ಟೆಹ್ರಾನ್, ಜ13: ಅಮೆರಿಕದ
ರಕ್ಷಣಾ ಇಲಾಖೆಯನ್ನು ‘ಭಯೋತ್ಪಾದನಾ
ಸಂಘಟನೆ’ ಎಂದು ಘೋಷಿಸಿ
ಕಪ್ಪುಪಟ್ಟಿಗೆ ಸೇರಿಸುವಂತಾಗುವ ಕಾನೂನು
ಜಾರಿಗೆ ಇರಾನ್ ಅಧ್ಯಕ್ಷ
ಹಸನ್ ರೌಹಾನಿ ಸೋಮವಾರ
ಆದೇಶವೊಂದನ್ನು ಹೊರಡಿಸಿದ್ದಾರೆ.
ಇರಾನ್ ಸಂಸತ್
ಈಗಾಲೇ ಅಂಗೀಕರಿಸಿರುವ ಕಾನೂನು
ಅನ್ನು ಇರಾನ್ ನ
ಸಂಬಂಧಿತ ಸಂಸ್ಥೆಗಳು ಅಂಗೀಕರಿಸಬೇಕು
ಎಂದು ರೌಹಾನಿ ಕರೆ
ನೀಡಿದ್ದಾರೆ.
‘
ಅಮೆರಿಕದ ರಕ್ಷಣಾ ಸಚಿವಾಲಯದ
ಎಲ್ಲ ಸದಸ್ಯರು, ಅದಕ್ಕೆ
ಸಂಬಂಧಿಸಿದ ಸಂಸ್ಥೆಗಳು ಮತ್ತು
ಕಂಪೆನಿಗಳು ಮತ್ತು ಇಸ್ಲಾಮಿಕ್
ರೆವಲ್ಯೂಷನ್ ಗಾಡ್ರ್ಸ್ ಕೋರ್
ನ ಕುಡ್ಸ್ ನ
ಮಾಜಿ ಕಾಮಾಂಡರ್ ಖಾಸೆಮ್
ಸೊಲೆಮಾನಿ ಹತ್ಯೆಗೆ ಸಂಚು
ರೂಪಿಸಿದ ಅಮೆರಿಕದ ಕಮಾಂಡರ್
ಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು.’
ಎಂಬ ನಿರ್ಣಯದ ಪರ
ಜ 7ರಂದು ಇರಾನ್
ಸಂಸತ್ ನಲ್ಲಿ ಮತ
ಹಾಕಲಾಗಿತ್ತು.
ಇರಾನ್ ನ
ಪರಮೋಚ್ಛ ಶಾಸಕಾತ್ಮಕ ಸಂಸ್ಥೆಯಾದ
ಗಾರ್ಡಿಯನ್ ಕೌನ್ಸಿಲ್ ಆಫ್
ಕಾನ್ಸಿಟಿಟ್ಯೂಷನ್
ಈ ಕಾನೂನು ಜಾರಿಗೊಳಿಸಿತ್ತು.
ಪಶ್ಚಿಮ ಏಷ್ಯಾದಲ್ಲಿ ನಿಯೋಜನೆಗೊಂಡಿರುವ ಅಮೆರಿಕ ಪಡೆಗಳನ್ನು ‘ವಿದೇಶಿ ಭಯೋತ್ಪಾದಕ ಸಂಘಟನೆ’ ಎಂದು 2019ರ ಏಪ್ರಿಲ್ ನಲ್ಲಿ ಇರಾನ್ ನ ರಾಷ್ಟ್ರೀಯ ಭದ್ರತಾ ಮಂಡಳಿ ಪ್ರಕಟಿಸಿತ್ತು.