ಬಳ್ಳಾರಿಯಲ್ಲಿ ಸಂಭ್ರಮದ ಅಂತರರಾಷ್ಟ್ರೀಯ ಯೋಗ ದಿನಾಚರಣೆ
International Yoga Day celebrated in Bellary
ಬಳ್ಳಾರಿ 21: ‘ಆರೋಗ್ಯವೇ ಭಾಗ್ಯ’ ಎಂಬ ದಿವ್ಯ ಮಂತ್ರಕ್ಕೆ ಜೀವ ತುಂಬುವಂತೆ, ಭಾನುವಾರ ಜಿಲ್ಲಾ ಕೇಂದ್ರದಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ಸಡಗರ ಮತ್ತು ಉತ್ಸಾಹದಿಂದ ಆಚರಿಸಲಾಯಿತು.
ವಯಸ್ಸಿನ ಭೇದವಿಲ್ಲದೆ, ನೂರಾರು ಜನರು ಮುಂಜಾನೆಯ ತಂಗಾಳಿಯಲ್ಲಿ ಯೋಗಾಸನಗಳನ್ನು ಮಾಡುವ ಮೂಲಕ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯದ ಸಂದೇಶವನ್ನು ಸಾರಿದರು.
ಸುರ್ಯೋದಯದ ವೇಳೆಗೆ ‘ಆರೋಗ್ಯಕರ ವೃದ್ದಾಪ್ಯಕ್ಕಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಎಸ್.ಜಿ. ಲಾ-ಕಾಲೇಜು ಆವರಣ(ಶೆಟ್ಟರ್ ಗುರುಶಾಂತಪ್ಪ ಲಾ ಕಾಲೇಜು ಮೈದಾನ)ವು ಯೋಗ ಪಟುಗಳಿಂದ ಕಂಗೊಳಿಸುತ್ತಿತ್ತು.
ಪೂರ್ವ ನಿಗದಿಯಂತೆ ಮುಂಜಾನೆ 7 ಗಂಟೆಯಿಂದಲೇ ನೆರೆದ ಸಾವಿರಾರು ಸಾರ್ವಜನಿಕರು ಸೂರ್ಯ ನಮಸ್ಕಾರ, ಪ್ರಾಣಾಯಾಮ ಹಾಗೂ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಅಧಿಕಾರಿಗಳು, ಸಿಬ್ಬಂದಿ, ಶಾಲಾ- ಕಾಲೇಜು ಮಕ್ಕಳು, ಹಿರಿಯ ನಾಗರಿಕರು, ಸಾರ್ವಜನಿಕರು ಎಲ್ಲರೂ ಒಂದೇ ಲಯದಲ್ಲಿ ಯೋಗ ಮಾಡಿ ಗಮನ ಸೆಳೆದರು.
ಪತಂಜಲಿ ಯೋಗ ಸಮಿತಿಯ ಜಿಲ್ಲಾ ಸಂಚಾಲಕ ಹಾಗೂ ಯೋಗ ತರಬೇತುದಾರ ಇಸ್ವಿ ಪಂಪಾಪತಿ ಅವರು ದೈನಂದಿನ ಜೀವನಕ್ಕೆ ಅಗತ್ಯವಿರುವ ಪ್ರಮುಖ ಆಸನಗಳ ಮಹತ್ವವನ್ನು ತಿಳಿಸಿಕೊಡುವ ಮೂಲಕ 45 ನಿಮಿಷಗಳ ಕಾಲ ಯೋಗಾಭ್ಯಾಸ ಮಾಡಿಸಿದರು.
ಯೋಗ ಎನ್ನುವುದು ಕೇವಲ ಕಸರತ್ತಲ್ಲ; ಅದು ನಮ್ಮ ಆತ್ಮವನ್ನು ಪ್ರಕೃತಿಯೊಂದಿಗೆ ಜೋಡಿಸುವ ಅದ್ಭುತ ಕಲೆ. ಇಂದಿನ ಒತ್ತಡದ ಜಗತ್ತಿಗೆ ಯೋಗವೇ ಸಂಜೀವಿನಿ ಎಂದು ತಿಳಿಸಿದರು.
ವರ್ಷದ 365 ದಿನಗಳೂ ಯೋಗವನ್ನು ನಮ್ಮ ಜೀವನದ ಒಂದು ಭಾಗವಾಗಿಸಿಕೊಳ್ಳಬೇಕು. ದಿನಕ್ಕೆ ಕೇವಲ 20 ರಿಂದ 30 ನಿಮಿಷಗಳ ಯೋಗಾಭ್ಯಾಸವು ನಮ್ಮನ್ನು ದೈಹಿಕವಾಗಿ ಸದೃಢ ಹಾಗೂ ಮಾನಸಿಕವಾಗಿ ಶಾಂತವಾಗಿಡಬಲ್ಲದು ಎಂಬ ಸಂಕಲ್ಪದೊಂದಿಗೆ ನೆರದಿದ್ದವರಿಗೆ ಯೋಗಾಭ್ಯಾಸ ನೆರವೇರಿಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 