ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ: ಸಾವಿರಕ್ಕೂ ಹೆಚ್ಚು ಮಂದಿ ಭಾಗಿ
International Yoga Day celebration: Over a thousand people participated
ದೇವರಹಿಪ್ಪರಗಿ 21: ಅಂತಾರಾಷ್ಟ್ರೀಯ ಯೋಗ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಅದೇರೀತಿ ಯೋಗದ ಮಹತ್ವ ಪ್ರಚುರ ಪಡಿಸುವ ನಿಟ್ಟಿನಲ್ಲಿ ದೇವರಹಿಪ್ಪರಗಿ ಪಟ್ಟಣದ ಸಿದ್ದೇಶ್ವರ ಸ್ವಾಮೀಜಿ ಶಾಲಾ ಆವರಣದಲ್ಲಿ ಯೋಗೋತ್ಸವ ಸಮಿತಿ ದೇವರಹಿಪ್ಪರಗಿ ಹಾಗೂ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಸಂಸ್ಥೆ ಇವರ ಸಹಯೋಗದಲ್ಲಿ ಶನಿವಾರದಂದು ಆಯೋಜಿಸಿದ್ದ 11ನೇ ವಿಶ್ವ ಯೋಗ ದಿನಾಚರಣೆಯ ದಿವ್ಯ ಸಾನಿಧ್ಯವನ್ನು ವಿಜಯಪುರದ ಜ್ಞಾನ ಯೋಗ ಆಶ್ರಮದ ಗುರುಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೆಳಗ್ಗೆ 6ಕ್ಕೆ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.
ವಿಜಯಪುರದ ಜ್ಞಾನ ಯೋಗಾಶ್ರಮದ ಗುರುಲಿಂಗ ಮಹಾಸ್ವಾಮಿಗಳ ಸುಮಾರು 45 ನಿಮಿಷಗಳ ಕಾಲ ಸಾಮೂಹಿಕವಾಗಿ ಯೋಗಾಭ್ಯಾಸದ ಜೋತೆ ಯೋಗ ಎಂದರೆ ಶರೀರ, ಮನಸ್ಸು, ಅತ್ಮಗಳ ಸಮಾಗಮ. ಯೋಗದಿಂದ ನಮ್ಮ ಸಂಸ್ಕೃತಿ ಒಂದಾಗುವ ಸುಸಂದರ್ಭ ಇದಾಗಿದೆ. ಯೋಗ ದಿನಾಚರಣೆಯಲ್ಲಿ ಶಿಷ್ಟಾಚಾರದ ಯೋಗ, ಪ್ರಾಣಾಯಾಮವನ್ನು ಸಾಮೂಹಿಕವಾಗಿ ಮಾಡುವುದರ ಜೊತೆಗೆ ಶಿಸ್ತುಬದ್ಧ ಬದುಕು ಹೇಗೆ ನಡೆಸುವುದು ಎನ್ನುವುದನ್ನು ಕಲಿಯಬಹುದಾಗಿದೆ ಎಂದು ಹೇಳಿದರು.
ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಶಾಲಾ ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಸುಮಾರು ಸಾವಿರಕ್ಕೂ ಜನ ಭಾಗವಹಿಸಿದ್ದರು.
ನಿವೃತ್ತ ನೌಕರರ ಸಂಘ ತಾಲೂಕು ಅಧ್ಯಕ್ಷ ಚನ್ನವೀರ್ಪ ಕುದರಿ, ಯೋಗಪಟು ಪಂಚಾಕ್ಷರಿ ಮಿಂಚಿನಾಳ, ಸಿದ್ದೇಶ್ವರ ಸಂಸ್ಥೆಯ ಮುಖ್ಯಸ್ಥರಾದ ವ್ಹಿ.ಕೆ.ಪಾಟೀಲ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎನ್.ಬಸವರೆಡ್ಡಿ, ಸಂಗನಗೌಡ ಬಿರಾದಾರ, ಶಿಕ್ಷಣ ಸಂಯೋಜಕರಾದ ಎಸ್,ಎಂ,ಕಪನಿಂಬರಗಿ, ಬಿ.ಆರಿ್ಪ ಸಾಹೇಬಗೌಡ ಬಿರಾದಾರ, ಬಾಬುಗೌಡ ಪಾಟೀಲ, ಸಿದ್ದು ಮೇಲಿನಮನಿ, ರಾವುತ್ ತಳಕೇರಿ, ಮಹಾಂತೇಶ ಬಿರಾದಾರ, ಸೋಮಶೇಖರ ಹಿರೇಮಠ, ಚಿನ್ಮಯಿ ಕೋರಿ ಸೇರಿದಂತೆ ಪ್ರಮುಖರು, ಗಣ್ಯರು, ಸಿದ್ದೇಶ್ವರ ಸ್ವಾಮೀಜಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 