ರೈತರ ಸ್ವಾಭಿಮಾನಿ ಬದುಕಿಗೆ ನೀರಾವರಿ ಅತ್ಯವಶ್ಯ: ಶಾಸಕ ಕೆ. ಹಿಟ್ನಾಳ
ಲೋಕದರ್ಶನ ವರದಿ
ಕೊಪ್ಪಳ 17: ಕ್ಷೇತ್ರದ ಅಳವಂಡಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಾದ ನೀರಲಗಿ, ಮತ್ತೂರು, ಹನುಕುಂಟಿ, ತಿಗರಿ, ಬೆಟಗೇರಿ, ಮೋರನಹಾಳ, ಭೈರಾಪುರ, ಬೋಚನಹಳ್ಳಿ ಗ್ರಾಮಗಳಲ್ಲಿ ವಿವಿಧ ಯೋಜನೆಯಡಿಯಲ್ಲಿ ಅಂದಾಜು ಮೊತ್ತ ರೂ. 2ಕೋಟಿ 60ಲಕ್ಷದ ರಸ್ತೆ ಕಾಮಗಾರಿ, ಚರಂಡಿ, ಸಮುದಾಯ ಭವನ ನಿರ್ಮಾಣ ಹಾಗೂ ಗ್ರಂಥಾಲಯ ಕಟ್ಟಡವನ್ನು ಉದ್ಘಾಟನೆ ನೆರೆವೇರಿತು.
ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ 2018-19ರಲ್ಲಿ ಕಲ್ಯಾಣ ಕರ್ನಾಟಕ ಯೋಜನೆಯಡಿಯಲ್ಲಿ 150 ಶಾಲಾ ಕೊಠಡಿಗಳ ನಿರ್ಮಾಣ ಮಾಡಿದ್ದು ಗ್ರಾಮಿಣ ವಿದ್ಯಾಥರ್ಿಗಳಿಗೆ ಹೆಚ್ಚು ಅನುಕೂಲ ಕಲ್ಪಿಸಲಾಗಿದೆ. ಪೂಜ್ಯ ಅಭಿನವ ಶ್ರೀಗಳ ನೇತೃತ್ವದಲ್ಲಿ 25 ಕಿ.ಮೀ. ಹಿರೇಹಳ್ಳ ಸ್ವಚ್ಛ ಮಾಡಿ 9 ಬ್ರಿಡ್ಜ-ಕಂ-ಬ್ಯಾರೇಜ್ ಕಾಮಗಾರಿಗಳಿಗೆ ಈಗಾಗಲೆ ರೂ.36 ಕೋಟಿ ಅನುದಾನ ಬಿಡುಗಡೆಯಾಗಿದೆ. ಇನ್ನೂ ರೂ.43 ಕೋಟಿಯ ಟೆಂಡರ್ ಕರೆಯಲಾಗಿದೆ. ಈ ಕಾಮಗಾರಿಗಳು ಪೂರ್ಣಗೊಂಡರೆ 28 ಹಳ್ಳಿಗಳಿಗೆ ಕೃಷಿ ಹಾಗೂ ಕುಡಿಯುವ ನೀರಿಗೆ ಹೆಚ್ಚು ಅನುಕೂಲವಾಗುತ್ತದೆ. ತುಂಗಾಭದ್ರ ನದಿ ತೀರದ 33 ಹಳ್ಳಿಗಳಿಗೂ ಏತನೀರಾವರಿ ಯೋಜನೆ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಕೊಪ್ಪಳ ನಗರದಲ್ಲಿ ರೂ.116 ಕೋಟಿಯ ಒಂಬತ್ತು ಅಂತಸ್ತಿನ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಕಟ್ಟಢ ಕಾಮಗಾರಿಯು ಭರದಿಂದ ಸಾಗಿದ್ದು ಇದರಲ್ಲಿ ಎಂಟು ಮಲ್ಟಿಸ್ಪೆಷಲ್ ಆಪರೇಷನ್ ಕೊಠಡಿಗಳನ್ನು ನಿರ್ಮಾಣ ಮಾಡಲಾಗುವುದು. ಇದರಿಂದ ಜನರಿಗೆ ಬೇರೆ ನಗರಗಳಿಗೆ ಹೋಗುವ ತೊಂದರೆ ತಪ್ಪುತ್ತದೆ. ನಗರದಲ್ಲೇ ಬ್ಲಡ್ ಬ್ಯಾಂಕಿನ ಸೌಲಭ್ಯ ಇರುವುದರಿಂದ ಕ್ಷೇತ್ರದ ಜನತೆಗೆ ಹೊರ ಊರಿಗೆ ಹೋಗುವ ತೊಂದರೆ ಸಂಪೂರ್ಣವಾಗಿ ತಪ್ಪಿ ಇಲ್ಲೇ ಆರೋಗ್ಯ ಸೌಲಭ್ಯಗಳು ಲಭಿಸುವಂತಾಗಿದೆ. ಇದೇ ಸಂದರ್ಭದಲ್ಲಿ ಹನುಕುಂಟಿಯ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ವಸತಿ ಶಾಲೆಗೆ ಒಂದು ಸ್ಮಾಟರ್್ ಕ್ಲಾಸ್ ಹಾಗೂ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅಶ್ವಾಸನೆ ನೀಡಿದರು. ಒಗ್ಗಟ್ಟಿನಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಜನರು ಗುಣಮಟ್ಟದ ಕಾಮಗಾರಿಗೆ ಕೈ ಜೋಡಿಸಬೇಕೆಂದು ಗ್ರಾಮಸ್ಥರಿಗೆ ಕರೆ ನೀಡಿದರು.
ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಗ್ರಾ.ಪಂ.ಅಧ್ಯಕ್ಷ ಲಕ್ಷ್ಮವ್ವ, ಎ.ಪಿ.ಎಂ.ಸಿ. ಅಧ್ಯಕ್ಷ ಜಡಿಯಪ್ಪ ಬಂಗಾಳಿ, ಎ.ಪಿ.ಎಂ.ಸಿ. ಸದಸ್ಯ ನಾಗರಾಜ ಚಳ್ಳುಳ್ಳಿ, ತಾ.ಪಂ.ಸದಸ್ಯ ಸುನಿತಾ ಚಿಂಚಲಿ, ಮುಖಂಡರುಗಳಾದ ಭರಮಪ್ಪ ನಗರ, ಪ್ರಸನ್ನ ಗಡಾದ, ಕೃಷ್ಣಾರಡ್ಡಿ ಗಲಿಬಿ, ಅಡಿವೆಪ್ಪ ರಾಠಿ, ಕೇಶವರಡ್ಡಿ ಮಾಡಿನೂರ, ಭರಮಪ್ಪ ಕಂಬಳಿ, ಗಾಳೆಪ್ಪ ಪೂಜಾರ, ವಿರುಪಾಕ್ಷಪ್ಪ ನವೋದಯ, ಹನುಮೇಶ ಹೊಸಳ್ಳಿ, ರಾಜಶೇಖರ ಕಡ್ಲಿ, ಭೀಮಶೆಪ್ಪ ಬೋಚನಹಳ್ಳಿ, ನಗರಸಭಾ ಸದಸ್ಯ ಅಕ್ಬರ್ ಪಾಷಾ ಪಲ್ಟನ್, ತಾಲೂಕು ದಂಡಾಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು, ತಾ.ಪಂ. ಕಾರ್ಯನಿವರ್ಾಹಕರು, ಲೋಕೋಪಯೋಗಿ ಅಭಿಯಂತರರು, ಪ್ರಾಚಾರ್ಯ ಮಂಜುನಾಥ ಬೇಳೂರ, ಶಿಕ್ಷಕರಾದ ಸಂಗನಗೌಡ ಪಾಟೀಲ್, ಬಸವರಾಜ ಹನಸಿ ಇನ್ನೂ ಅನೇಕ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ 