ಸರ್ವಜ್ಞ ವಿದ್ಯಾಪೀಠದಲ್ಲಿ ವಿಶ್ವ ಯೋಗ ದಿನ ಆಚರಣೆ

ಸರ್ವಜ್ಞ ವಿದ್ಯಾಪೀಠದಲ್ಲಿ ವಿಶ್ವ ಯೋಗ ದಿನ ಆಚರಣೆ  International Yoga Day celebrated at Sarvajna Vidyapeeth

ತಾಳಿಕೋಟಿ 21: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ತಾಳಿಕೋಟೆಯಲ್ಲಿ ಇಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.  

ದೈಹಿಕ ಶಿಕ್ಷಕರಾದ ಬಸವರಾಜ ಚಳಗಿ ಮತ್ತು ಶಾಂತಗೌಡ ಬಿರಾದಾರ ವಿದ್ಯಾರ್ಥಿಗಳಿಗೆ ಯೋಗಾಸನದ ವಿವಿಧ ಭಂಗಿಗಳನ್ನು ಹೇಳಿಕೊಟ್ಟರು.  

ಸಂಸ್ಥಾಪಕ ಅಧ್ಯಕ್ಷ ಸಿದ್ದನಗೌಡ ಮಂಗಳೂರ ಯೋಗದ ಕುರಿತು ಮಾತನಾಡಿ ಬೆಳಗ್ಗೆ ಬೇಗನೆ ಏಳುವುದನ್ನು ರೂಢಿಸಿಕೊಳ್ಳಬೇಕು. ಎದ್ದ ನಂತರ ಮುಖವನ್ನು ತೊಳೆದುಕೊಂಡು ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕು. ಮನುಷ್ಯನು ಆರೋಗ್ಯವಾಗಿತವಾಗಿದ್ದರೆ ಯೋಗವು ಕೂಡ ಪ್ರಮುಖವಾಗಿ ಬೇಕೇ ಬೇಕಾಗುತ್ತದೆ. ಅದಕ್ಕಾಗಿ ವಿದ್ಯಾರ್ಥಿಗಳು ಯೋಗಾಭ್ಯಾಸವನ್ನು ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು. ಮುಖ್ಯಗುರುಗಳಾದ ಸಂತೋಷ ಪವಾರ, ರಾಜು ಜವಳಗೇರಿ, ಭೀಮನಗೌಡ ಸಾಸನೂರ, ರಸೂಲಸಾ ತುರ್ಕನಗೇರಿ, ರವಿಕುಮಾರ ಮಲ್ಲಾಬಾದಿ, ಬಸವರಾಜ ಸವದತ್ತಿ, ಸಿದ್ದನಗೌಡ ಮೂದನೂರು, ಸಂಗಮೇಶ ಬಿರಾದಾರ, ಶರಣಗೌಡ ಕಾಚಾಪುರ, ಸಂಜೀವಕುಮಾರ ರಾಠೋಡ, ರೂಪಾ ಪಾಟೀಲ, ಶಿವಲೀಲಾ ಚುಂಚನೂರ, ದೇವಿಂದ್ರ ಗುಳೆದ, ಅನಿತಾ ಚೌದ್ರಿ, ಸಂಗೀತ ಬಿರಾದಾರ, ಶಿವಕುಮಾರ ಕುಂಬಾರ, ಮೇಘ ಪಾಟೀಲ, ರಾಜಬಿ ಬಿದರಿ, ತನುಶ್ರೀ ಮಹೇಂದ್ರಕರ್, ಮಾರುತಿ ಕಾರ್ಬಾರಿ, ದೇವರಾಜ್ ದೇಸಾಯಿ, ಶಂಕ್ರಮ್ಮ ಕುರ್ದಹಳ್ಳಿ, ನಾಗರತ್ನ ಮೈಲೇಶ್ವರ, ಮುಬಿನ ಮುರಾಳ, ಬೋರಮ್ಮ ಜ್ಯೋತಿ ಪೊಲೀಸ ಪಾಟೀಲ, ಶೃತಿ ಚೌದರಿ,ರವಿಕುಮಾರ ಅನದಿನ್ನಿ, ಕುಮಾರ ಮೊಕಾಶಿ, ಹೀನಾಕೌಸರ ಸನದಿ, ಮುಬಾರಕ ಬನಹಟ್ಟಿ, ವಿಶ್ವನಾಥ್ ಭಜಂತ್ರಿ ಹಾಗೂ ಸರ್ವ ಗುರು ಬಳಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.