿ ಇಸ್ರೇಲ್ ನಿಯಂತ್ರಣದಲ್ಲಿದೆ. ಇಸ್ರೇಲ್ 1981ರಲ್ಲಿ ಕಾನೂನನ್ನು ಅಂಗೀಕರಿಸಿ ಈ ಭೂ ಪ್ರದೇಶ ತನ್ನದೆಂದು ವಾದಿಸಿದೆ. ಆದರೆ ಈ ಆದೇಶವನ್ನು ವಿಶ್ವಸಂಸ್ಥೆ ತಿರಸ್ಕರಿಸಿದೆ. ಈ ವರ್ಷದ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೋಲನ್ ಹೈಟ್ಸ್ ಅನ್ನು ಇಸ್ರೇಲಿ ಪ್ರದೇಶವೆಂದು ಘೋಷಿಸಿದ್ದರು. ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ನಾಗರಿಕ ವಸಾಹತುಗಳ ಸ್ಥಾಪನೆಯು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾದುದು ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಘೋಷಿಸಿದ ಒಂದು ದಿನದ ನಂತರ ಈ ದಾಳಿ ನಡೆದಿದೆ. ಪಶ್ಚಿಮ ದಂಡೆಯಲ್ಲಿನ ವಸಾಹತುಗಳನ್ನು ಕಾನೂನುಬಾಹಿರವೆಂದು ಅಮೆರಿಕ ಹಲವು ವರ್ಷಗಳಿಂದ ಹೇಳುತ್ತಾ ಬಂದಿವೆ. ಅಂತಾರಾಷ್ಟ್ರೀಯ ಸಮುದಾಯದ ಬಹುಪಾಲು ದೇಶಗಳು ಇದೇ ನಿಲುವನ್ನು ಹೊಂದಿವೆ.