ಮಾಸ್ಕೋ, ೦6: (ಸ್ಪುಟ್ನಿಕ್) ದೇಶದಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳ ಮಧ್ಯೆಯೇ ಇರಾಕಿ ಪ್ರಧಾನಿ
ಅದಿಲ್ ಅಬ್ದುಲ್ ಮಹ್ದಿ ಅವರು ಸಚಿವ ಸಂಪುಟ ಪುನರ್ರಚಿಸುವ ತಮ್ಮ ಸಹಾಯಕರ ಯೋಜನೆಯನ್ನು ಒಪ್ಪಿಕೊಂಡಿದ್ದಾರೆ
ಎಂದು ಅಲ್-ಸುಮರಿಯಾ ಪ್ರಸಾರ ಸಂಸ್ಥೆ ಭಾನುವಾರ ವರದಿ ಮಾಡಿದೆ.
ಪ್ರಧಾನಿ ಆದಿಲ್ ಅಬ್ದುಲ್
ಮಹ್ದಿ ಅವರು ತಮ್ಮ ಕೆಲವು ಸಹಾಯಕರ ಸಲಹೆಯನ್ನು ಒಪ್ಪಿಕೊಂಡಿದ್ದಾರೆ. ಈ ಯೋಜನೆಯು ಸರ್ಕಾರದಲ್ಲಿ ವ್ಯಾಪಕವಾದ
ಪುನರ್ರಚನೆಗಳನ್ನು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಈ ಯೋಜನೆಯಲ್ಲಿ ಸುಪ್ರೀಂ ಕೋರ್ಟ್ ರಚನೆಯೂ ಸೇರಿದೆ, ಅದು ಭ್ರಷ್ಟಾಚಾರ ಪ್ರಕರಣಗಳನ್ನು ನೋಡಿಕೊಳ್ಳಲಿದೆ. ಇರಾಕಿ ಸುಪ್ರೀಂ ನ್ಯಾಯಾಂಗ ಸಮಿತಿಗೆ ಸಲ್ಲಿಸಿದ ಹಿಂದಿನ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳನ್ನು ಮರು ತನಿಖೆ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ.
ಬಡತನ ಮತ್ತು ನಿರುದ್ಯೋಗವನ್ನು
ಎದುರಿಸಲು ರಾಷ್ಟ್ರೀಯ ಕಾರ್ಯಕ್ರಮವನ್ನು ರಚಿಸುವುದು ಕೂಡ ಇದರಲ್ಲಿ ಸೇರಿದೆ. ಇದು ಹಲವಾರು ಹಂತಗಳನ್ನು
ಒಳಗೊಂಡಿರುತ್ತದೆ ಎಂದು ಮೂಲಗಳು ತಿಳಿಸಿವೆ.
ಇರಾಕ್ ನಲ್ಲಿ ಮಂಗಳವಾರದಿಂದ
ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನಕಾರರನ್ನು ಚದುರಿಸಲು ಭದ್ರತಾ ಪಡೆಗಳು ಮದ್ದುಗುಂಡು,
ಜಲ ಫಿರಂಗಿಗಳು ಮತ್ತು ಅಶ್ರುವಾಯು ಬಳಸಿದ್ದರಿಂದ ಪ್ರತಿಭಟನೆ ಹಿಂಸೆಗೆ ತಿರುಗಿದೆ. ಪ್ರತಿಭಟನಕಾರರು ಸರ್ಕಾರವನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಮಾತ್ರವಲ್ಲ, ಉದ್ಯೋಗ
ಸೃಷ್ಟಿ. ಆರ್ಥಿಕ ಸುಧಾರಣೆಗಳು ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮಕೈಗೊಳ್ಳುವಂತೆ ಅವರು ಒತ್ತಾಯಿಸುತ್ತಿದ್ದಾರೆ.
ಈ ಪ್ರತಿಭಟನೆಗಳ ಹಿಂದೆ ಒಂದು ಪಕ್ಷ ಅಥವಾ ರಾಜಕೀಯ ಮುಖಂಡರಾರೂ ಇಲ್ಲ ಎನ್ನಲಾಗಿದೆ.
ಭದ್ರತಾ ಪಡೆಗಳೊಂದಿಗಿನ
ಘರ್ಷಣೆಯಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಈ ಅವಧಿಯಲ್ಲಿ ಸುಮಾರು
4,000 ಜನರು ಗಾಯಗೊಂಡಿದ್ದಾರೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ತಿಳಿಸಿದ್ದಾರೆ.