ಜೆ.ಎಸ್‌.ಎಸ್‌.ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಜೆ.ಎಸ್‌.ಎಸ್‌.ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ International Yoga Day Celebration at JSS

ಲೋಕದರ್ಶನ ವರದಿ 

ಧಾರವಾಡ 20 : ಜೆ.ಎಸ್‌.ಎಸ್‌. ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯಲ್ಲಿ 20/06/2026 ರಂದು ಯೋಗ ದಿನವನ್ನು ಅರ್ಥಪೂರ್ಣವನ್ನಾಗಿ ಆಚರಿಸಲಾಯಿತು. ಶಾಲಾ ಪ್ರಾಚಾರ್ಯೆ ರಜನೀ ಪಾಟೀಲ್ ಇವರು ಆರ್ಟ ಆಫ್ ಲಿವಿಂಗ್‌ನ ಯೋಗ ಗುರು ಉಮಾ ಜೋಶಿ, ಶಿಕ್ಷಕರು ಹಾಗೂ ಮಕ್ಕಳನ್ನು ಸ್ವಾಗತಿಸುತ್ತಾ ಯೋಗ ಹಾಗೂ ಧ್ಯಾನ ನಮ್ಮ ಭಾರತದ ಶ್ರೇಷ್ಠ ಕೊಡುಗೆಗಳು. ಪ್ರತಿಯೊಬ್ಬರೂ ಯೋಗ ಹಾಗೂ ಧ್ಯಾನವನ್ನು ಜೀವನದ ದಿನಚರಿಯಾಗಿಸಿಕೊಳ್ಳಬೇಕು. ಆಸನಗಳ ಮಹತ್ವವನ್ನು ಅರಿತು ಪ್ರತಿಯೊಬ್ಬರು ಆಸನಗಳನ್ನು ಮಾಡಬೇಕು ಎಂದರು. ಶಾಲೆಯ 3000 ಮಕ್ಕಳು ಹಾಗೂ ಶಿಕ್ಷಕ ವೃಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆರ್ಟ ಆಫ್ ಲಿವಿಂಗ್‌ನ ಧಾರವಾಡದ ಯೋಗ ಗುರು ಉಮಾ ಜೋಶಿ ಓಂ ಮಂಜುನಾಥಾಯ ನಮಃ ಹಾಗೂ ಓಂಕಾರದ ಧ್ಯಾನದೊಂದಿಗೆ ಮಕ್ಕಳಿಗೆ ಯೋಗ ಆರಂಭಿಸಿ, ಸೂರ್ಯ ನಮಸ್ಕಾರ, ವಜ್ರಾಸನ, ತಾಡಾಸನ, ವೃಕ್ಷಾಸನ ಮುಂತಾದ ಆಸನಗಳನ್ನು ಕಲಿಸಿದರು. ಅಲ್ಲದೇ ಒತ್ತಡ ನಿವಾರಣೆಯಲ್ಲಿ ಯೋಗಾಸನ ಹಾಗೂ ಧ್ಯಾನದ ಮಹತ್ವ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ಅಕ್ಷತಾ ಪುರಾಣಿಕ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.