ಕಾಗವಾಡ ಪೊಲೀಸರಿಂದ ಅಂತರರಾಜ್ಯ ಬೈಕ್ ಕಳ್ಳನ ಬಂಧನ..!
Interstate bike thief arrested by Kagawad police..!
ಲೋಕದರ್ಶನ ವರದಿ
ಕಾಗವಾಡ 16: ತಾಲೂಕಿನ ಶಿರಗುಪ್ಪಿ ಗ್ರಾಮದ ಪ್ರವೀಣ ಅಶೋಕ ಹೇಮಗಿರೆ ಇವರು ತಮ್ಮ ಬೈಕ್ ಕಳುವಾದ ಬಗ್ಗೆ ನೀಡಿದ ದೂರಿನನ್ವಯ ಕಾಗವಾಡ ಪೋಲಿಸರು ಮಲ್ಹಾರವಾಡಿ- ಮಂಗಸೂಳಿ ಗ್ರಾಮದ ರಂಜೀತ ಶ್ರೀರಂಗ ಲೋಖಂಡೆ (25) ಇತನಿಂದ ಮೂರು ಬೈಕ್ಗಳನ್ನು ವಶಪಡಿಸಿಕೊಂಡು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬೆಳಗಾವಿ ಜಿಲ್ಲಾ ಪೊಲೀಸ ಅಧೀಕ್ಷಕ ಕೆ.ರಾಮರಾಜನ, ಹೆಚ್ಚುವರಿ ಪೊಲೀಸ ಅಧೀಕ್ಷಕ ಆರಿ್ಬ. ಬಸರಗಿ, ಅಥಣಿ ಡಿಎಸ್ಪಿ ಪ್ರಶಾಂತ ಮುನ್ನೋಳ್ಳಿ, ಅಥಣಿ ಸಿಪಿಐ ಸಂತೋಷ ಹಳ್ಳೂರ ಅವರ ನೇತೃತ್ವದಲ್ಲಿ ಕಾಗವಾಡ ಪಿಎಸ್ಐ ರಾಘವೇಂದ್ರ ಖೋತ ಮುಂದಾಳತ್ವದಲ್ಲಿ ಅಪರಾಧ ತಂಡವನ್ನು ರಚಿಸಿ, ಆರೋಪಿಯಿಂದ ಹಿರೋ ಎಚ್ಎಫ್ ಡಿಲೆಕ್ಸ ನಂ. ಕೆಎ-23ಇಇ-1868 (ಕಾಗವಾಡ ಪೋಲಿಸ್ ಠಾಣೆ) ಹಿರೋ ಹೊಂಡಾ ಸ್ಪೆಂಡರ ಪ್ಲಸ್ ನಂ. ಎಂಎಚ್-10ಬಿಕೆ-8350 (ಮಹಾರಾಷ್ಟ್ರದ ಮಿರಜ ಪೊಲೀಸ ಠಾಣೆ) ಮತ್ತು ಹೊಂಡಾ ಎಕ್ಟಿವಾ ನಂ. ಎಂಎಚ್-10ಡಿಂ-0952 (ಮಹಾರಾಷ್ಟ್ರದ ಕವಟೇಮಹಾಕಾಳ ಪೊಲೀಸ ಠಾಣೆ) ಹೀಗೆ ಒಟ್ಟು ಸುಮಾರು ರೂ. 1.25 ಲಕ್ಷ ಮೌಲ್ಯದ 3 ಬೈಕ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಪರಾಧ ತಂಡದಲ್ಲಿ ಎಎಸ್ಐ ಎಸ್.ವ್ಹಿ. ಹಂಜಿ, ಪೋಲಿಸ್ ಸಿಬ್ಬಂದಿಗಳಾದ ಆರಿ್ಪ. ಕಾಟೇಕರಿ, ಎಸ್.ಪಿ. ಮುಗ್ಗನ್ನವರ, ಎಂ.ಎಂ. ಜಂಬಗಿ, ಎಸ್.ಎಸ್. ನಂದಿವಾಲೆ ಎ.ಎಲ್. ಜಾಯಗೋಣೆ ವಿನೋಧ ಠಕ್ಕನ್ನವರ ಕಾರ್ಯ ನಿರ್ವಹಿಸಿದ್ದು, ಸದರಿ ಕಾರ್ಯವನ್ನು ಬೆಳಗಾವಿ ಎಸ್ಪಿ ಶ್ಲಾಘಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 