ನೇಸರಗಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಣೆ

ನೇಸರಗಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಣೆ International Yoga Day celebrated in Nesaragi

ನೇಸರಗಿ 21 :  ಇಲ್ಲಿಂದ ಎ ಪಿ ಎಂ ಸಿ ಆವರಣದಲ್ಲಿ ರವಿವಾರ ಬೆಳಿಗ್ಗೆ 6-00 ಘಂಟೆಗೆ ನೇಸರಗಿ ಗ್ರಾಮದ ಅನೇಕ ಯೋಗ ನುರಿತ ಶಿಕ್ಷಕರು, ಗಣ್ಯರು, ರಾಜಕೀಯ ಮುಖಂಡರ, ವಿದ್ಯಾರ್ಥಿಗಳ ನೇತೃತ್ವದಲ್ಲಿ 12 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯೋಗದ ಅನೇಕ ಭಂಗಿಗಳನ್ನು  ಮಾಡಿ ಅದ್ದೂರಿಯಾಗಿ ಆಚರಿಸಲಾಯಿತು.   ಈ ಸಂದರ್ಭದಲ್ಲಿ ಮಾಜಿ ಗ್ರಾ ಪಂ ಅಧ್ಯಕ್ಷ ವೀರಭದ್ರ ಚೋಭಾರಿ, ಜಿಲ್ಲಾ ಬಿಜೆಪಿ ಎಸ್ ಟಿ ಮೋರ್ಚಾ ಅಧ್ಯಕ್ಷ ಅಡಿವಪ್ಪ ಚಿಗರಿ, ಮಲ್ಲಿಕಾರ್ಜುನ ಸೋಮಣ್ಣವರ,ತೆಜ್ಜಪ್ಪಗೌಡ ಪಾಟೀಲ, ಸುರೇಶ ಲೆಂಕನಟ್ಟಿ, ಶಿಕ್ಷಕ ಸಂತೋಷ ಪಾಟೀಲ,ಮಲ್ಲಿಕಾರ್ಜುನ ಸತ್ತಿಗೇರಿ, ಚೇತನ ಕೊಳದೂರ,ಅನೇಕ ವಿದ್ಯಾರ್ಥಿಗಳು, ಯುವಕರು,ಯೋಗ ಆಸಕ್ತರು ಭಾಗವಹಿಸಿದ್ದರು.