ಮಹಾವೀರ ಲಿಂಬ್ ಸೆಂಟರ್ ಗೆ ಅಂತಾರಾಷ್ಟ್ರೀಯ ಗಾಯಕ ವಿಕ್ಕಿ ಡಿ. ಪಾರೆಖ್ ಭೇಟಿ

ಮಹಾವೀರ ಲಿಂಬ್ ಸೆಂಟರ್ ಗೆ ಅಂತಾರಾಷ್ಟ್ರೀಯ ಗಾಯಕ ವಿಕ್ಕಿ ಡಿ. ಪಾರೆಖ್ ಭೇಟಿ   International singer Vicky D. Parekh visits Mahavir Limb Center

                             ಹುಬ್ಬಳ್ಳಿ 21: ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ವಿಕ್ಕಿ ಡಿ. ಪಾರೆಖ್ ಅವರು ಆಲ್ ಇಂಡಿಯಾ ಜೈನ್ ಯೂತ್ ಫೆಡರೇಶನ್ ವತಿಯಿಂದ ಕಿಮ್ಸ್‌ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಾವೀರ ಲಿಂಬ್ ಸೆಂಟರ್, ಹುಬ್ಬಳ್ಳಿಗೆ ಭೇಟಿ ನೀಡಿ, ಕೃತಕ ಕಾಲುಗಳ ತಯಾರಿ ಹಾಗೂ ಅಳವಡಿಸುವ ಪ್ರಕ್ರಿಯೆಯನ್ನು ಪರೀಶೀಲಿಸಿ, ಸ್ವತಃ ತಾವೂ ಹಲವು ವಿಕಲಚೇತನರಿಗೆ ಕೃತಕ ಕಾಲುಗಳನ್ನು ಅಳವಡಿಸಿ ಅವರೊಂದಿಗೆ ಚರ್ಚಿಸಿದರು. ಭೇಟಿಯ ವೇಳೆ ಪಾರೆಖ್ ಅವರು ಕೇಂದ್ರದ ಉಚಿತ ಸೇವಾ ಚಟುವಟಿಕೆಗಳನ್ನು ಮೆಚ್ಚಿ, “ಜೈನ ಸಮಾಜದ ಗೌರವ ಮಹೇಂದ್ರ ಸಿಂಘಿ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ತಂಡವು ‘ಮಾನವತೆಯೇ ಮಾನವನ ಮಹಾಧರ್ಮ’ ಎನ್ನುವ ಸಂದೇಶವನ್ನು ನೈಜವಾಗಿ ಜಾರಿಗೆ ತರುತ್ತಿದೆ” ಎಂದು ಹೇಳಿದರು. ಮಹಾವೀರರ ಆದರ್ಶಗಳ ಮೇಲೆ ನಡೆಯುತ್ತಿರುವ ಈ ಸಂಸ್ಥೆ ಪ್ರೇರಣಾದಾಯಕವೂ, ಅನುಕರಣೀಯವೂ ಆಗಿದೆ.

                     ಎಂದರಲ್ಲದೆ ಈ ಸಂದರ್ಭದಲ್ಲಿ ಪಾರೆಖ್ ಅವರು ದಿವ್ಯಾಂಗರ ಸೇವೆಗೆ ಬೆಂಬಲವಾಗಿ ಮಹಾವೀರ ಲಿಂಬ್ ಸೆಂಟರ್ ಪರವಾಗಿ ಉಚಿತ ಸಂಗೀತ ಕಾರ್ಯಕ್ರಮ ನಡೆಸಿಕೊಡುವ  ಭರವಸೆ ನೀಡಿದರು ಹಾಗೂ ರೂ 51,000 ದೇಣಿಗೆ  ಘೋಷಿಸಿದರು. ಫೆಡರೇಶನ್ನ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ಅವರು, ವಿಕ್ಕಿ ಡಿ. ಪಾರೆಖ್ ನಿರ್ಮಿಸಿದ “ರಿಷ್ಟೋ ಕೀ ಡೋರ್‌” ವಿಶೇಷ ಆಲ್ಬಮ್ ಅನೇಕ ಕುಟುಂಬಗಳ ಭಾವನಾತ್ಮಕ ಬಾಂಧವ್ಯವನ್ನು ಬಲಪಡಿಸಿದೆ ಎಂದು ಹೇಳಿದರು   ಲಲಿತ್ ಪರ್ಮಾರ್ ನಿರೂಪಿಸಿದರು.ಲಿಂಬ್ ಸೆಂಟರ್ ಅಧ್ಯಕ್ಷ ಗೌತಮ್ ಗೋಲೇಚಾ, ಫೆಡರೇಶನ್ನ ಕಾರ್ಯದರ್ಶಿ ಪ್ರಕಾಶ್ ಕಟಾರಿಯಾ, ಸಹಕಾರ್ಯದರ್ಶಿ ಮಹಾವೀರ ಕುಂದೂರ್, ಸಂಯೋಜಕ ಸುಭಾಷ್ ಡಂಕ್, ಸುನಿಲ್ ಭುರಟ್, ಕಾಂತಿಲಾಲ್ ಬೋಹ್ರಾ, ಪ್ರಕಾಶ್ ಚೋರಡಿಯಾ, ಉಜ್ವಲ್ ಸಿಂಘಿ ಸೇರಿದಂತೆ ಹಲವರು ಉಪಸ್ಥಿತರಿದ್ದರು