ಗಡಿಯಲ್ಲಿ ಇರಾನಿ-ಅಮೆರಿಕನ್ನರ ಬಂಧನ : ಆರೋಪ ನಿರಾಕರಿಸಿದ ಅಮೆರಿಕ

ವಾಷಿಂಗ್ಟನ್, ಜನವರಿ 6 (ಕ್ಸಿನ್ಹುವಾ) ಅಮೆರಿಕ  ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (ಸಿಬಿಪಿ)  ಇರಾನಿ-ಅಮೆರಿಕನ್ನರನ್ನು ರಾಷ್ಟ್ರದ ಗಡಿಯಲ್ಲಿ ಪ್ರಶ್ನಿಸಿ, ಬಂಧಿಸುತ್ತಿದೆ ಎಂಬ ವರದಿಗಳನ್ನು ಭಾನುವಾರ ಅಮೆರಿಕ  ಸ್ಪಷ್ಟವಾಗಿ ನಿರಾಕರಿಸಿದೆ. "ಸಿಬಿಪಿ ಇರಾನಿಯನ್-ಅಮೆರಿಕನ್ನರನ್ನು ಬಂಧಿಸುತ್ತಿದೆ ಮತ್ತು ಅವರ ಮೂಲದ ದೇಶದಿಂದಾಗಿ ಅಮೆರಿಕ ಪ್ರವೇಶಿಸಲು ನಿರಾಕರಿಸುತ್ತಿದೆ ಎಂಬ  ಸಾಮಾಜಿಕ ಮಾಧ್ಯಮ  ವರದಿಗಳು ಸುಳ್ಳು  ಎಂದು ಸಂಸ್ಥೆ ಟ್ವೀಟ್ ಮಾಡಿದೆ.ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ (ಡಿಹೆಚ್ಎಸ್) ಅಥವಾ ಡಿಹೆಚ್ಎಸ್  ಅಧೀನ ಸಿಬಿಪಿ ಈ ಬಗ್ಗೆ ಯಾವ  ನಿರ್ದೇಶನ  ನೀಡಿಲ್ಲ ಎಂದು ಅದು ಸ್ಪಷ್ಠಪಡಿಸಿದೆ. 

ವಾಯುವ್ಯ ರಾಜ್ಯವಾದ ವಾಷಿಂಗ್ಟನ್‌ನ ಬ್ಲೇನ್‌ನಲ್ಲಿರುವ ಗಡಿ ದಾಟುವಿಕೆಯಲ್ಲಿ "ಎಲ್ಲಾ ವಯಸ್ಸಿನ 60 ಕ್ಕೂ ಹೆಚ್ಚು ಇರಾನಿಯನ್ನರು ಮತ್ತು ಇರಾನಿಯನ್-ಅಮೆರಿಕನ್ನರನ್ನು ಬಂಧಿಸಿ,  ಪ್ರಶ್ನಿಸಲಾಗಿದೆ  ಎಂದು ವೈರಲ್ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಈ ಹೇಳಿಕೆ ನೀಡಲಾಗಿದೆ.ಅಮೆರಿಕದ ವಾಷಿಂಗ್ಟನ್ ರಾಜ್ಯದ ಗವರ್ನರ್ ಜೇ ಇನ್‌ಸ್ಲೀ ಭಾನುವಾರ ಟ್ವೀಟ್ ಮಾಡಿದ್ದು, ಇರಾನಿನ ಅಮೆರಿಕನ್ನರನ್ನು ಬಂಧಿಸಲು ಅಥವಾ ಪ್ರವೇಶ ನಿರಾಕರಿಸುವ ಯಾವುದೆ ಆದೇಶ ನೀಡಿಲ್ಲ ಎಂದು ಹೇಳಿದ್ದಾರೆ. ಇರಾಕ್‌ನಲ್ಲಿ ಶುಕ್ರವಾರ (ಬಾಗ್ದಾದ್ ಸಮಯ)  ಯು.ಎಸ್. ವೈಮಾನಿಕ ದಾಳಿಯ ನಂತರ ಇರಾನ್‌ನ ಹಿರಿಯ ಕಮಾಂಡರ್  ಸೊಲೈಮಾನಿ ಅವರನ್ನು ಕೊಂದ ನಂತರ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ.ಈ ಹತ್ಯೆಗೆ  ಪ್ರತೀಕಾರ ತೀರಿಸಿಕೊಳ್ಳಲು ಇರಾನ್‌ನಲ್ಲಿ ಆಕ್ರೋಶ ಭುಗಿಲೆದ್ದಿದೆ. ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಮೆರಿಕದ ನಗರಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.