ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ: 80 ಅಮೆರಿಕ ಯೋಧರು ಸಾವು

ಬಾಗ್ದಾದ್, ಜ 8 ಇರಾಕ್ ನಲ್ಲಿನ ಅಮೆರಿಕ ಸೇನೆ ಮತ್ತು ಮೈತ್ರಿ ಪಡೆಗಳ ಮೇಲೆ ಇರಾನ್ ನಡೆಸಿದ ಹತ್ತಾರು ಖಂಡಾಂತರ ಕ್ಷಿಪಣಿ ದಾಳಿಗಳಲ್ಲಿ 80ಕ್ಕೂ ಹೆಚ್ಚು ಅಮೆರಿಕ ಯೋಧರು ಮೃತಪಟ್ಟಿದ್ದಾರೆ. 'ಇರಾಕ್ ನ ಅಯಿನ್ ಅಲ್ ಅಸಾದ್ ನೆಲೆ ಮೇಲೆ ಇರಾನ್ ನ ರೆವಲ್ಯೂಷನರಿ ಗಾಡ್ರ್ಸ ನಡೆಸಿದ ಕ್ಷಿಪಣಿ ವೈಮಾನಿಕ ದಾಳಿಗಳಲ್ಲಿ ಕನಿಷ್ಠ 80 ಮಂದಿ ಮೃತಪಟ್ಟಿದ್ದಾರೆ.' ಎಂದು ರೆವಲ್ಯೂಷನರಿ ಗಾಡ್ರ್ಸ ನ ಹಿರಿಯ ಅಧಿಕಾರಿಯನ್ನು ಉಲ್ಲೇಖಿಸಿ ಇರಾನ್ ಟಿವಿ ವರದಿ ಮಾಡಿದೆ. ಅಮೆರಿಕದ ಹೆಲಿಕಾಪ್ಟರ್ ಗಳು ಮತ್ತು ಸೇನಾ ಸಾಧನಗಳು ಸಹ ಭಾರೀ ಹಾನಿಗೊಂಡಿವೆ ಎಂದು ಅವರು ಹೇಳಿದ್ದಾರೆ. ಇರಾನ್ ತನ್ನ ಸಾಮಥ್ರ್ಯದ ಸ್ವಲ್ಪ ಭಾಗವನ್ನಷ್ಟೇ ತೋರಿದೆ ಎಂದು ಇಂದು ಬೆಳಿಗ್ಗೆ ಇರಾನ್ ಸಶಸ್ತ್ರ ಸೇನಾ ಪಡೆಗಳ ಮುಖ್ಯಸ್ಥ ಮೇಜರ್ ಜನರಲ್ ಮೊಹಮದ್ ಬಾಗೇರಿ ತಿಳಿಸಿದ್ದಾರೆ. ಇರಾನ್ ನೊಂದಿಗೆ ವ್ಯವಹರಿಸಲು ಅಮೆರಿಕಕ್ಕೆ ಸಮಯ ಕೂಡಿ ಬಂದಿದೆ ಎಂದು ಅವರು ಹೇಳಿದ್ದಾರೆ. ಇರಾನ್ ಕಮಾಂಡರ್ ಅನ್ನು ಅಮೆರಿಕ ಡ್ರೋನ್ ದಾಳಿ ಮೂಲಕ ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಇಂದು ಬೆಳಿಗ್ಗೆ ಇರಾಕ್ ನ ಅಮೆರಿಕ ಪಡೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿಗಳನ್ನು ನಡೆಸಿತ್ತು.