ಮಕ್ಕಳಿಗೆ ಮೊಬೈಲ್ ನಿಷೇಧಿಸುವದು ಅನಿವಾರ್ಯವೇ?!!
Is it necessary to ban mobile phones for children?!!
ಇತ್ತೀಚೆಗೆ ಗಾಜಿಯಾಬಾದನಲ್ಲಿ ಮೂವರು ಸಹೋದರಿಯರು ಒಂಭತ್ತನೇ ಮಹಡಿಯ ತಮ್ಮ ಮನೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕಟಣ ಸಮಾಜದ ಹಾಗೂ ಸರಕಾರದ ಕಣ್ಣು ತೆರೆಸುವ ಘಟನೆ ಆಗಿದೆ. ಆತ್ಮಹತ್ಯೆ ಪ್ರಕರಣಗಳು ಈಗ ಹದಿಹರೆಯದವರಾದ ಮಕ್ಕಳು ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ.
ಮಕ್ಕಳಲ್ಲಿ ಪರೀಕ್ಷೆಗಳ ಒತ್ತಡ, ಬೆದರಿಸುವಿಕೆ ಮತ್ತು ಲೈಂಗಿಕ ಕಿರಿಕುಳ ಪ್ರಕರಣಗಳು ಸೇರಿದಂತೆ ಮೊಬೈಲ್‌ಗೆ ಅಂಟಿಕೊಳ್ಳುವ ವ್ಯಸನ ದೊಡ್ಡ ಹಾಗೂ ನಿಯಂತ್ರಣಕ್ಕೆ ಬಾರದ ಸಮಸ್ಯೆಯಾಗಿ ಹೊರಹೊಮ್ಮಿದೆ. ಮಕ್ಕಳು ಹಾಗೂ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ 2017ಕ್ಕೆ ಹೊಲಿಸಿ ನೋಡಿದರೆ ಶೇಕಡಾ 30ಅ ರಷ್ಟು ಹೆಚ್ಚಳವಾಗುತ್ತಿದೆ.
ಈ ಪ್ರಕರಣಗಳ ಹೆಚ್ಚಳದ ಕಾರಣ ಜಗತ್ತಿನಾದ್ಯಂತ ಸುಮಾರು ಹತ್ತು ದೇಶಗಳು 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ವೀಕ್ಷಣೆಗೆ ನಿಷೇಧ ಮಾಡುವ ಕ್ರಮಗಳನ್ನು ಕೈಗೊಂಡಿದೆ. ಇತ್ತೀಚೆಗೆ ಆಸ್ಟ್ರೇಲಿಯಾ ದೇಶ 16 ವರ್ಷದ ವರೆಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ವೇದಿಕೆ (Social Media) ಗಳಿಂದ ದೂರ ಇಡುವ ಕಾನೂನು ಜಾರಿಗೆ ತಂದಿದೆ. ಇದರ ಜವಾಬ್ದಾರಿಯನ್ನು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ವಹಿಸಲಾಗಿದ್ದು ತಪ್ಪಿದ್ದಲ್ಲಿ 3.28 ದಶಲಕ್ಷ ಡಾಲರ‌್ಸಗಳಷ್ಟು ದಂಡ ನೀಡಬೇಕಾಗುತ್ತದೆ ಆದರೆ ಇದನ್ನು ಅನುಷ್ಠಾನಕ್ಕೆ ತರುವದು ಅಷ್ಟೇನು ಸುಲಭದ ಮಾತಲ್ಲ.
ಸಣ್ಣವರೇ ಇರಲಿ ದೊಡ್ಡವರೇ ಇರಲಿ ಮೊಬೈಲ್ ಬಳಕೆ ಈಗ ಜೀವನದ ಒಂದು ಅಂಗವಾಗಿದೆ. ಮೊಬೈಲ್ ಅವಶ್ಯಕ ಎಷ್ಟೋ ಕಾರ್ಯಗಳಿಗೆ ಅನಿವಾರ್ಯವಾಗಿದೆ. ಅದರಿಂದ ಎಷ್ಟು
ಅನುಕೂಲವಿದೆಯೋ ಅಷ್ಟೇ ಅನಾನೂಕೂಲಗಳು ಇವೆ. ಅನುಕೂಲಗಳನ್ನು ಬಳಸಿ ವ್ಯಕ್ತಿ ತನ್ನ ಜೀವನ ಯಶಸ್ವಿಗೊಳಿಸಿಕೊಳ್ಳುವವರು ಇದ್ದಾರೆ ಅನಾನುಕೂಲಗಳನ್ನು ಬಳಸಿ ತಮ್ಮ ಜೀವನ ಹಾಳು ಮಾಡಿಕೊಳ್ಳುವ ಮಕ್ಕಳು ಇದ್ದಾರೆ.
ಪರಿಪಕ್ವತೆ ಇಲ್ಲದ 16 ವರ್ಷದೊಳಗಿನ ಮಕ್ಕಳು ಮೊಬೈಲ್‌ದಿಂದ ಇರುವ ಅನಾನುಕೂಲತೆಗಳತ್ತ ಆಕರ್ಷಣೆಗೊಳ್ಳುವದು ಸಾಧ್ಯತೆಗಳು ಹೆಚ್ಚಾಗಿವೆ. ಅದಕ್ಕೆ ವ್ಯಸನಗೊಳ್ಳುವ ಮಕ್ಕಳು ಆತ್ಮಹತ್ಯೆಗಳತಂಹ ಪ್ರಕರಣಗಳಲ್ಲಿ ಅಂತ್ಯಗೊಳ್ಳುತ್ತಿರುವುದನ್ನು ನೋಡುತ್ತೀದ್ದೇವೆ. ಹೀಗಾದಂತೆ ಮಾಡಲು 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ನಿಷೇಧ ಮಾಡುವುದು ಉಳಿದಿರುವುದು ಒಂದೇ ದಾರಿಯೇ ! ಅಥವಾ ಬೇರೆ ದಾರಿಗಳಿವೆಯೋ ? ಜವಾಬದಾರಿತ ಪಾಲಕರು ತಮ್ಮ ಮಕ್ಕಳನ್ನು ಅಲಕ್ಷ ಮಾಡದೇ ಅವರ ಎಲ್ಲ ಆಗು ಹೋಗುಗಳತ್ತ ಗಮನವಿಟ್ಟು ಅವರ ಬೆಳವಣಿಗೆಗೆ ಕಾರಣರಾಗುತ್ತಾರೆ. ಆದರೆ ಸಮಸ್ಯೆ ಇರುವುದು ತಮ್ಮ ಮಕ್ಕಳ ಬಗ್ಗೆ ಜವಾಬ್ದಾರಿಯನ್ನು ಹೊಂದದೇ ಇರದ ಪಾಲಕರ ಬಗ್ಗೆ ಇವರು ತಮ್ಮ ವೃತ್ತಿಯಿಂದ ಮಕ್ಕಳತ್ತ ಸರಿಯಾದ ಗಮನ ಕೊಡಲು ಸಾಧ್ಯವಾಗದೇ ಮಕ್ಕಳು ಏಕಾಂಗಿಯಾಗಿ ಬೆಳೆಯಲು ಬಿಟ್ಟು ಅವರ ದುರ್ಗತಿಗೆ ಕಾರಣರಾಗುತ್ತಾರೆ. ಹಾಗಾದರೆ ಮಕ್ಕಳು ತಪ್ಪು ದಾರಿಯಲ್ಲಿ ಹೋಗುವುನ್ನು ತಡೆಯಲು ಏನು ಕ್ರಮ ಕೈಕೊಳ್ಳಬಹುದು? ಕೇವಲ ಸರಕಾರ ಮಾತ್ರ ಮಧ್ಯಪ್ರವೇಶಿಸಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಬಹುದು. ಈ ಸಮಯದಲ್ಲಿ ಹದಿನಾರು ವರ್ಷದವರೆಗಿನ ಮಕ್ಕಳು ವೀಕ್ಷಿಸಬಹುದಾದ ವಿಷಯಕ್ಕೆ ಸರಿಯಾದ ನೀತಿಯನ್ನು ಜಾರಿಗೆ ತರುವುದು ಖಂಡಿತವಾಗಿಯೂ ಅಗತ್ಯವಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಸರಕಾರವು ಮಕ್ಕಳು ಯಾವ ವಿಷಯವನ್ನು ನೋಡಬಹುದು ಅಥವಾ ನೋಡಬಾರದು ಎಂಬುದನ್ನು ಅನುಮತಿಸುವ ಮೊಬೈಲ್ ಫೋನ್ ನೀತಿಯನ್ನು ರೂಪಿಸಬೇಕು ಮೊದಲನೆಯದಾಗಿ ಮಕ್ಕಳಿಗೆ ಮೊಬೈಲ ಫೋನಗಳನ್ನು ಖರೀದಿಸುವಾಗ ನೊಂದಣಿ ಪ್ರಕ್ರಿಯೆ ಇರಬೇಕು. ಅಲ್ಲಿ ಮಗುವಿನ ಜನ್ಮ ದಿನಾಂಕ ನೊಂದಾಯಿಸಬೇಕು ಇದರಿಂದ ಮಕ್ಕಳು ವೀಕ್ಷಿಸಬಹುದಾದ ವಿಷಯವು ಹೊಸ ಮೊಬೈಲ್ ನೀತಿಯ ಪ್ರಕಾರ ಇರುತ್ತದೆ ಇದರಿಂದ ಯಾವ ವಿಷಯ ನೋಡಬಹುದು ಎಂಬುದಕ್ಕೆ ನಿಯಂತ್ರಣ ದೊರೆಯುತ್ತದೆ.
ಇದು ಸಾಧ್ಯವಾಗಬೇಕಾದರೆ ಮಕ್ಕಳ ಮೊಬೈಲ್ ಫೋನಗಳಿಗಾಗಿ ವಿಶೇಷ ಸಾಫ್ಟವೇರ್‌ನ್ನು ಅಭಿವೃದ್ಧಿಪಡಿಸಬೇಕು ಮತ್ತೆ ಇದೇನು ಅಸಾಧ್ಯದ ಮಾತೇನಲ್ಲ. ಭಾರತದಲ್ಲಿರುವ ತಂತ್ರಜ್ಞಾನದ ಸಾಮರ್ಥ್ಯ ಮಕ್ಕಳ ಮೊಬೈಲ್‌ಗಾಗಿ ಹೊಸ ಸಾಫ್ಟವೇರ್ ಅಭಿವೃದ್ಧಿಪಡಿಸುವುದು ಕಷ್ಟದ ಮಾತೇನಲ್ಲ. ಇದರಿಂದ ಮಕ್ಕಳ ಆರೋಗ್ಯ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ. ಹೊಸ ಸಾಫ್ಟವೇರ್‌ದಿಂದ ನಿಯಂತ್ರಣ ಮೂಲದಲ್ಲೇ ಆಗುತ್ತದೆ ಯಾರ ಜವಾಬ್ದಾರಿ ಮೇಲಲ್ಲ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 