ಇರಾಕ್ ಇಸ್ರೇಲ್ ಯುದ್ಧ : ಜಿಲ್ಲೆ ಮತ್ತು ತಾಲೂಕಿನಲ್ಲಿ ಅಭಾವ ಸೃಷ್ಟಿ ಶಂಕೆ ಸ್ವಾಕರವೇ ಕ್ರಮಕ್ಕೆ ಆಗ್ರಹ
Iraq-Israel war: Fears of creating poverty in the district and taluk, demand for immediate action
ರಾಣೆಬೆನ್ನೂರು 14 : ಇರಾಕ್ ಇಸ್ರೇಲ್ ಯುದ್ಧದ ಪರಿಣಾಮ ಇಂದು ನಿತ್ಯವೋ ಉದ್ಯಮ ಮತ್ತು ಗ್ರಹ ಬಳಕೆ ಸಿಲೆಂಡಗಳ, ಹಾಗೂ ಕಚ್ಚಾ ತೈಲಗಳ ಅಭಾವ ಸೃಷ್ಟಿ ಮಾಡುತ್ತಿರುವುದು ಕಂಡುಬರುತ್ತಲ್ಲಿದೆ. ಜಿಲ್ಲಾಧಿಕಾರಿಗಳು ಕೂಡಲೆ ಕ್ರಮ ಕೈಗೊಂಡು ಅಂತಹ ಏಜೆನ್ಸಿಗಳ ಮೇಲೆ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಹಸಿಲ್ದಾರ್ ಮೂಲಕ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಂದು ಮನವಿ ಸಲ್ಲಿಸಿದರು.ತಾಲೂಕ ಅಧ್ಯಕ್ಷ ಚಂದ್ರ್ಪ ಬಣಕಾರ ಮಾತನಾಡಿ ಈಗಾಗಲೇ ಬೆಂಗಳೂರು ಮತ್ತು ಅನೇಕ ಜಿಲ್ಲೆಗಳಲ್ಲಿ, ತಾಲೂಕುಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ, ವಾಣಿಜ್ಯ ಮತ್ತು ಗೃಹ ಬಳಕೆಯ ಸಿಲಿಂಡರ್ ಗಳನ್ನು ಅಂಗಡಿ,ಮನೆಗಳಿಗೆ ನೀಡದೆ ಹೋಟೆಲ್ ಮಾಲೀಕರಿಗೆ ಮನೆ ಮಾಲೀಕರಿಗೆ ತೊಂದರೆ ನೀಡುತ್ತಿರುವುದು ಕಂಡು ಬಂದಿರುತ್ತದೆ.
ಅಂತಹ ಸಿಲಿಂಡರ್ ಸಬ್ ಏಜೆನ್ಸಿ ಹಾಗೂ ಮಾಲೀಕರಿಗೆ ಸರಿಯಾದ ಮಾಹಿತಿ ನೀಡಿ, ಯಾವುದೇ ರೀತಿ ಸಾರ್ವಜನಿಕರಿಗೆ ಉದ್ಯಮದಾರಿಗೆ ತೊಂದರೆಯಾಗದಂತೆ ಸಿಲಿಂಡರ್ ನೀಡುವಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದರು. ಜಿಲ್ಲಾ ಕಾರ್ಮಿಕರ ಘಟಕದ ಅಧ್ಯಕ್ಷ ಪರಶುರಾಮ ಕುರುವತ್ತಿ ಮಾತನಾಡಿ ಈಗಾಗಲೇ ನಗರದಲ್ಲಿ ಎರಡು ದಿನಗಳ ನಂತರ ವಾಣಿಜ್ಯ ಬಳಕೆ ಸಿಲಿಂಡರ್ ಸಿಗದೆ ತೊಂದರೆಯಾಗುವ ಪರಿಸ್ಥಿತಿ ಇದೆ , ಹೋಟೆಲ್ ನಂಬಿಕೊಂಡು ಬದುಕುತ್ತಿರುವ ಎಷ್ಟೋ ಕುಟುಂಬಗಳು ಬೀದಿಗೆ ಬಂದಂತಾಗುತ್ತಿದೆ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರು ಯಾವುದೇ ರೀತಿ ತೊಂದರೆಯಾಗದಂತೆ ಸಮರ್ಕವಾಗಿ ಸಿಲಿಂಡರ್ ಪೂರೈಸುಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಶಿವಕುಮಾರ್ ಜಾದವ, ಉಪಾಧ್ಯಕ್ಷ ಕೊಟ್ರೇಶಪ್ಪ ಎಮ್ಮಿ, ಸಿದ್ದರೋಡ ಗುರುಓ,ಪರಶುರಾಮ ಕೋಲಕಾರ,ನಿಂಗಪ್ಪ ಬೀರಣ್ಣನವರ,ಶಂಕರ ಹಳ್ಳಪ್ಪನವರ,ಗೋಪಿ ಕುಂದಾಪುರ, ಪ್ರವೀಣಕುಮಾರ್ ಬಿ ವೈ, ಕಿರಣಗೌಡ ಹೊಸಮನಿ, ನಂದೀಶ್ ಅಟವಾಳಗಿ, ಕೃಷ್ಣ ವೇಷಗಾರ, ದಿಳ್ಳೆಪ್ಪ ಸತ್ಯಪ್ಪನವರ, ಸೇರಿದಂತೆ ಸಂಘಟನೆಯ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 