ಇರಾನ್ ಮತ್ತೆ ಪರಮಾಣು ಕೇಂದ್ರ ಮರು ನಿರ್ಮಾಣಕ್ಕೆ ಮುಂದಾದ್ರೆ ಭೀಕರ ದಾಳಿ: ಟ್ರಂಪ್
Iran will face a massive attack if it rebuilds nuclear facility: Trump
ವಾಷಿಂಗ್ಟನ್ 25: ಅಮೆರಿಕದ ವಾಯುಪಡೆ ದಾಳಿಯಲ್ಲಿ ಇರಾನ್ ನ ಪರಮಾಣು ಘಟಕಗಳು ಸಂಪೂರ್ಣವಾಗಿ ನಾಶವಾಗಿರುವುದಾಗಿ ತಿಳಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಒಂದು ವೇಳೆ ಇರಾನ್ ಮತ್ತೆ ಪರಮಾಣು ಸ್ಥಾವರಗಳನ್ನು ಪುನರ್ನಿಮಾಣ ಮಾಡಲು ಹೊರಟರೆ ಅಮೆರಿಕ ಮತ್ತೆ ಭೀಕರ ದಾಳಿ ನಡೆಸಲಿದೆ ಎಂದು ಎಚ್ಚರಿಸಿರುವುದಾಗಿ ವರದಿ ವಿವರಿಸಿದೆ.
ಅಮೆರಿಕ
ಸೇನಾಪಡೆಯ ಬಾಂಬ್ ದಾಳಿಯ ಪರಿಣಾಮ ಇರಾನ್ ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಸಾಮರ್ಥ್ಯವನ್ನು ನಾಶ ಮಾಡಿದೆ ಎಂದು ಅಮೆರಿಕ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಪೀಟ್ ಹೆಗ್ಸೆಥ್ ಹೇಳಿಕೆಯ ನಂತರ ಟ್ರಂಪ್ ಈ ಪ್ರತಿಕ್ರಿಯೆ ಹೊರಬಿದ್ದಿರುವುದಾಗಿ
ವರದಿ ತಿಳಿಸಿದೆ.
ಹೌದು
ನಾವು ಪ್ರತಿಯೊಂದನ್ನು ಪರಿಶೀಲಿಸಿದ ಆಧಾರದಂತೆ, ಇರಾನ್ ನ ಪರಮಾಣು ಶಸ್ತ್ರಾಸ್ತ್ರ
ತಯಾರಿಕೆಯ ಸಾಮರ್ಥ್ಯವನ್ನು ಸಂಪೂರ್ಣವಾಗಿ ನಾಶ ಮಾಡಿದ್ದೇವೆ. ನಮ್ಮ ಗಜಗಾತ್ರದ ಬಾಂಬ್ ಗಳು ನೇರವಾಗಿ ಪರಮಾಣು ಸೌಕರ್ಯದ ನೆಲೆಗಳನ್ನು ಧ್ವಂಸಗೊಳಿಸಿಬಿಟ್ಟಿದೆ. ದಾಳಿಯ ಹೊಡೆತಕ್ಕೆ ಇರಾನ್ ನ ಪರಮಾಣು ಭೂಗತ
ಸ್ಥಾವರದ ಅವಶೇಷಗಳು ಪರ್ವತದೊಳಗೆ ಹೂತುಹೋಗಿದೆ ಎಂದು ಹೆಗ್ಸೆಥ್ ತಿಳಿಸಿರುವುದಾಗಿ ಸಿಎನ್ ಎನ್ ವರದಿ ಮಾಡಿದೆ.
ಆದರೆ
ಗುಪ್ತಚರ ಮೂಲಗಳ ಮಾಹಿತಿಯಂತೆ, ಇರಾನ್ ನ ನ್ಯೂಕ್ಲಿಯರ್ ಘಟಕಗಳ
ಸೆಂಟ್ರಿಫ್ಯೂಜಸ್ ಬಹುತೇಕ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಅಮೆರಿಕದ ದಾಳಿಗೂ ಮುನ್ನ ಇರಾನ್ ತನ್ನ ಬಳಿ ಇದ್ದ ಯುರೇನಿಯಂ ಅನ್ನು ರಹಸ್ಯ ಸ್ಥಳಕ್ಕೆ ಸಾಗಿಸಿರುವ ಸಾಧ್ಯತೆ ಇದ್ದಿರುವುದಾಗಿ ತಿಳಿಸಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 