ಇಷ್ಟಲಿಂಗ ಪೂಜೆ ಎಂದರೆ ವಿಧಿ ವಿಧಾನಗಳ ಸಂಕಲನವಲ್ಲ : ಭೀಮಾಶಂಕರ ಭಗವತ್ಪಾದರು
Ishtalinga Puja is not a collection of rituals: Bhimashankar Bhagavatpad
ರಾಣೆಬೆನ್ನೂರು 01 : ಬಹುಜನ ಕೃತಫಲದಿಂದಾಗಿ ಮಾನವ ಜೀವ ಸಂಸ್ಕಾರ ದೀಕ್ಷೆ ಪಡೆಯುವಲ್ಲಿ ಸಫಲವಾಗಿದೆ ಎಂದು ಕೇದಾರ ವೈರಾಗ್ಯ ಸಿಂಹಾಸನಾದೀಶ್ವರ ಜಗದ್ಗುರು ಭೀಮಾಶಂಕರ ಭಗವತ್ಪಾದರು ನುಡಿದರು. ಅವರು ತಾಲೂಕಿನ ಸ್ಪಟಿಕಲಿಂಗ ಖ್ಯಾತಿಯ ರಂಭಾಪುರಿ ಶಾಖಾ ಹಿರೇಮಠದಲ್ಲಿ ಜಗದ್ಗುರು ರೇಣುಕ ಜೀವನ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ನಡೆದ ಸಂಗೀತ ಯುಕ್ತ ಇಷ್ಟಲಿಂಗ ಪೂಜಾ ಅನುಷ್ಠಾನ, ಮಹಾಪೂಜೆ ಸಾಮೂಹಿಕ ಶಿವ ದೀಕ್ಷೆ ಧರ್ಮಸಭೆಯ ದಿವ್ಯ ಸಾನಿಧ್ಯವೈಸಿ ಮಾತನಾಡಿದರು. ಏಕೋ ರಾಮರಾಧ್ಯ ಪರಂಪರೆಯ ಕೇದಾರ ವೈರಾಗ್ಯ ಪೀಠವು ಭಾರತದ ಧರ್ಮ ಕ್ಷೇತ್ರಗಳಲ್ಲಿ ಒಂದಾಗಿದೆ.
ಜಾತಸ್ಯ ಮರಣಂ ಧ್ರುವಂ ಎನ್ನುವಂತೆ ಮಾನವನಾಗಿ ಜನಿಸಿದ ಮೇಲೆ ಮರಣವು ಅಂತಿಮ ಧ್ರುವವಾಗುತ್ತದೆ. ಆದರೆ ಕೇದಾರಲಿಂಗ ಪರಂಪರೆಯಲ್ಲಿ ಉತ್ತಮ ಸಂಸ್ಕಾರ ಪಡೆದ ಮಾನವನು ಸಮಾಜಮುಖಿಯಾಗುತ್ತಾನೆ. ಸಮಾಜಕ್ಕೆ ಬೆಳಕಾಗುತ್ತಾನೆ ಆತನಿಗೆ ಮರಣವೇ ಇಲ್ಲ ಎಂದರು ಅಗಸ್ತ್ಯಮುನಿ ಪ್ರಣಿತ ಸಿದ್ಧಾಂತಶಿಖಾಮಣಿಯು ವೇದ ಉಪನಿಷತ್ತುಗಳ ಸಾರವಾಗಿದೆ. ವೀರಶೈವ ಧರ್ಮ, ಆಚಾರ ಪರಂಪರೆಯ ಪವಿತ್ರ ಗ್ರಂಥವಾಗಿದೆ. ಹಳೆ ಬೇರು ಹೊಸರು ಚಿಗುರು ಎನ್ನುವಂತೆ ಸರಕಾರಿ ವೃತ್ತಿಯಲ್ಲಿನ ಅನುಭವಗಳನ್ನು ಇತ್ತೀಚೆಗೆ ನಿವೃತ್ತರಾದ ಲಿಂಗದಹಳ್ಳಿಯ ಷ. ಬ್ರ ವೀರಭದ್ರ ಶಿವಾಚಾರ್ಯರು ಮಠದ ಅಭಿವೃದ್ಧಿಗೆ ಹಾಗೂ ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳುವಂತಾಗಲಿ.
ಬಹುಜನ್ಮಕೃತಫಲದಿಂದಾಗಿ ಇಂದು ಶಿವಾಚಾರ್ಯರಾಗಿರುವ ಶ್ರೀಗಳು ಸಮಾಜವನ್ನು ಮಾರ್ಗದರ್ಶಿಸಲಿ ಎಂದು ತಮ್ಮ ಅಂತರ್ಯದ ಸಂದೇಶಾಮೃತವನ್ನು ನುಡಿದರು.“ಇಷ್ಟಲಿಂಗ ಪೂಜೆ ಎಂದರೆ ಕೇವಲ ವಿಧಿವಿಧಾನಗಳ ಸಂಕಲನವಲ್ಲ. ಅದು ಆತ್ಮಶುದ್ಧಿಯ ಸಾಧನ. ಲಿಂಗ ಧ್ಯಾನದಿಂದ ಮನಸ್ಸು ಸ್ಥಿರವಾಗುತ್ತದೆ, ಚಿಂತನೆಗಳು ಶುದ್ಧವಾಗುತ್ತವೆ, ಜೀವನಕ್ಕೆ ದಿಕ್ಕು ದೊರೆಯುತ್ತದೆ. ಪ್ರತಿಯೊಬ್ಬರು ತಮ್ಮ ಅಂತರಂಗದಲ್ಲಿ ಇರುವ ಶಿವತತ್ವವನ್ನು ಅರಿಯಬೇಕು.”ಗುರುಗಳು ಪಂಚಾಚಾರ ಮತ್ತು ಶರಣರ ತತ್ವಗಳನ್ನು ನೆನಪಿಸಿ, ನೈತಿಕತೆ, ಸತ್ಯನಿಷ್ಠೆ ಮತ್ತು ಸಮಾನತೆಯ ಮೌಲ್ಯಗಳನ್ನು ಪಾಲಿಸಬೇಕೆಂದು ಜಗದ್ಗುರುಗಳು ಕರೆ ನೀಡಿದರು.
“ಮನಸ್ಸಿನಲ್ಲಿ ದ್ವೇಷವಿಲ್ಲದೆ, ಮಾತಿನಲ್ಲಿ ಕಟುವಿಲ್ಲದೆ, ಕಾರ್ಯದಲ್ಲಿ ಕಪಟವಿಲ್ಲದೆ ಬದುಕಿದರೆ ಅದೇ ಶಿವಭಕ್ತಿ” ಎಂದ ಅವರು ಧರ್ಮ ಮತ್ತು ಧರ್ಮ ಜಾಗೃತಿ ಮಾನವನಲ್ಲಿ ನಿತ್ಯ ನಿರಂತರವಾಗಿರಬೇಕು ಅದುವೇ ಜೀವನದಲ್ಲಿ ಮುಕ್ತಿ ಕಾಣಲು ಸಾಧ್ಯವಾಗುವುದು ಎಂದರು. ಶ್ರೀ ಷ. ಬ್ರ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕಣಕುಪ್ಪಿ ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಾಚಾರ್ಯರು ಧರ್ಮ ಸಭೆಯ ಸಾನಿಧ್ಯವನ್ನು ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಎಸ್.ಎಸ್. ರಾಮಲಿಂಗಣ್ಣನವರ,ಜಂಗಮ ಸಮಾಜ, ನೌಕರರ ವೇದಿಕೆಯ ಅಧ್ಯಕ್ಷ ವಿ. ಎಸ್.ಹಿರೇಮಠ, ಕಾರ್ಯದರ್ಶಿ ಜಗದೀಶ ಮಳಿಮಠ, ಪಿ. ವಿ.ಮಠದ ಪಂಚಾಕ್ಷರಿ, ಮುರುಗೇಶ್ ಮಹಾನುಭಾವಿಮಠ, ವಿರೂಪಾಕ್ಷ, ಸಂತೋಷ, ವಿಶ್ವನಾಥ, ಬಸಯ್ಯ,ರುದ್ರಮುನಿ, ಶಿವಯ್ಯ, ವೀರಯ್ಯ ಶಾಸ್ತ್ರಿಗಳವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 