12ನೇ ಅಖಿಲ ಭಾರತ ವಾರ್ಷಿಕ ಕಲಾ ಪ್ರದರ್ಶನಕ್ಕೆ ಕಲಾಕೃತಿಗಳ ಆಹ್ವಾನ
Invitation for artworks for the 12th All India Annual Art Exhibition
ಕಲಬುರಗಿ 28: ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯು 12ನೇ ಅಖಿಲ ಭಾರತ ವಾರ್ಷಿಕ ಕಲಾ ಪ್ರದರ್ಶನಕ್ಕೆ ಕಲಾಕೃತಿಗಳನ್ನು ಆಹ್ವಾನಿಸಿದೆ. ಜಲವರ್ಣ, ತೈಲವರ್ಣ, ರೇಖಾಚಿತ್ರ, ಮಿಶ್ರಮಾಧ್ಯಮ, ಛಾಯಾಚಿತ್ರ, ಗ್ರಾಫಿಕ್ ಮತ್ತು ಶಿಲ್ಪ ಮಾಧ್ಯಮದ ಮೂಲಕಲಾಕೃತಿಗಳನ್ನು ಸ್ಪರ್ಧೆ ಮತ್ತು ಕಲಾ ಪ್ರದರ್ಶನಕ್ಕೆ ಕಳುಹಿಸಬಹುದಾಗಿದೆ.
ಅತ್ಯುತ್ತಮವಾದ ಆರು ಕಲಾಕೃತಿಗಳಿಗೆ ತಲಾ ರೂ.6,000/- ನಗದು ಮತ್ತು ದೃಶ್ಯಬೆಳಕು ಪ್ರಶಸ್ತಿ ಹಾಗೂ ಮೂರು ಜನ ಖ್ಯಾತ ಕಲಾವಿದರ ಹೆಸರಿನಲ್ಲಿ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಲಾಸ್ಪರ್ಧೆ ಮತ್ತು ಕಲಾ ಪ್ರದರ್ಶನದಲ್ಲಿ ಭಾಗವಹಿಸಲಿಚ್ಚಿಸುವವರು ಚಿತ್ರಕಲಾವಿದರ ವ್ಯಕ್ತಿ ಪರಿಚಯ ಮತ್ತು ಭಾವಚಿತ್ರದೊಂದಿಗೆ ಮೂಲಕಲಾಕೃತಿಗಳ 6ಘಿ8 ಅಳತೆಯ ಒಂದೇ ಮಾಧ್ಯಮಕ್ಕೆ ಸೇರಿದ ಎರಡು ಕಲಾಕೃತಿಗಳ ಛಾಯಾಚಿತ್ರಗಳನ್ನು ಮಾತ್ರ ಸ್ವೀಕರಿಸಲಾಗುವುದು. ಸ್ಪರ್ಧೆಗೆ ಕಳುಹಿಸುವ ಚಿತ್ರಕಲಾಕೃತಿಗಳು ಗರಿಷ್ಠ 6ಘಿ6 ಅಡಿ ಅಳತೆ ಮೀರದಂತೆ ಇರಬೇಕು.
ಮೂಲಕಲಾಕೃತಿಗಳ ಛಾಯಾಚಿತ್ರಗಳನ್ನು ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಗೆ ಅಗಸ್ಟ್ 20 ರೊಳಗೆ ತಲುಪುವಂತೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಡಾ. ಪರಶುರಾಮ ಪಿ, ಪ್ಲಾಟ್ ನಂ.17, ಪ್ರಶಾಂತ ನಗರ (ಬಿ), ಕಲಬುರಗಿ ಅಥವಾ ಮೊ.ನಂ. 9901360105 ಗೆ ಸಂಪರ್ಕಿಸಬಹುದಾಗಿದೆ.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 