ಅಂತರಾಷ್ಟ್ರೀಯ ಮಾದಕವಸ್ತು ಬಳಕೆ, ಅಕ್ರಮ ಸಾಗಾಣಿಕೆ ಜಾಗೃತಿ
International drug use and trafficking awareness
ಚಿಕ್ಕೋಡಿ, 26 : ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದಲ್ಲಿ ದುಷ್ಪರಿಣಾಮ ಬಿರುತ್ತಿದೆ. ವಿದ್ಯಾರ್ಥಿಗಳು ಮಾದಕ ವಸ್ತುಗಳ ಬಳಕೆ ಮತ್ತು ಸಾಗಣಿಕೆ ವಿರುದ್ಧ ಸಮರ ಸಾರಬೇಕು ಎಂದು ಡಿವೈಎಸ್‌ಪಿ ಗೋಪಾಲಕೃಷ್ಣ ಗೌಡರ ಹೇಳಿದರು.
ಇಲ್ಲಿನ ಸಿಟಿಇ ಸಂಸ್ಥೆಯ ಆರ್.ಡಿ.ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಾದಕವಸ್ತು ಬಳಕೆ ಹಾಗೂ ಅಕ್ರಮ ಸಾಗಾಣಿಕೆ ವಿರೋಧಿ ದಿನಾರಚರಣೆಯ ನಿಮಿತ್ಯ ಪ್ರತಿಜ್ಞಾ ಸ್ವೀಕಾರ ಹಾಗೂ ಸಾರ್ವಜನಿಕ ಜನಜಾಗೃತಿ ರಾ್ಯಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಾದಕ ಸೇವನೆ ದುಷ್ಪರಿಣಾಮದ ಕುರಿತು ವಿವರಿಸಿ ಅಂಥಹ ಚಟುವಟಿಕೆಗಳಿಗೆ ಬಲಿಯಾಗದಂತೆ ಜಾಗ್ರತಿ ವಹಿಸಲು ಸೂಚಿಸಿದರು. ಮಾದಕ ಪದಾರ್ಥಗಳನ್ನು ಮಾರಾಟ ಮಾಡುವ ಘಟನೆ ಅಥವಾ ಮಾದಕ ವಸ್ತು ಸೇವನೆ ವ್ಯಕ್ತಿಗಳು ತಮ್ಮ ಗಮನಕ್ಕೆ ಬಂದರೆ ತಮ್ಮ ಉಪನ್ಯಾಸಕರ ಮೂಲಕ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿ ಸಹಿಕರಿಸುವಂತೆ ವಿನಂತಿಸಿದರು.
ನಂತರ ಪಟ್ಟಣದಲ್ಲಿ ಸ್ವಾಸ್ಥ್ಯಸಮಾಜ ನಿರ್ಮಿಸಲು ಸಾರ್ವಜನಿಕ ರಾ್ಯಲಿ ನಡೆಯಿತು. ಈ ಸಮಾರಂಭದಲ್ಲಿ ಸಿಪಿಐ ವಿಶ್ವನಾಥ ಚೌಗಲಾ, ಪಿಎಸ್‌ಐ ಬಸವರಾಜ ನೇರ್ಲಿ, ರೂಪಾಲಿ ಗಡೋಡಗಿ, ಆನಂದ ಕ್ಯಾರಕಟ್ಟಿ, ಕಮತಗಿ, ಪೋಲಿಸ್ ಸಿಬ್ಬಂದಿ ಯಲ್ಲಪ್ಪಾ ಸಪ್ತಸಾಗರ, ಆರ್.ಆರ್.ಕರಿಗಾರ, ಎ.ಎಂ. ಬೆಂಡಿಗೇರಿ, ಜೆ.ಬಿ. ಸಂಕರಟ್ಟಿ, ಎಸ್.ಬಿ. ಗಲಗಲಿ, ಕಟಕಬಾವಿ ಶ್ರೀಧರ ಗೊಂಡಿ, ಲಕ್ಷ್ಮೀ ಖೋತ, ಶಿವಕ್ಕಾ ಕುಂಬಾರ, ಪ್ರಾಚಾರ್ಯರು ಯು.ಎಸ್. ಶಿಂದೆ, ಉಪನ್ಯಾಸಕರಾದ ಎನ್.ವಿ.ಶಿರಗಾಂವಕರ, ಪಿ.ಆರ್.ಮನಗೂಳಿ, ಎ.ಎಲ್. ಮಾನೆ, ಪಿ.ಪಿ. ಮಾನೆ ಮೊದಲಾದವರು ಪಾಲ್ಗೊಂಡರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 