ಅಂತರರಾಷ್ಟ್ರೀಯ ಗಾಯಕ ವಿಕ್ಕಿ ಡಿ. ಪಾರೆಖ್‌ರಿಂದ ಸಿದ್ದಾರೂಢ ಮಠಕ್ಕೆ ಭೇಟಿ
International singer Vicky D. Parekh visits Siddharudha Math
ಹುಬ್ಬಳ್ಳಿ 23: ಅಂತರರಾಷ್ಟ್ರೀಯ ಖ್ಯಾತಿ ಪಡೆದ ಗಾಯಕ ಹಾಗೂ ಜೈನ್ ರಾಕ್‌ಸ್ಟಾರ್ ವಿಕ್ಕಿ ಡಿ. ಪಾರೆಖ್ ಅವರು ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ದಕ್ಷಿಣದ ಕಾಶಿ ಎಂದು ಪ್ರಸಿದ್ಧವಾದ ಶ್ರೀ ಸಿದ್ದಾರೂಢ ಸ್ವಾಮೀಜಿ ಮಠಕ್ಕೆ ಆತ್ಮೀಯ ಭೇಟಿ ನೀಡಿದರು.
ಸ್ವಾಮೀಜಿಗಳ ಸನ್ನಿಧಿಯಲ್ಲಿ ಭಕ್ತಿಭಾವದಿಂದ ದರ್ಶನ- ಆರತಿ ಮಾಡಿ ಆಶೀರ್ವಾದ ಪಡೆದ ಅವರು, ಮಠದಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳ ಬಗ್ಗೆ ವಿವರವಾದ ಮಾಹಿತಿ ಪಡೆದುಕೊಂಡರು.
ಭೇಟಿಯ ಸಂದರ್ಭದಲ್ಲಿ ಮಂಚ ಸಾರಥಿ ಲಲಿತ್ ಪರಮಾರ್ ಹಾಗೂ ವಿಕ್ಕಿ ಪಾರೆಖ್ ಅವರ ತಂಡದ ಇತರ ಕಲಾವಿದರು ಸಹ ಹಾಜರಿದ್ದರು.
ಈ ಸಂದರ್ಭದಲ್ಲಿ ಮಠದ ಮಾಜಿ ಚೇರ್‌ಮನ್ ಮಹೇಂದ್ರ ಸಿಂಘಿ, ಪ್ರಸ್ತುತ ಚೇರ್‌ಮನ್ ಚನ್ವೀರ ಮುಂಗರವಾಡಿ ಸೇರಿದಂತೆ ಹಲವಾರು ಗಣ್ಯರು ವಿಕ್ಕಿ ಪಾರೆಖ್ ಮತ್ತು ಲಲಿತ್ ಪರಮಾರ್ ಅವರನ್ನು ಸನ್ಮಾನಿಸಿ ಆತ್ಮೀಯವಾಗಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮಹಾವೀರ ಲಿಂಬ್ ಸೆಂಟರ್‌ನ ಚೇರ್‌ಮನ್ ಗೌತಮ್ ಗೋಲೆಚ್ಛಾ, ಪ್ರಕಾಶ ಕಟಾರಿಯಾ, ಕಾಂತಿಲಾಲ್ ಬೋಹರಾ, ಮಹಾವೀರ ಕುಂದೂರ್ ಸೇರಿದಂತೆ ಇತರ ಸಮಾಜಬಂಧುಗಳು ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 