ಏ.24 ಮತ್ತು 25 ರಂದು ನಾಗನೂರು ರುದ್ರಾಕ್ಷಿ ಮಠದಲ್ಲಿ ಇಷ್ಟಲಿಂಗ ಪೂಜೆ

ಏ.24 ಮತ್ತು 25 ರಂದು ನಾಗನೂರು ರುದ್ರಾಕ್ಷಿ ಮಠದಲ್ಲಿ ಇಷ್ಟಲಿಂಗ ಪೂಜೆ Ishtalinga Puja at Naganur Rudraksha Math on 24th and 25th April

ಲೋಕದರ್ಶನ ವರದಿ 

ಬೆಳಗಾವಿ 22: ಇದೇ ತಿಂಗಳ ಶುಕ್ರವಾರ  ದಿ. 24 ಮತ್ತು ಶನಿವಾರ ದಿ. 25 ರಂದು ಜಾಗತಿಕ ಲಿಂಗಾಯಿತ ಮಹಾಸಭೆಯ ಬೆಳಗಾವಿ ಜಿಲ್ಲಾ ಘಟಕವು ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಸಹಯೋಗದೊಂದಿಗೆ ಎರಡು ದಿನಗಳ ಕಾಲ ಇಷ್ಟ ಲಿಂಗ ಪೂಜಾ ಕಾರ್ಯಕ್ರಮ  ಮತ್ತು ಬಸವಾದಿ ಶರಣರ ವಚನ ದರ್ಶನ ಪ್ರವಚನ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಠ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ಪ್ರಕಟಣೆ ತಿಳಿಸಿದೆ. 

ಎರಡು ದಿನಗಳ ಕಾಲ ಬೆಳಗಿನ 7-00 ಗಂಟೆಗೆ ಇಷ್ಟ ಲಿಂಗ ಪೂಜೆ, ಇಷ್ಟಲಿಂಗ ದೀಕ್ಷೆ, ಪ್ರಾತ್ಯಕ್ಷಿಕೆ ಹಾಗೂ ವಚನ ಪಠಣ ಕಾರ್ಯಕ್ರಮಗಳು ನಡೆಯಲಿವೆ. 

ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗವಹಿಸಲಿದ್ದಾರೆ. 

ಇಷ್ಟು ಲಿಂಗ ಪೂಜಾ ಕಾರ್ಯಕ್ರಮಕ್ಕೆ ಆಗಮಿಸುವವರು ರಾಜಶೇಖರ್ ಪಾಟೀಲ್ 90084 42557, ಮಂಜುನಾಥ ಶರಣಪ್ಪನವರ್ 99644 11143, ಬಸವರಾಜ ರೊಟ್ಟಿ 94480 46555, ಮುರಿಗೆಪ್ಪ ಬಾಳಿ 88841 26145, ಸಿ.ಎಂ. ಬೂದಿಹಾಳ  99803 85079 ಮುಂತಾದವರನ್ನು ಸಂಪರ್ಕಿಸಬಹುದು. 

ಶುಕ್ರವಾರ ದಿನಾಂಕ 24 ರಂದು ಸಂಜೆ 6 ಗಂಟೆಗೆ ಶ್ರೀಮಠದಲ್ಲಿ ಬಸವಾದಿ ಶರಣರ ವಚನ ದರ್ಶನ ಪ್ರವಚನ ನಡೆಯಲಿದೆ. ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ನೇತೃತ್ವವನ್ನು ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಲಿದ್ದಾರೆ. ವಿವಿಧ ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು  ಬಸವಾದಿ ಶರಣರ ಆಧಾರಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಶ್ರೀಮಠ ಮತ್ತು  ಜಾಗತಿಕ ಲಿಂಗಾಯತ ಮಹಾಸಭಾ ಪ್ರಕಟಣೆ ತಿಳಿಸಿದೆ.